ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿರುವ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಇಂದು ವಿಧಾನಸಭೆ ಅಧಿವೇಶನದಲ್ಲಿ ಸುದ್ದಿ ಪ್ರಸ್ತಾಪಿಸಿ ಚರ್ಚೆ ಮಾಡುವ ವೇಳೆ ಪ್ರತಿಯೊಬ್ಬ ರೈತ ಈಗ ಭಗತ್ ಸಿಂಗ್ ಆಗಿ ಹೋರಾಟ ಮಾಡುತ್ತಿದ್ದಾನೆ ಎನ್ನುವ ಮೂಲಕ ಅಧಿವೇಶನದಲ್ಲಿ ಆಕ್ರೋಶಗೊಂಡು ಕೃಷಿ ಕಾನೂನು ಪ್ರತಿಗಳನ್ನು ಹರಿದಿದ್ದು ರೈತರ ಪರ ಮಾತನಾಡಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ.
ಕೇಂದ್ರ ಸರ್ಕಾರ ಕಾರ್ಪೋರೇಟ್ ಸಂಸ್ಥೆಗಳ ಹಿತಾಸಕ್ತಿಗೆ ಅನುಕೂಲವಾಗುವಂತೆ ಕೆಲಸ ಮಾಡುತ್ತಿದ್ದು, ರೈತವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಸರ್ಕಾರ ಸರ್ವಾಧಿಕಾರ ಆಡಳಿತ ನಡೆಸುತ್ತಿದ್ದು, ಬ್ರಿಟೀಷರ ಕಾಲದ ರೈತ ವಿರೋಧಿ ಕಾನೂನುಗಳನ್ನು ನೆನೆದಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದೀಗ ಪ್ರತಿಯೊಬ್ಬ ರೈತ ತಮ್ಮ ಹಕ್ಕು ಸ್ವತಂತ್ರವನ್ನು ಪ್ರಶ್ನಿಸಿ ಭಗತ್ ಸಿಂಗ್ರಂತೆ ಹೋರಾಡುವ ಕಾಲ ಎದುರಾಗಿದೆ. ಪ್ರತಿನಿತ್ಯ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಆದರೆ ಕೇಂದ್ರ ಸರ್ಕಾರ ಮಾತ್ರ ಮೌನವಾಗಿಯೇ ಸಾವುನೋವುಗಳನ್ನ ನೋಡುತ್ತಾ ಕುಳಿತ್ತಿದ್ದು, ಇನ್ನೆಷ್ಟು ಸಾವಾಗ ಬೇಕೆಂದು ಕೇಂದ್ರ ಸರ್ಕಾರಕ್ಕೆ ನೇರ ಚಾಟಿ ಬೀಸಿದ್ದಾರೆ.
ಈಗಾಗಲೇ ಕೊವಿಡ್-19 ನಿಂದ ಸಮಾಜದಲ್ಲಿ ಸಾಕಷ್ಟು ಸಮಸ್ಯೆ ಇದ್ದು, ಅದನ್ನು ಬಗೆಹರಿಸುವುದು ಬಿಟ್ಟು ಕೃಷಿ ಕಾನೂನುಗಳ ತಿದ್ದುಪಡಿ ಮಾಡುವ ಮೂಲಕ ಆಡಳಿತ ಪಕ್ಷ ರಾಜಕೀಯದಲ್ಲಿ ಯಶಸ್ಸು ಸಾಧಿಸುವ ಉದ್ದೇಶದಿಂದ ಲಾಭಿ ಮಾಡ ಹೊರಟಿದೆ. ಸಂಸತ್ನಲ್ಲಿ ಮತ್ತೊಮ್ಮೆ ಮಸೂದೆಯನ್ನು ಮಂಡಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.