ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ತೇರ್ಗಡೆಗೊಳಿಸಬಾರದು ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಸರ್ಕಾರ ಪದವಿ ಪರೀಕ್ಷೆಗಳನ್ನು ಮುಂದೂಡಬಹುದೇ ಹೊರತು ರದ್ದು ಪಡಿಸಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಪರೀಕ್ಷೆಯನ್ನು ಸೆಪ್ಟಂಬರ್ 30 ರ ಬಳಿಕವಾದರೂ ನಡೆಸಬೇಕು. ಕೋವಿಡ್ ಸಂಕಷ್ಟದ ಕಾರಣವಿಟ್ಟುಕೊಂಡು ಯಾವುದೇ ಕಾರಣಕ್ಕೂ ಅಂತಿಮ ಪದವಿ ವಿದ್ಯಾರ್ಥಿಗಳ ಪರೀಕ್ಷೆ ನಡೆಸದೆ ತೇರ್ಗಡೆಗೊಳಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೋವಿಡ್ ಕಾರಣಕ್ಕಾಗಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಹಲವಾರು ಮನವಿ ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಬಂದಿದ್ದವು. ಮಹಾರಾಷ್ಟ್ರ ಯುವಸೇನಾ ಮಂತ್ರಿ ಆದಿತ್ಯ ಠಾಕ್ರೆ ಕೂಡಾ ಅರ್ಜಿ ಸಲ್ಲಿಸಿದ್ದರು. ಐದು ಸೆಮಿಸ್ಟರ್‌ಗಳ ಸಂಚಿತ ಅಂಕಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಗೊಳಿಸಬೇಕೆಂದು ಅರ್ಜಿಗಳಲ್ಲಿ ವಿನಂತಿಸಿಕೊಳ್ಳಲಾಗಿತ್ತು.
ಆದರೆ ತೇರ್ಗಡೆಗೊಳಿಸಲು ಆಂತರಿಕ ಪರೀಕ್ಷೆಗಳ ಅಂಕಗಳು ಸಾಕಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಸುರಕ್ಷತೆಯ ದೃಷ್ಟಿಯಿಂದ ಪರೀಕ್ಷೆಗಳು ಅತ್ಯಗತ್ಯ ಹಾಗೂ ಪರೀಕ್ಷೆಗಳಿಲ್ಲದೆ ಪದವಿಯನ್ನು ನೀಡಲಾಗುವುದಿಲ್ಲ ಎಂದು UGC ಹೇಳಿತ್ತು. ಅಲ್ಲದೆ ಸೆಪ್ಟಂಬರ್ 30 ರೊಳಗೆ ಪದವಿ ಪರೀಕ್ಷೆಗಳು ನಡೆಯಬೇಕೆಂದೂ ಎಂದು ಹೇಳಿತ್ತು. ಆದರೆ ಸುಪ್ರೀಂ ಕೋರ್ಟ್ ಸೆಪ್ಟಂಬರ್ 30ರ ಗಡುವಿಗೆ ವಿನಾಯಿತಿ ನೀಡಿದೆ. ಅದೇ ವೇಳೆ ಇದೇ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆಗಳು ನಡೆಯಬೇಕೆಂದೂ ಹೇಳಿದೆ.