ಕೋಟಾ ಶ್ರೀ ಸೀತಾ ರಾಮಾಂಜನೇಯ ದೇವಾಲಯದಲ್ಲಿ ಶ್ರೀ ರಾಮತಾರಕ ಹೋಮದಲ್ಲಿ ಪಾಲ್ಗೊಂಡ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಅಭಿವೃದ್ಧಿ ಸಚಿವ ಈಶ್ವರಪ್ಪ ಬಾಬರಿಯಂತೆ ಮಥುರಾ, ಕಾಶಿಯಲ್ಲಿರುವ ಮಸೀದಿಗಳನ್ನೂ ತೆರವುಗೊಳಿಸಬೇಕು ಎಂದು ಹೇಳಿಕೆ ನೀಡಿದ್ದಾರೆ.
ಅಯೋಧ್ಯೆ, ಕಾಶಿ, ಮಥುರಾದಲ್ಲಿ ದೇವಾಲಯಗಳನ್ನು ಧ್ವಂಸಗೊಳಿಸಿ ಮಸೀದಿಯನ್ನು ನಿರ್ಮಿಸಲಾಗಿದೆ. ಅಲ್ಲಿ ಮಸೀದಿಗಳಿರುವುದು ಗುಲಾಮಗಿರಿಯ ಸಂಕೇತ. ಅಯೋಧ್ಯೆಯಲ್ಲಿ ಆ ಗುಲಾಮಗಿರಿಯ ಸಂಕೇತವನ್ನು ಧ್ವಂಸಗೊಳಿಸಿದಾಗ ನಾವು ಸಂಭ್ರಮ ಪಟ್ಟಿದ್ದೇವೆ. ಇನ್ನು ಕಾಶಿ, ಮಥುರಾದಲ್ಲೂ ಗುಲಾಮಗಿರಿಯ ಸಂಕೇತವಾದ ಮಸೀದಿಯನ್ನು ತೆರವುಗೊಳಿಸಬೇಕೆಂದು ಈಶ್ವರಪ್ಪ ಹೇಳಿರುವುದು ಸಾಕಷ್ಟು ವಿವಾದ ಸೃಷ್ಟಿಸಿದೆ.
ಈ ಮಸೀದಿಗಳು ನಮ್ಮನ್ನು ಗುಲಾಮ ಎಂದು ಅಣಕಿಸುತ್ತದೆ. ನಾವು ಕಾಶಿ ಹಾಗೂ ಮಥುರಾಗಳಲ್ಲಿ ಶೃದ್ದೆಯಿಂದ ಪೂಜೆ ಸಲ್ಲಿಸಬೇಕೆಂದರೆ ಅಲ್ಲಿರುವ ಮಸೀದಿಗಳನ್ನು ತೆರವುಗೊಳಿಸಬೇಕು ಎಂದು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವಂತೆ ಕಾಶಿಯಲ್ಲಿ ವಿಶ್ವನಾಥ ಹಾಗೂ ಮಥುರಾದಲ್ಲಿ ಕೃಷ್ಣನ ಭವ್ಯವಾದ ದೇವಸ್ಥಾನ ನಿರ್ಮಿಸಬೇಕಾಗಿದೆ. ಅಯೋಧ್ಯೆಗೆ ನಾನೂ ಕೂಡಾ ಕರಸೇವಕನಾಗಿ ಭಾಗವಹಿಸಿದ್ದೆ. ಅವತ್ತಿಗಿಂತಲೂ ಇಂದು ನಾವು ಸಂಭ್ರಮಪಟ್ಟಿದ್ದೇವೆ.
Also Read: ಭಾಗ- 2: ಬಾಬರಿ ಮಸೀದಿ- ರಾಮ ಜನ್ಮಭೂಮಿ ರಾಜಕೀಯ ವಿವಾದದಲ್ಲಿ ಎದ್ದವರು- ಬಿದ್ದವರು
Also Read: ಭಾಗ- 1: ಬಾಬ್ರಿ ಮಸೀದಿ- ರಾಮ ಜನ್ಮಭೂಮಿ ರಾಜಕೀಯ ವಿವಾದದಲ್ಲಿ ಎದ್ದವರು- ಬಿದ್ದವರು.