ಮೈಸೂರಿನ ಮುಡಾ ಅಕ್ರಮ ನಿವೇಶನಗಳ ಹಂಚಿಕೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪಿ.ಎನ್.ದೇಸಾಯಿಯವರನ್ನು ಈಗಾಗಲೇ ಡಿಬಾರ್ ಮಾಡಿದ್ದರೂ ಅವರು ಅದೇ ಸ್ಥಾನದಲ್ಲಿ ಮುಂದುವರೆದಿರುವ ಬಗ್ಗೆ ಸ್ನೇಹಮಯಿ ಕೃಷ್ಣ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ದೂರು ನೀಡಿರುವ ಸ್ನೇಹಮಯಿ ಕೃಷ್ಣ, ನಿವೃತ್ತ ನ್ಯಾಯಮೂರ್ತಿ ಶ್ರೀ ಪದ್ಮರಾಜ್ ನೇಮಚಂದ್ರ ದೇಸಾಯಿ (ಶ್ರೀ ಪಿ.ಎನ್.ದೇಸಾಯಿ) ರವರನ್ನು ದಿನಾಂಕ: 07.11.2024 ರಂದು “ಡಿಬಾರ್” ಮಾಡಿರುವುದನ್ನು ಪರಿಗಣಿಸಿ. ಕೂಡಲೇ ಅವರನ್ನು ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನೆ ಮಾಡಿರುವ ಏಕಸದಸ್ಯ ಆಯೋಗದ ಅಧ್ಯಕ್ಷರನ್ನಾಗಿ ಮಾಡಿರುವ ಆದೇಶವನ್ನು ಕೂಡಲೇ ರದ್ದುಗೊಳಿಸಿ ಎಂದು ಕೋರಿದ್ದಾರೆ.
ಪಿ.ಎನ್ ದೇಸಾಯಿಯವರಿಗೆ ನೀಡಿರುವ ಮೂಡಾ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಸರ್ಕಾರದ ವಶಕ್ಕೆ ಪಡೆದುಕೊಂಡು ಡಿಬಾರ್ ಆಗಿರುವ ವಿಚಾರ ಗೊತಿದ್ದರೂ ಕೂಡ ಆಯೋಗದ ಅಧ್ಯಕ್ಷರಾಗಿ ಮುಂದುವರೆದಿರುವ ಬಗ್ಗೆ, ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತು ಭಾರತ ಸರ್ಕಾರಕ್ಕೆ ವರದಿಯನ್ನು ನೀಡಿ, ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲು ಮನವಿ ಮಾಡುವ ಬಗ್ಗೆ ಮನವಿ ಮಾಡಿದ್ದಾರೆ.
ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಕ್ಷಮ ಪ್ರಾಧಿಕಾರದ ಸೂಚನೆ ಪ್ರಕಾರ ಭಾರತ ಸರ್ಕಾರವು ದಿನಾಂಕ:- 07.11.2024 ರಂದು ಎ-110113/1/2023-ಎಟಿ ಸಂಖ್ಯೆಯ ಆದೇಶವನ್ನು ಹೊರಡಿಸಿ. ಶ್ರೀ ಪದ್ಮರಾಜ್ ನೇಮಚಂದ್ರ ದೇಸಾಯಿ (ಶ್ರೀ ಪಿ.ಎನ್.ದೇಸಾಯಿ)ರವರನ್ನು ಯಾವುದೇ ಸಂಸ್ಥೆಯಲ್ಲಿ ನ್ಯಾಯಮೂರ್ತಿ ಗಳಾಗಿ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಬಾರದು ಎಂಬ ಸೂಚನೆಯನ್ನು ನೀಡಿ ಅವರನ್ನು ಡಿಬಾರ್ ಮಾಡಲಾಗಿರುತ್ತದೆ. ಮೇಲ್ಕಂಡಂತೆ ಡಿಬಾರ್ ಆದೇಶವನ್ನು ಹೊರಡಿಸಿದ್ದರೂ ಕೂಡ ಈ ವಿಚಾರವನ್ನು ಮುಚ್ಚಿಟ್ಟು ಕರ್ನಾಟಕ ರಾಜ್ಯ ಸರ್ಕಾರ ದಿಂದ ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನೆ ಮಾಡಿರುವ ಏಕಸದಸ್ಯ ಆಯೋಗದ ಅಧ್ಯಕ್ಷರಾಗಿ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ.
ಹೀಗಾಗಿ ಈ ಕೂಡಲೇ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ಹೋರಾಟಗಾರ ಸ್ನೇಹಮಯಿ ಕೃಷ್ಣ ದೂರು ದಾಖಲಿಸಿದ್ದಾರೆ.