ಪಶ್ಚಿಮಬಂಗಾಳದ ವಿಧಾನಸಭೆ ಚುನಾವಣೆ ಆಡಳಿತ ಪಕ್ಷದ ಮತ್ತು ವಿರೋಧ ಪಕ್ಷಗಳಿಗೆ ಸವಾಲಾಗಿ ಪರಿಣಮಿಸಿದೆ. ಮುಖ್ಯಮಂತ್ರಿ ಮಮತ ಬ್ಯಾನರ್ಜಿ ನೇತೃತ್ವದ ಆಡಳಿತ ಪಕ್ಷಕ್ಕಿದು ಕಂಟಕವಾಗಿ ಎದುರಾಗಿದೆ. ಈಗಾಗಲೇ ಪ್ರಮುಖ ನಾಯಕರು ಟಿಎಂಸಿ ಪಕ್ಷವನ್ನು ತೊರೆದಿದ್ದು, ಇಂದು ಸುವೆಂದು ಅಧಿಕಾರಿ ಸೇರಿದಂತೆ ರಾಜಿನಾಮೆ ನೀಡಿದ ಅನೇಕರು ಬಿಜೆಪಿ ಸೇರಿದ್ದಾರೆ. ಮತ್ತೊಮ್ಮೆ ದೀದಿ ಸರ್ಕಾರಕ್ಕೆ ಬಿಸಿ ತಟ್ಟಿದ್ದು, ಈ ಚುನಾವಣೆಯಲ್ಲಿನ ಗೆಲುವು ಸವಾಲಾಗಿದೆ.
ಅಮಿತ್ ಷಾ ಪಶ್ಚಿಮ ಬಂಗಾಳ ಭೇಟಿ ನೀಡಿದ ಬೆನ್ನಲ್ಲೆ ಟಿಎಂಸಿ ಪಕ್ಷದಿಂದ 6 ಜನ ಎಂ.ಎಲ್.ಎ, ಸಿಪಿಐಎಂ ನಿಂದ ಒಬ್ಬರು, ಸಿಪಿಐ ನಿಂದ ಒಬ್ಬರು, ಕಾಂಗ್ರೆಸ್ ನಿಂದ ಒಬ್ಬರು ಪಕ್ಷ ತೊರೆದು ಬಿಜೆಪಿ ಸೇರುವ ಮೂಲಕ ಭಾರತೀಯ ಜನತಾ ಪಾರ್ಟಿಗೆ ಹೆಚ್ಚು ಬಲ ತಂದುಕೊಟ್ಟಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
1. Banasree Maity- Contai North MLA (TMC) ಬನಶ್ರಿ ಮೈತಿ – ಕಾನ್ಟೈ ನಾರ್ಥ್ (ಟಿಎಂಸಿ)
2. Tapasi Mondal – Haldiya Purba MLA (CPIM) ತಪಸಿ ಮೊಂಡಲ್ ಹಲ್ಡಿಯಾ ಪುರಬಾ ಎಂಎಲ್‌ಎ (ಸಿಪಿಐಎಂ)
3. Ashok Dinda – Tamluk MLA (CPI) ಅಶೋಕ್ ದಿನಾ –ತಂಲುಕ್ ಎಂಎಲ್‌ಎ(ಸಿಪಿಐ)
4. Sudip Mukherjee – Purulia (Congress) ಸುದೀಪ್ ಮುಖರ್ಜಿ – ಪುರುಲಿಯಾ (ಕಾಂಗ್ರೆಸ್)
5. Biswajit Kundu – Kalna (TMC) ಬಿಸ್ವಜಿತ್ ಕುಂದು ಕಲ್ನಾ(ಟಿಎಂಸಿ)
6. Saikat Panja – Burdwan Purba (TMC) ಸೈಕತ್ ಪಂಜ – ಬುರ್ದ್ವಾನ್ ಪುರ್‌ಬಾ(ಟಿಎಂಸಿ)
7. Shilbhadra Dutta – Barrackpore (TMC) ಶೀಲಭದ್ರ ದುತ್ತಾ – ಬ್ಯಾರಕ್ಪುರ್(ಟಿಎಂಸಿ)
8. Dipali Biswas – Gajol, Maldah (TMC) ದಿಪಳಿ ಬಿಸ್ವ್ಸ್ ಗಜೋಲ್, ಮಲ್ದಹ (ಟಿಎಂಸಿ)
9. Sukra Munda – Nagarkata, ಸುಕ್ರ ಮುನ್‌ಡಾ ನಾಗರ್ಕಟ
Jalpaiguri (TMC) ಜಲ್ಪೈಗುರು (ಟಿಎಂಸಿ) ಸೇರಿದಂತೆ ಬುರ್ದ್ವಾನ್ ಟಿಎಂಪಿಸಿ ಎಂಪಿ ಸುನಿಲ್, ಸುವೆಂದು ಅಧಿಕಾರಿ ರಾಜಿನಾಮೆ ನೀಡಿದ್ದಾರೆ.
ಅಮಿತ್ ಷಾ ಎರಡುದಿನಗಳ ಕಾಲ ಪಶ್ಚಿಮಬಂಗಾಳದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದು, ವಿವೇಕಾನಂದ ವಂಶಸ್ಥರ ಮನೆ, ಸಿದ್ದೇಶ್ವರಿ ಕಾಳಿ ದೇವಸ್ಥಾನ, ರಾಮಕೃಷ್ಣ ಆಶ್ರಮಕ್ಕೆ ಕಾಂತ್ರಿಕಾರಿ ಹೋರಾಟಗಾರ ಖುದಿರಾಮ್ ಬೋಸ್ ಮನೆಗೆ ಭೇಟಿನೀಡಿ ಮತ್ತೆ ಬೆಲಿಜುರಿ ಗ್ರಾಮದ ರೈತರ ಮನೆಗೆ ಭೇಟಿ ನೀಡಿ ಊಟಮಾಡಿದ್ದಾರೆ. ನಂತರ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ.
ಫಶ್ಚಿಮ ಬಂಗಾಳದ ಜನತೆ ಮೂರು ದಶಕಗಳ ಕಾಂಗ್ರೆಸ್ಗೆ ಅಧಿಕಾರ ನೀಡಿದ್ದರು. 27 ವರ್ಷಗಳ ಕಾಲ ಕಮ್ಯುನಿಸ್ಟ್ರಿಗೆ 10 ವರ್ಷಗಳ ಕಾಲ ಬ್ಯಾನರ್ಜಿ ಸರ್ಕಾರಕ್ಕೆ ಅಧಿಕಾರ ನೀಡಿದ್ದೀರಿ ಇದೀಗ 5 ವರ್ಷ ನಮ್ಮ ಪಕ್ಷಕ್ಕೆ ಅಧಿಕಾರ ಕೊಡಿ ಸಮಸ್ಯೆಯನ್ನು ಪರಿಹರಿಸಿ ಬಂಗಾಳವನ್ನು ಬಂಗಾರವನ್ನಾಗಿ ಮಾಡುತ್ತೇವೆಂದು ರ್ಯಾಲಿಯನ್ನುದ್ದೇಶಿಸಿ ಅಮಿತ್ ಶಾ ಮಾತನಾಡಿದ್ದಾರೆ. ಪಶ್ಚಿಮಬಂಗಾಳದ ಇತರೆ ಸರ್ಕಾರಗಳಿಗೆ ಇದೊಂದು ಸವಾಲಾಗಿ ಪರಿಣಮಿಸಿದೆ.ಷಾ ಹೇಳಿದಂತೆ ಪಶ್ಚಿಮಬಂಗಾಳದ ಈಬಾರಿಯ ವಿಧಾನಸಭೆ ಚುನಾವಣೆಯಲ್ಲಿ 294 ಸ್ಥಾನಗಳಲ್ಲಿ 200 ಸ್ಥಾನಗಳನ್ನು ಗೆದ್ದುಕೊಂಡು ಅಧಿಕಾರಕ್ಕೆ ಬರುತ್ತೇವೆಂದು ಭರವಸೆಯನ್ನು ನೀಡಿದ್ದಾರೆ.