2019 ಕ್ಕೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿಯವರ ನಿವ್ವಳ ಮೌಲ್ಯವು 2020 ರಲ್ಲಿ 36 ಲಕ್ಷ ರೂ.ಗಳಷ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಕಚೇರಿಗೆ (PMO) ಸಲ್ಲಿಸಿದ ಆಸ್ತಿ ಘೋಷಣೆಗಳು ತೋರಿಸಿಕೊಟ್ಟಿವೆ. ಆದಾಗ್ಯೂ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ನಿವ್ವಳ ಮೌಲ್ಯವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆ ಆಗಿದೆ.
ಪ್ರಧಾನಿ ಮೋದಿಯವರ ಇತ್ತೀಚಿನ ಆಸ್ತಿ ಘೋಷಣೆಯ ಪ್ರಕಾರ, ನಿವ್ವಳ ಮೌಲ್ಯವು ಜೂನ್ 30, 2020 ರ ವೇಳೆಗೆ 2.85 ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷ ಈ ಮೌಲ್ಯ 2.49 ಕೋಟಿ ರೂಪಾಯಿಯಷ್ಟಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಧಾನಿ ಮೋದಿಯವರ ಕೈಯಲ್ಲಿ ನಗದು ಕೇವಲ 31,450 ರೂ. ಇದೆ. ಬ್ಯಾಂಕ್ ಠೇವಣಿಯಾಗಿ 3,38,173 ರುಪಾಯಿ ಇದೆ. ಮತ್ತು ಬ್ಯಾಂಕ್ ಸ್ಥಿರ ಠೇವಣಿ 1,60,28,939 ರೂ. ಇದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ 8,43,124 ಮೌಲ್ಯದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (NSC), 1,50,957 ರೂ.ಗಳ ಜೀವ ವಿಮಾ ಪಾಲಿಸಿಗಳು ಮತ್ತು 20,000 ರೂ ಮೌಲ್ಯದ ತೆರಿಗೆ ಉಳಿತಾಯ ಇನ್ಫ್ರಾ ಬಾಂಡ್‌ಗಳನ್ನು(Infra bonds) ಹೊಂದಿದ್ದಾರೆ. ಪ್ರಧಾನಿ ಮೋದಿ ಘೋಷಿಸಿದ ಚರಾಸ್ತಿಯ ಮೌಲ್ಯ ಸುಮಾರು 1.75 ಕೋಟಿ ರೂ.
ಪ್ರಧಾನಿ ಮೋದಿ ಅವರಿಗೆ ಯಾವುದೇ ಸಾಲವಿಲ್ಲ ಮತ್ತು ಅವರ ಹೆಸರಿನಲ್ಲಿ ಯಾವುದೇ ವೈಯಕ್ತಿಕ ವಾಹನಗಳಿಲ್ಲ. ಅವರು ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದು, ಅಂದಾಜು 45 ಗ್ರಾಂ ತೂಕವಿದೆ, ಇದರ ಮೌಲ್ಯ 1.5 ಲಕ್ಷ ರೂ. 3,531 ಚದರ ಅಡಿ ಅಳತೆಯ ಗಾಂಧಿನಗರದ ಸೆಕ್ಟರ್ -1 ರಲ್ಲಿ ಪಿಎಂ ಮೋದಿ ಜಂಟಿಯಾಗಿ ಒಂದು ಜಮೀನನ್ನು ಹೊಂದಿದ್ದಾರೆ ಎಂದು ಆಸ್ತಿ ಘೋಷಣೆ ಬಹಿರಂಗಪಡಿಸಿವೆ.
ಆದರೆ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಆಸ್ತಿಯ ನಿವ್ವಳ ಮೌಲ್ಯ ಕಳೆದ ಒಂದು ವರ್ಷದಲ್ಲಿ ಕಡಿಮೆಯಾಗಿದೆ. ಘೋಷಣೆಯ ಪ್ರಕಾರ, ಷಾ ತನ್ನ ನಿವ್ವಳ ಮೌಲ್ಯವನ್ನು ಜೂನ್ 2020 ರ ವೇಳೆಗೆ 28.63 ಕೋಟಿ ರೂ ಎಂದು ಘೋಷಿಸಿದ್ದಾರೆ, ಅದು 2019 ರಲ್ಲಿ 32.3 ಕೋಟಿ ರೂ. ಆಗಿತ್ತು.