ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ಹೋರಾಟ ತೀವ್ರವಾಗಿದೆ. ಕೇಂದ್ರ ಸರ್ಕಾರ ಮುಸ್ಲಿಂ ಸಮುದಾಯದ ಜನರಿಗೆ ಯಾವುದೇ ತೊಂದರೆ ಇಲ್ಲ ಎಂದರೂ ಸಮಾಧಾನಗೊಳ್ಳದ ಮುಸ್ಲಿಂ ಸಮುದಾಯದ ಜನರು ಹಾಗು ಹಲವು ಪ್ರಗತಿ ಪರ ಸಂಘಟನೆಗಳು ಹೋರಾಟ ಮುಂದುವರಿಸಿವೆ. ಈ ನಡುವೆ ಪೌರತ್ವ ತಿದ್ದಪಡಿ ಕಾಯ್ದೆ ವಿರೋಧಿ ಹೋರಾಟಕ್ಕಾಗಿ ಮುಸ್ಲಿಂ ಸಮುದಾಯದ ಸಂಘಟನೆಯಾದ ಪಿಎಫ್ಐ ಹಾಗು ಅದರ ಸಹೋದರ ಸಂಘಟನೆಗಳ ಒಟ್ಟು 73 ಬ್ಯಾಂಕ್ ಖಾತೆಗಳಿಗೆ ಬರೋಬ್ಬರಿ 120.5 ಕೋಟಿ ಹಣ ಸಂಗ್ರಹವಾಗಿದೆ ಎನ್ನಲಾಗಿದೆ. ಇದನ್ನು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದ 04/12/2019 ರಿಂದ 06/01/20202 ರ ಅವಧಿಯಲ್ಲೇ ಜಮೆ ಆಗಿದೆ ಎನ್ನುವುದನ್ನ 2018ರಿಂದಲೇ ಪಿಎಫ್ಐ ವಿರುದ್ಧ ಹಣ ವಗಾವಣೆ (ಮನಿ ಲಾಂಡ್ರಿಂಗ್ ಕೇಸ್ )ನಲ್ಲಿ ತನಿಖೆ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎನ್ನಲಾಗಿದೆ.
ಪಿಎಫ್ಐ ಬ್ಯಾಂಕ್ ಖಾತೆಗೆ ಜಮೆಯಾದ ಹಣದಿಂದಲೇ ಉತ್ತರ ಪ್ರದೇಶದಲ್ಲಿ ಗಲಾಟೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಜೊತೆಗೆ ಕಾಂಗ್ರೆಸ್ ನಾಯಕ ಹಾಗು ಸುಪ್ರೀಂಕೋಟ್ ವಕೀಲ ಕಪಿಲ್ ಸಿಬಲ್ ಖಾತೆಗೆ 77 ಲಕ್ಷ ರೂಪಾಯಿ ಹಾಗು ವಕೀಲೆ ಇಂದಿರಾ ಜೈಸಿಂಗ್ ಖಾತೆಗೆ 4 ಲಕ್ಷ, ದುಶ್ಯಂತ್ ದುವೆ ಎಂಡಿ ಖಾತೆಗೆ 11 ಲಕ್ಷ ರೂಪಾಯಿ, ಅಬ್ದುಲ್ ಸಮದ್ ಖಾತೆಗೆ 3.10 ಲಕ್ಷ, ಜ್ಯೋತಿ ಗ್ರೂಪ್ ಖಾತೆಗೆ 1.17 ಕೋಟಿ, ಪಿಎಫ್ಐ ಕಾಶ್ಮೀರ ಖಾತೆಗೆ 1.65 ಕೋಟಿ ವರ್ಗಾವಣೆಯಾಗಿದೆ ಎನ್ನುವ ಮಾಹಿತಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದ್ರೆ ಈ ವರದಿಯನ್ನು ಮಾಧ್ಯಮಗಳಿಗೆ ಕೊಟ್ಟಿದ್ದು ಯಾರು..? ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆಯೇ ಇಲ್ಲ. ಅನಾಮಿಕ ವ್ಯಕ್ತಿಗಳು ಇದನ್ನು ಮಾಧ್ಯಮಗಳಿಗೆ ತಲುಪಿಸಿದ್ದಾರೆ ಎನ್ನಲಾಗಿದೆ.
ಪಿಎಫ್ಐನ ದೆಹಲಿ ವಿಭಾಗ ಮಾಧ್ಯಮಗಳ ವರದಿಯನ್ನು ಖಂಡಿಸಿದ್ದು, ನಮ್ಮ ಖಾತೆಗೆ ಕೋಟ್ಯಂತರ ರೂಪಾಯಿ ಬಂದಿದೆ ಎನ್ನುವ ಮಾಹಿತಿ ಆಧಾರ ರಹಿತವಾಗಿದೆ. ನಮ್ಮ ಸಂಘಟನೆಯನ್ನು ಇಡಿ ಅಧಿಕಾರಿಗಳು ಸಂಪರ್ಕಿಸಿಲ್ಲ. ಮಾಧ್ಯಮಗಳು ಆಧಾರ ರಹಿತವಾಗಿ ವರದಿ ಮಾಡಿದೆ. ಒಂದು ವೇಳೆ ಬ್ಯಾಂಕ್ ಖಾತೆಯಲ್ಲಿ ಹಣ ಇದೆ ಎಂದಾಕ್ಷಣ ಅಪರಾಧವಲ್ಲ. 2017ರಲ್ಲಿ ನಾವು ವಕೀಲರಿಗೆ ಹಣ ಸಂದಾಯ ಮಾಡಿದ್ದೇವೆ ಅದನ್ನು ಬಿಟ್ಟು ಯಾವುದೇ ಹಣವನ್ನೂ ನಾನು ಕೊಟ್ಟಿಲ್ಲ. ಅದೂ ಅಲ್ಲದೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದ ಬಳಿಕ ನಾವು ಯಾವುದೇ ಹಣವನ್ನೂ ವಕೀಲರಿಗೆ ಸಂದಾಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಇನ್ನು ಕಾಶ್ಮೀರ ವಿಭಾಗಕ್ಕೆ 1.65 ಕೋಟಿ ವರ್ಗಾವಣೆಯಾಗಿದೆ ಎಂದಿರುವ ಮಾಹಿತಿ ಶುದ್ಧ ಸುಳ್ಳು. ನಾವು ಜಮ್ಮು ಕಾಶ್ಮೀರದಲ್ಲಿ ಯಾವುದೇ ವಿಭಾಗ ಹೊಂದಿಲ್ಲ. ನಾವು ಜಮ್ಮು ಕಾಶ್ಮೀರದಲ್ಲಿ ಯಾವುದೇ ಚಟುವಟಿಕೆ ನಡೆಸಿಲ್ಲ, ಕಳೆದ ಬಾರಿ ಪ್ರವಾಹ ಬಂದಾಗ ಕಾಶ್ಮೀರದಲ್ಲಿ 100ಕ್ಕೂ ಹೆಚ್ಚು ಮನೆಗಳನ್ನು ನಿಮಿಸಿ ಹಂಚಿದ್ದೇವೆ ಅಷ್ಟೇ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಈ ನಡುವೆ ಸುಪ್ರೀಂಕೋರ್ಟ್ ವಕೀಲೆ ಇಂದಿರಾ ಜೈಸಿಂಗ್ ಮಾಧ್ಯಮಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮಾಧ್ಯಮಗಳಲ್ಲಿ ಬರುತ್ತಿರುವ ಎಲ್ಲಾ ವರದಿಗಳು ಆಧಾರ ರಹಿತವಾಗಿದ್ದು, ಇದರ ಮೂಲ ಸಂಸ್ಥೆ ಯಾವುದು ಅನ್ನೋದಕ್ಕೆ ಮಾಹಿತಿಯೇ ಇಲ್ಲ. ಆ ವರದಿಯಲ್ಲಿ ಸಹಿಯೂ ಇಲ್ಲ. ನನ್ನನ್ನು ತೇಜೋವಧೆ ಮಾಡುವ ಉದ್ದೇಶದಿಂದ ಈ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡಲಾಗ್ತಿದೆ. ನಾನು ಕಾನೂನು ರೀತ್ಯ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ. ಇದೇ ರೀತಿ ಕಾಂಗ್ರೆಸ್ ನಾಯಕರ ಹಾಗು ಸುಪ್ರೀಂಕೋರ್ಟ್ ವಕೀಲ ಕಪಿಲ್ ಸಿಬಲ್ ಕೂಡ ಆಧಾರ ರಹಿತವಾದ ವರದಿ ಇದಾಗಿದ್ದು, ಯಾವುದೇ ಹಣವನ್ನೂ ನಾನು ಪಡೆದಿಲ್ಲ. 2018ಕ್ಕೂ ಮೊದಲು ಕೇರಳದ ಒಂದು ಪ್ರಕಟಣದಲ್ಲಿ ವಾದಿಸಿದ್ದಕ್ಕೆ ಫೀ ಅಷ್ಟೇ ಪಡೆದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಆದ್ರೆ ಬ್ಯಾಂಕ್ ಖಾತೆಗೆ ಹಣ ಹಾಕುವುದು ಅಪರಾಧವಲ್ಲ. ಯಾರು ಬೇಕಾದರೂ ಯಾರ ಖಾತೆಗಾದರೂ ಹಣ ಹಾಕಬಹುದು. ಪಿಎಫ್ಐ ಹಾಗು ಎಸ್ಡಿಪಿಐ ಸಂಘಟನೆಗಳು ಸೇರಿದಂತೆ ಬೇರೆ ಸಂಘಟನೆಗಳ ಖಾತೆಗೆ ಬಂದಿರುವ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಬಂದಿದ್ದರೂ ಅದು ಅಕ್ರಮವಲ್ಲ. ಯಾಕೆಂದರೆ ಹಣ ಅಕ್ರಮ ಎಂದಿಲ್ಲ. ಹಣ ಬಂದಿದೆ ಎನ್ನಲಾಗಿದೆ ಅಷ್ಟೆ. ಈ ಮಾಹಿತಿ ಎಷ್ಟು ಸತ್ಯ. ಈ ವರದಿಯನ್ನು ಬಿಡುಗಡೆ ಮಾಡಿದ್ದು ಯಾರು ಅನ್ನೋ ಮಾಹಿತಿ ಕೂಡ ಇಲ್ಲ. ಅಷ್ಟಕ್ಕೂ ಇಡಿ ಅಧಿಕಾರಿಗಳು ವರದಿಯನ್ನು ತನ್ನ ವೆಬ್ ಸೈಟ್ನಲ್ಲಿ ಪ್ರಕಟಿಸಿಲ್ಲ. ಇದೊಂದು ಸುಳ್ಳು ಮಾಹಿತಿ. ಯಾವುದೋ ಒಂದು ವಿಚಾರದ ಕಡೆಗೆ ಮಾಧ್ಯಮಗಳನ್ನು ಸೆಳೆಯುವ ಉದ್ದೇಶದಿಂದಲೇ ಹೀಗೆ ಮಾಡಲಾಗಿದೆ. ಯಾವುದೇ ಪರಿಶೀಲನೆ ಮಾಡುವ ಗೋಜಿಗೆ ಹೋಗದ ದೃಶ್ಯ ಮಾಧ್ಯಮಗಳು ಪ್ರಸಾರ ಮಾಡುತ್ತಿವೆ ಎನ್ನಲಾಗ್ತಿದೆ. ಒಟ್ಟಾರೆ ಮುಸ್ಲಿಂ ಸಂಘಟನೆಗಳು ಎನ್ನುವ ಕಾರಣಕ್ಕೆ ಪಿಎಫ್ಐ ಹಾಗು ಎಸ್ಡಿಪಿಐ ಸಂಘಟನೆಗಳ ಮೇಲೆ ಜಿದ್ದು ಸಾಧಿಸುತ್ತಿರುವ ಬಿಜೆಪಿ ಸರ್ಕಾರವೇ ಇಷ್ಟಕ್ಕೆಲ್ಲಾ ಕಾರಣ ಎನ್ನುವ ಆರೋಪವೂ ಇದೆ.
ಮೈಸೂರಿನಲ್ಲಿ ತನ್ವೀರ್ ಸೇಠ್ ಮೇಲೆ ಹಲ್ಲೆಯಾಗಿತ್ತು. ಕಾಂಗ್ರೆಸ್ ಶಾಸಕನ ಹತ್ಯೆಗೆ ಪಿಎಫ್ಐ ಸಂಘಟನೆಯ ವ್ಯಕ್ತಿ ಕೊಲೆಗೆ ಯತ್ನ ಮಾಡಿದ್ದಾನೆ ಅನ್ನೋ ಬಗ್ಗೆ ಸಾಕಷ್ಟು ವರದಿಯಾಗಿತ್ತು. ಆದ್ರೆ ಪೊಲೀಸರು ಸಿದ್ಧ ಮಾಡಿರುವ ಚಾರ್ಜ್ಶೀಟ್ನಲ್ಲಿ ಪಿಎಫ್ಐ, ಎಸ್ಡಿಪಿಐ ಸಂಘಟನೆ ಬಗ್ಗೆ ಒಂದೇ ಒಂದು ಅಕ್ಷರವಿಲ್ಲ. ಅದೇ ರೀತಿ ಪೌರತ್ವ ತಿದ್ದುಪಡಿ ಪರ ಹೋರಾಟ ಮಾಡಿ ಮನೆಗೆ ಹೋಗುತ್ತಿದ್ದ ವ್ಯಕ್ತಿ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿದ್ದು. ಆಗಲೂ ಸಹಯ ಸಂಸದ ತೇಜಸ್ವಿ ಸೂರ್ಯ ಹಾಗು ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಪಿಎಫ್ಐ ಹಾಗು ಎಸ್ಡಿಪಿಐ ಸಂಚು ರೂಪಿಸಿವೆ ಎಂದು ವರದಿ ಮಾಡಲಾಗಿತ್ತು.
ಆದರೆ ಪೊಲೀಸರ ದಾಖಲೆಯಲ್ಲಿ ಪಿಎಫ್ಐ ಹಾಗು ಎಸ್ಡಿಪಿಐ ಸಂಘಟನೆ ಬಗ್ಗೆ ಯಾವುದೇ ಆರೋಪವಿಲ್ಲ. ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸಲಾಗ್ತಿದೆ. ನಾವು ಭಾರತದ ಸಂವಿಧಾನದ ಕಾನೂನು ಗೌರವಿಸುತ್ತೇವೆ. ಕಾನೂನು ಪಾಲಿಸುತ್ತೇವೆ, ಅದರಂತೆಯೇ ನಡೆಯುತ್ತೇವೆ ಎನ್ನುತ್ತಾರೆ ಸಂಘಟನೆಯ ಸದಸ್ಯರು.