• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ನಿರ್ಭಯಾ ಅತ್ಯಾಚಾರ ಪ್ರಕರಣ: ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ಪ್ರಕರಣದ ಘಟನಾವಳಿಗಳ ಸಂಪೂರ್ಣ ವಿವರ

by
February 14, 2020
in ದೇಶ
0
ನಿರ್ಭಯಾ ಅತ್ಯಾಚಾರ ಪ್ರಕರಣ: ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ಪ್ರಕರಣದ ಘಟನಾವಳಿಗಳ ಸಂಪೂರ್ಣ ವಿವರ
Share on WhatsAppShare on FacebookShare on Telegram

2012 ಡಿಸೆಂಬರ್ 16 ಬಹುಶಃ ಇದು ಭಾರತೀಯರು ಎಂದಿಗೂ ಮರೆಯದ, ಮರೆಯಲಾಗದ ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಎದುರು ತಲೆತಗ್ಗಿಸಿ ನಿಂತ ದಿನ. ದೆಹಲಿಯ ರಸ್ತೆಯಲ್ಲಿ ಚಲಿಸುವ ಬಸ್ಸಿನಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಅಲ್ಲದೆ, ಆಕೆಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿ ಸಾವಿನ ದವಡೆಗೆ ದೂಡಲಾಗಿತ್ತು.ಅದುವೇ ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ನಿರ್ಭಯಾ ಪ್ರಕರಣ.

ADVERTISEMENT

ಪ್ರಕರಣದ ಬೆನ್ನಿಗೆ ಆರೋಪಿಗಳನ್ನು ಬಂಧಿಸಲಾಯಿತು. ಇವರಿಗೆ ಸಾರ್ವಜನಿಕವಾಗಿ ಗುಂಡಿಕ್ಕುವಂತೆ ಜನಾಕ್ರೋಶವೂ ಭುಗಿಲೆದ್ದಿತ್ತೂ ಆದರೂ, ಕಳೆದ 7 ವರ್ಷಗಳಿಂದ ಸತತ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಇವರಿಗೆ ಗಲ್ಲುಶಿಕ್ಷೆ ವಿಧಿಸಿ ಡೆತ್ ವಾರೆಂಟ್ ಹೊರಡಿಸಿತ್ತು. ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಸಹ ಈ ಶಿಕ್ಷೆಯನ್ನು ಖಾಯಂಗೊಳಿಸಿದೆ. ಅಲ್ಲಿಗೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆತಂತಾದರೂ, ಈವರೆಗೆ ಇವರನ್ನು ಗಲ್ಲಿಗೆ ಏರಿಸದಿರುವುದು ಇದೀಗ ರಾಷ್ಟ್ರವ್ಯಾಪಿ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಘಟನೆ ನಡೆದ ದಿನದಿಂದ ಈವರೆಗೆ ಯಾವ ಯಾವ ಕಾಲಘಟ್ಟದಲ್ಲಿ ಏನೆಲ್ಲಾ ಪ್ರಮುಖ ಘಟನೆಗಳು ನಡೆದಿವೆ ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಡಿಸೆಂಬರ್ 16, 2012: ಗೆಳೆಯನ ಜೊತೆ ಖಾಸಗಿ ಬಸ್ನಲ್ಲಿ ಸಂಚರಿಸುತ್ತಿದ್ದ ಅರೆವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಆರು ಜನರ ತಂಡ ಅತ್ಯಾಚಾರವೆಸಗಿ ಮಾರಣಾಂತಿಕ ಹಲ್ಲೆ ನಡೆಸಿ ಕೊನೆಗೆ ಚಲಿಸುತ್ತಿದ್ದ ವಾಹನದಿಂದ ಇಬ್ಬರನ್ನೂ ಹೊರಗೆ ಎಸೆದಿದ್ದರು. ಇದನ್ನು ನೋಡಿದ್ದ ಸ್ಥಳೀಯರು ಇಬ್ಬರನ್ನೂ ಹತ್ತಿರದ ಸಫ್ಧರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು.

ಡಿಸೆಂಬರ್ 17: ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದವು.

ಅದೇ ದಿನ ಪೊಲೀಸರು ಆರೋಪಿಗಳಾದ ಬಸ್ ಚಾಲಕ ರಾಮ್ ಸಿಂಗ್, ಅವರ ಸಹೋದರ ಮುಖೇಶ್ ಕುಮಾರ್, ವಿನಯ್ ಶರ್ಮಾ ಮತ್ತು ಪವನ್ ಗುಪ್ತಾ ಎಂಬುವವರನ್ನು ಗುರುತಿಸಿದ್ದರು.

ಡಿಸೆಂಬರ್ 18: ರಾಮ್ ಸಿಂಗ್ ಮತ್ತು ಇತರ ಮೂವರನ್ನು ಬಂಧಿಸಲಾಯಿತು.

ಡಿಸೆಂಬರ್ 20: ಸಂತ್ರಸ್ತೆಯ ಸ್ನೇಹಿತನ ಸಾಕ್ಷಿಯನ್ನು ಪಡೆಯಲಾಯಿತು.

ಡಿಸೆಂಬರ್ 21: ದೆಹಲಿಯ ಆನಂದ್ ವಿಹಾರ್ ಬಸ್ ಟರ್ಮಿನಲ್ ನಿಂದ ಮತ್ತೋರ್ವ ಬಾಲಾಪರಾಧಿ ಮುಖೇಶ್ ಎಂಬಾತನನ್ನು ಬಂಧಿಸಲಾಯಿತು. ಸಂತ್ರಸ್ತೆಯ ಸ್ನೇಹಿತ ಮುಖೇಶನನ್ನು ಅಪರಾಧಿಗಳಲ್ಲಿ ಒಬ್ಬನೆಂದು ಗುರುತಿಸಿದ್ದ. ಆರನೇ ಆರೋಪಿ ಅಕ್ಷಯ್ ಠಾಕೂರ್‌ನನ್ನು ಬಂಧಿಸಲು ಪೊಲೀಸರು ಹರಿಯಾಣ ಮತ್ತು ಬಿಹಾರದಲ್ಲಿ ದಾಳಿ ನಡೆಸಿದ್ದರು.

ಡಿಸೆಂಬರ್ 21-22: ಬಿಹಾರದ ರಂಗಾಬಾದ್ ಜಿಲ್ಲೆಯಲ್ಲಿ ಪ್ರಮುಖ ಆರೋಪಿ ಅಕ್ಷಯ್ ಠಾಕೂರ್ ಎಂಬಾತನನ್ನು ಬಂಧಿಸಿ ದೆಹಲಿಗೆ ಕರೆತರಲಾಯಿತು. ಅತ್ಯಾಚಾರ ಸಂತ್ರಸ್ತೆ ಆಸ್ಪತ್ರೆಯಲ್ಲಿ ಪೊಲೀಸರ ಎದುರು ತನ್ನ ಹೇಳಿಕೆಯನ್ನು ದಾಖಲಿಸಿದ್ದಳು.

ಡಿಸೆಂಬರ್ 23: ನಿಷೇಧ ಹಾಗೂ 144 ಸೆಕ್ಷನ್ ಜಾರಿಯನ್ನೂ ಮೀರಿ ದೆಹಲಿಯ ಬೀದಿಗಿಳಿದ ಸಾರ್ವಜನಿಕರು ಸರ್ಕಾರದ ವಿರುದ್ಧ, ಅತ್ಯಾಚಾರಿಗಳ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದರು. ಇದನ್ನು ನಿಯಂತ್ರಿಸುವುದೇ ಕೇಂದ್ರ ಸರ್ಕಾರಕ್ಕೆ ದೊಡ್ಡ ಸವಾಲಿನ ಕೆಲಸವಾಗಿತ್ತು. ಈ ವೇಳೆ ಪ್ರತಿಭಟನೆಯನ್ನು ನಿಯಂತ್ರಿಸುವ ಕರ್ತವ್ಯದಲ್ಲಿದ್ದ ದೆಹಲಿ ಪೊಲೀಸ್ ಪೇದೆ ಸುಭಾಷ್ ತೋಮರ್ ಗಂಭೀರ ಗಾಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದರು.

ಡಿಸೆಂಬರ್ 25: ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದೆ ಎಂದು ಘೋಷಿಸಲಾಯಿತು. ಅದೇ ದಿನ ಗಂಭೀರ ಗಾಯಕ್ಕೊಳಗಾಗಿದ್ದ ಪೊಲೀಸ್ ಪೇದೆ ಸುಭಾಷ್ ತೋಮರ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದ.

ಡಿಸೆಂಬರ್ 26: ಸಂತ್ರಸ್ತೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರವು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಸ್ಥಳಾಂತರಿಸಿತು.

ಡಿಸೆಂಬರ್ 29: ಚಿಕಿತ್ಸೆ ಫಲಕಾರಿಯಾಗದೆ ಅತ್ಯಾಚಾರ ಸಂತ್ರಸ್ತೆ ಸಾವು. ದೇಶದಾದ್ಯಂತ ಭುಗಿಲೆದ್ದ ಪ್ರತಿಭಟನೆ, ಕೊಲೆ ಎಂದು ಎಫ್ಐಆರ್ ದಾಖಲಿಸಿದ ದೆಹಲಿ ಪೊಲೀಸರು.

ಜನವರಿ 2, 2013: ಲೈಂಗಿಕ ಅಪರಾಧ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಫಾಸ್ಟ್ ಟ್ರ್ಯಾಕ್ ಕೋರ್ಟ್ (FTC) ಉದ್ಘಾಟಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಅಲ್ಟಮಾಸ್ ಕಬೀರ್.

ಜನವರಿ 3: ಕೊಲೆ, ಸಾಮೂಹಿಕ ಅತ್ಯಾಚಾರ, ಕೊಲೆ ಯತ್ನ, ಅಪಹರಣ, ಅಸ್ವಾಭಾವಿಕ ಅಪರಾಧಗಳು ಮತ್ತು ದೌರ್ಜನ್ಯದ ಆರೋಪ ಹೊತ್ತಿರುವ 5 ವಯಸ್ಕ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ ಪೊಲೀಸರು.

ಜನವರಿ 5: ಪೊಲೀಸರ ಚಾರ್ಜ್‌ಶೀಟ್‌ ಅನ್ವಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ

ಜನವರಿ 7: ಕ್ಯಾಮೆರಾ ಎದುರಿನ ವಿಚಾರಣೆಗೆ ಆದೇಶಿಸಿದ ನ್ಯಾಯಾಲಯ.

ಜನವರಿ 17: ಐದು ವಯಸ್ಕ ಆರೋಪಿಗಳ ವಿರುದ್ಧ ವಿಚಾರಣೆ ಪ್ರಾರಂಭಿಸಿದ ಎಫ್ಟಿಸಿ.

ಜನವರಿ 28: ಅತ್ಯಾಚಾರ ಕೊಲೆ ಆರೋಪ ಹೊತ್ತಿರುವವರಲ್ಲಿ ಓರ್ವ ಬಾಲಾಪರಾಧಿ ಎಂಬುದು ಸಾಬೀತಾಗಿದೆ ಎಂದು ಘೋಷಿಸಿದ ಬಾಲಾಪರಾಧಿ ನ್ಯಾಯ ಮಂಡಳಿ.

ಫೆಬ್ರವರಿ 2: ಐದು ವಯಸ್ಕ ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ ಎಫ್ಟಿಸಿ

ಫೆಬ್ರವರಿ 28: ಅಪ್ರಾಪ್ತ ವಯಸ್ಕನ ವಿರುದ್ಧ ಆರೋಪ ಸಲ್ಲಿಸಿದ ಬಾಲಾಪರಾಧಿ ನ್ಯಾಯಮಂಡಲಿ.

ಮಾರ್ಚ್ 11: ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಮುಖ ಆರೋಪಿಗಳಲ್ಲೊಬ್ಬ ರಾಮ್ ಸಿಂಗ್.

ಮಾರ್ಚ್ 22: ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಯಲ್ಲಿ ವರದಿ ಮಾಡಲು ರಾಷ್ಟ್ರೀಯ ಮಾಧ್ಯಮಗಳಿಗೆ ಅನುಮತಿ ನೀಡಿದ ದೆಹಲಿ ಹೈಕೋರ್ಟ್.

ಜುಲೈ 5: ಬಾಲಾಪರಾಧಿ ವಿರುದ್ಧದ ವಿಚಾರಣೆಯನ್ನು ಮುಕ್ತಾಯಗೊಳಿಸಿದ್ದ ಬಾಲಾಪರಾಧಿ ಮಂಡಳಿ, ಜುಲೈ 11ಕ್ಕೆ ತೀರ್ಪನ್ನು ಕಾಯ್ದಿರಿಸಿತ್ತು.

ಜುಲೈ 8: ಫಿರ್ಯಾದಿ ಸಾಕ್ಷಿಗಳ ಸಾಕ್ಷ್ಯಗಳ ರೆಕಾರ್ಡಿಂಗ್ ಅನ್ನು ಎಫ್ಟಿಸಿ ಪೂರ್ಣಗೊಳಿಸಿತು.

ಜುಲೈ 11: ಸಾಮೂಹಿಕ ಅತ್ಯಾಚಾರದಲ್ಲಿ ಪಾಲ್ಗೊಳ್ಳುವ ಆರೋಪಕ್ಕೂ ಮೊದಲೇ ಡಿಸೆಂಬರ್ 16 ರಂದು ರಾತ್ರಿ ಈ ಅಪರಾಧಿಗಳು ಜೆಜೆಬಿ ಕಾರ್ಪೆಂಟರ್ ಅನ್ನು ಅಕ್ರಮವಾಗಿ ಅಪಹರಿಸಿ ದರೋಡೆ ಮಾಡಿದ್ದರು ಎಂದ ನ್ಯಾಯಾಲಯ.

-ಅದೇ ದಿನ ದೆಹಲಿ ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಪ್ರಸರಣ ಮಾಡಲು ಮೂರು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಅವಕಾಶ ನೀಡಿತ್ತು.

ಆಗಸ್ಟ್ 22: ನಾಲ್ಕು ವಯಸ್ಕ ಆರೋಪಿಗಳ ವಿರುದ್ಧದ ಅಂತಿಮ ವಾದ ಕೇಳುಲು ಮುಂದಾದ ನ್ಯಾಯಾಲಯ.

ಆಗಸ್ಟ್ 31: ಅಪ್ರಾಪ್ತ ವಯಸ್ಕ ಅಪರಾಧಿಯ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿದ್ದ ಬಾಲಾಪರಾಧಿ ನ್ಯಾಯಮಂಡಳಿ (ಜೆಜೆಬಿ) ಆತನಿಗೆ ಮೂರು ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿತು.

ಸೆಪ್ಟೆಂಬರ್ 3: FTC ವಿಚಾರಣೆಯನ್ನು ಮುಕ್ತಾಯಗೊಳಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತು.

ಸೆಪ್ಟೆಂಬರ್ 10: ಸಾಮೂಹಿಕ ಅತ್ಯಾಚಾರ, ಅಸ್ವಾಭಾವಿಕ ಅಪರಾಧ ಮತ್ತು ಬಾಲಕಿಯ ಕೊಲೆ ಮತ್ತು ಆಕೆಯ ಸ್ನೇಹಿತನನ್ನು ಕೊಲೆ ಮಾಡಲು ಯತ್ನ ಸೇರಿದಂತೆ 13 ಅಪರಾಧಗಳಿಗೆ ಮುಖೇಶ್, ವಿನಯ್, ಅಕ್ಷಯ್, ಪವನ್ ಅವರನ್ನು ನ್ಯಾಯಾಲಯ ಶಿಕ್ಷೆಗೊಳಪಡಿಸಿತು.

ಸೆಪ್ಟೆಂಬರ್ 13: ಎಲ್ಲಾ 4 ಅಪರಾಧಿಗಳಿಗೂ ಮರಣ ದಂಡನೆ ವಿಧಿಸಿದ ನ್ಯಾಯಾಲಯ.

ಸೆಪ್ಟೆಂಬರ್ 23: ವಿಚಾರಣಾಧೀನ ನ್ಯಾಯಾಲಯವು ಕಳುಹಿಸಿದ ಅಪರಾಧಿಗಳ ಮರಣದಂಡನೆ ಉಲ್ಲೇಖವನ್ನು ಕೇಳಲು ಪ್ರಾರಂಭಿಸಿದ ಹೈಕೋರ್ಟ್.

ಜನವರಿ 3, 2014: ಅಪರಾಧಿಗಳ ಮೇಲ್ಮನವಿಗಳ ಮೇಲಿನ ತೀರ್ಪನ್ನು ಕಾಯ್ದಿರಿಸಿದ ಹೈಕೋರ್ಟ್.

ಮಾರ್ಚ್ 13: 4 ಅಪರಾಧಿಗಳಿಗೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ ಮರಣದಂಡನೆಯನ್ನು ಎತ್ತಿಹಿಡಿದ ಹೈಕೋರ್ಟ್.

ಮಾರ್ಚ್ 15: ಗಲ್ಲುಶಿಕ್ಷೆ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ ಆರೋಪಿಗಳು.

ಏಪ್ರಿಲ್ 15: ಸಂತ್ರಸ್ತೆ ಸಾಯುವ ಸಂದರ್ಭದಲ್ಲಿ ನೀಡಿದ ಹೇಳಿಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ ಸುಪ್ರೀಂ ಕೋರ್ಟ್.

ಫೆಬ್ರವರಿ 3, 2017: ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ಕುರಿತ ವಾದ ವಿವಾದ ಆಲಿಸಲು ಮುಂದಾದ ಸುಪ್ರೀಂ ಕೋರ್ಟ್

ಮಾರ್ಚ್ 27: ಮೇಲ್ಮನವಿ ಕುರಿತು ತೀರ್ಪನ್ನು ಕಾಯ್ದಿರಿಸಿದ ಸುಪ್ರೀಂ ಕೋರ್ಟ್.

ಮೇ 5: ನಿರ್ಭಯಾ ಪ್ರಕರಣವನ್ನು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದು ಪರಿಗಣಿಸಿದ ಸುಪ್ರೀಂ ಕೋರ್ಟ್ ನಾಲ್ಕೂ ಜನ ಅಪರಾಧಿಗಳ ಗಲ್ಲುಶಿಕ್ಷೆಯನ್ನು ಎತ್ತಿಹಿಡಿದಿತ್ತು.

ನವೆಂಬರ್ 8: ತನಗೆ ನೀಡಿರುವ ಮರಣ ದಂಡನೆಯನ್ನು ಮರು ಪರಿಶೀಲಿಸುವಂತೆ ಮನವಿ ಸಲ್ಲಿಸಿದ ಆರೋಪಿ ಮುಖೇಶ್

ಡಿಸೆಂಬರ್ 12: ಸುಪ್ರೀಂ ಕೋರ್ಟ್ ಎದುರು ಮುಖೇಶ್ ಮನವಿಯನ್ನು ವಿರೋಧಿಸಿದ ದೆಹಲಿ ಪೊಲೀಸರು.

ಡಿಸೆಂಬರ್ 15: ಅಪರಾಧಿಗಳಾದ ವಿನಯ್ ಶರ್ಮಾ ಮತ್ತು ಪವನ್ ಕುಮಾರ್ ಸಹ ತಮ್ಮ ಮೇಲಿನ ತೀರ್ಪಿನ ಪರಿಶೀಲನೆಗೆ ಸುಪ್ರೀಂ ಕೋರ್ಟ್ ಮೊರೆ.

ಮೇ 4, 2018: ಇಬ್ಬರು ಅಪರಾಧಿಗಳಾದ ವಿನಯ್ ಶರ್ಮಾ ಮತ್ತು ಪವನ್ ಗುಪ್ತಾ ಅವರ ಪರಿಶೀಲನಾ ಅರ್ಜಿಯನ್ನು ಕಾಯ್ದಿರಿಸಿದ ನ್ಯಾಯಾಲಯ.

ಜುಲೈ 9: ಮೂವರು ಅಪರಾಧಿಗಳ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ

ಫೆಬ್ರವರಿ, 2019: ನಾಲ್ವರು ಅಪರಾಧಿಗಳ ಡೆತ್ ವಾರಂಟ್ ಹೊರಡಿಸುವಂತೆ ದೆಹಲಿ ಹೈಕೋರ್ಟ್ ಮೊರೆ ಹೋದ ಸಂತ್ರಸ್ತೆಯ ಪೋಷಕರು.

ಡಿಸೆಂಬರ್ 10, 2019: ಅಪರಾಧಿ ಅಕ್ಷಯ್ ತನ್ನ ಮರಣದಂಡನೆಯನ್ನು ಮರುಪರಿಶೀಲಿಸುವಂತೆ ಕೋರಿ ಸುಪ್ರೀಂಗೆ ಮನವಿ.

ಡಿಸೆಂಬರ್ 18: ಅಕ್ಷಯ್ ಅರ್ಜಿಯನ್ನು ವಜಾ ಮಾಡಿದ ಸುಪ್ರೀಂ

-ಸುಪ್ರೀಂನಲ್ಲಿ ಅಕ್ಷಯ್ ಅರ್ಜಿ ವಜಾ ಬೆನ್ನಿಗೆ ನಿರ್ಭಯಾ ಪ್ರಕರಣ ಎಲ್ಲಾ 4 ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಕೋರಿದ ದೆಹಲಿ ಸರ್ಕಾರ.

-ತಿಹಾರ್ ಜೈಲಿನ ಅಧಿಕಾರಿಗಳಿಗೆ ತಮ್ಮ ಉಳಿದ ಕಾನೂನು ಕ್ರಿಯೆಗಳನ್ನು ಮುಗಿಸಿ ಅಪರಾಧಿಗಳಿಗೆ ನೋಟಿಸ್ ನೀಡುವಂತೆ ನಿರ್ದೇಶಿಸಿ ಡೆತ್ ವಾರೆಂಟ್ ಹೊರಡಿಸಿದ ದೆಹಲಿ ಹೈಕೋರ್ಟ್.

ಡಿಸೆಂಬರ್ 19: ಪವನ್ ಕುಮಾರ್ ಗುಪ್ತಾ ಅಪರಾಧದ ಸಮಯದಲ್ಲಿ ತಾನು ಬಾಲಾಪರಾಧಿ ಎಂದು ಹೇಳಿದ್ದ ಅರ್ಜಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್.

ಜನವರಿ 6, 2020: ಏಕೈಕ ಸಾಕ್ಷಿಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಪವನ್ ಅವರ ತಂದೆ ಸಲ್ಲಿಸಿದ್ದ ದೂರನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್.

ಜನವರಿ 7: 4 ಆರೋಪಿಗಳನ್ನು ಜನವರಿ 22 ರಂದು ಬೆಳಿಗ್ಗೆ 7 ಗಂಟೆಗೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲು ಆದೇಶಿಸಿದ ದೆಹಲಿ ನ್ಯಾಯಾಲಯ.

ಜನವರಿ 14: ವಿನಯ್ ಮತ್ತು ಮುಖೇಶ್ ಕುಮಾರ್ ಅವರ ರೋಗನಿರೋಧಕ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ.

-ಮುಖೇಶ್ ಅವರಿಂದ ರಾಷ್ಟ್ರಪತಿಗಳಿಗೆ ಮುಂದೆ ಕರುಣೆ ಅರ್ಜಿ ಸಲ್ಲಿಕೆ.

ಜನವರಿ 17: ಮುಖೇಶ್ ಅವರ ಕರುಣೆ ಮನವಿಯನ್ನು ತಿರಸ್ಕರಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್.

-ಫೆಬ್ರವರಿ 1, ಬೆಳಿಗ್ಗೆ 6ಕ್ಕೆ ನಾಲ್ಕೂ ಅಪರಾಧಿಗಳನ್ನು ಗಲ್ಲಿಗೇರಿಸುವಂತೆ ಎರಡನೇ ಡೆತ್ ವಾರಂತೆ ಹೊರಡಿಸಿದ ದೆಹಲಿ ಹೈಕೋರ್ಟ್.

ಜನವರಿ 25: ಕರುಣೆ ಮನವಿಯನ್ನು ತಿರಸ್ಕರಿಸಿದ ರಾಷ್ಟ್ರಪತಿ ನಿಲುವಿನ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಮುಖೇಶ್.

ಜನವರಿ 28: ವಾದವನ್ನು ಆಲಿಸಿ ತೀರ್ಪು ಕಾಯ್ದಿರಿಸಿದ ಸುಪ್ರೀಂ.

ಜನವರಿ 29: ಕರುಣಾ ಅರ್ಜಿ ಕುರಿತ ಮುಖೇಶ್ ಮನವಿ ತಿರಸ್ಕರಿಸಿದ ನ್ಯಾಯಾಲಯ.

ಜನವರಿ 30: ಅಕ್ಷಯ್ ಕುಮಾರ್ ಸಿಂಗ್ ಅವರ ರೋಗನಿರೋಧಕ ಮನವಿಯನ್ನು ವಜಾಗೊಳಿಸಿದ ಸುಪ್ರೀಂ.

ಜನವರಿ 31: ತನ್ನ ಬಾಲಾಪರಾಧಿ ಹಕ್ಕನ್ನು ತಿರಸ್ಕರಿಸಿದ ನ್ಯಾಯಾಲಯದ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಪವನ್ ಸಲ್ಲಿಸಿದ್ದ ಮನವಿಯನ್ನೂ ವಜಾಗೊಳಿಸಿದ ಸುಪ್ರೀಂ.

ಒಂದು ವಾರಗಳ ಕಾಲ ಮರಣ ದಂಡನೆಯನ್ನು ಮುಂದೂಡಿದ ದೆಹಲಿ ನ್ಯಾಯಾಲಯ.

ಫೆ .1: ಶೀಘ್ರವಾಗಿ ಮರಣ ದಂಡನೆಯನ್ನು ಈಡೇರಿಸುವಂತೆ ದೆಹಲಿ ಹೈಕೋರ್ಟ್ ಮೊರೆ ಹೋದ ಕೇಂದ್ರ ಸರ್ಕಾರ.

ಫೆಬ್ರವರಿ 2: ಕೇಂದ್ರದ ಮನವಿಗೆ ಸಂಬಂಧಿಸಿದಂತೆ ತೀರ್ಪು ಕಾಯ್ದಿರಿಸಿದ ಹೈಕೋರ್ಟ್.

ಫೆ .5: ಎಲ್ಲಾ 4 ಅಪರಾಧಿಗಳನ್ನು ಒಂದು ವಾರದ ಒಳಗಾಗಿ ಒಟ್ಟಿಗೆ ಗಲ್ಲಿಗೇರಿಸಬೇಕು ಈ ಕುರಿತ ಕಾನೂನು ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಬೇಕು ಎಂದು ನಿರ್ದೇಶಿಸಿದ ಹೈಕೋರ್ಟ್.

ಒಟ್ಟಾರೆ ಈವರೆಗೆ ನಿರ್ಭಯಾ ಅತ್ಯಾಚಾರ ಕೊಲೆ ಆರೋಪಿಗಳ ವಿರುದ್ಧ ದೆಹಲಿ ಹೈಕೋರ್ಟ್ ಈವರೆಗೆ 3 ಬಾರಿ ಡೆತ್ ವಾರಂಟ್ ಹೊರಡಿಸಿದೆ. ಆದರೆ, ಈ ನಾಲ್ವರೂ ಒಂದಲ್ಲಾ ಒಂದು ಕಾನೂನಿನ ಮೂಲಕ ತಮ್ಮ ಗಲ್ಲುಶಿಕ್ಷೆಯನ್ನು ಮುಂದೂಡುತ್ತಲೇ ಇದ್ದಾರೆ. ಮತ್ತೊಂದೆಡೆ ಇವರನ್ನು ಗಲ್ಲಿಗೇರಿಸಲು ನಿರ್ಭಯಾ ಪೋಷಕರ ಹೋರಾಟವೂ ನಡೆಯುತ್ತಿದೆ. ಈ ನಡುವೆ ಅತ್ಯಾಚಾರಿಗಳಿಗೆ ಶೀಘ್ರವಾಗಿ ಗಲ್ಲುಶಿಕ್ಷೆ ಜಾರಿಗೊಳಿಸುವುದನ್ನು ಬಿಟ್ಟು ಹೀಗೆ ಕಾನೂನು ಚೌಕಟ್ಟಿನಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ನ್ಯಾಯಾಲಯ ವ್ಯವಸ್ಥೆಯ ಕುರಿತು ಇದೀಗ ದೇಶದೆಲ್ಲೆಡೆ ವ್ಯಾಪಕ ಖಂಡನೆಗಳು ವ್ಯಕ್ತವಾಗುತ್ತಿವೆ.

Tags: Nirbhaya CaseNirbhaya rape casesupreme courtನಿರ್ಭಯಾನಿರ್ಭಯಾ ಅತ್ಯಾಚಾರ ಪ್ರಕರಣ
Previous Post

ಪ್ರಾದೇಶಿಕ ಪಕ್ಷವಾಗಿ ಅಧಿಕಾರ ಹಿಡಿಯಲು ಜೆಡಿಎಸ್ ಗೆ ಎಲ್ಲಾ ಅವಕಾಶವಿದೆ, ಆದರೆ…

Next Post

ಕಾಲಿಟ್ಟಲ್ಲೆಲ್ಲಾ ಕರಿಬೇವು: ಮಲೆನಾಡಿನಲ್ಲೊಂದು ಭೀಮನ ಕಾಲದ ಬೇವಿನ ಬೆಟ್ಟ

Related Posts

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು
ಕರ್ನಾಟಕ

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

by ಪ್ರತಿಧ್ವನಿ
July 2, 2025
0

ಕೇಂದ್ರ ಸರ್ಕಾರದ ಬೆಲೆಯೇರಿಕೆಗೆ ರಾಜ್ಯದ ಬಿಜೆಪಿ ನಾಯಕರ ಮೌನ ಖಂಡನೀಯ ರೈತರಿಗೆ ನೆರವಾಗಲು ನಾವು ಹಾಲಿನ ದರ ಹೆಚ್ಚಳ ಮಾಡಿದಾಗ ಜನವಿರೋಧಿ ಎಂದು ಬೊಬ್ಬಿಟ್ಟಿದ್ದ ಬಿಜೆಪಿಯವರು ಈಗ...

Read moreDetails
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

July 1, 2025
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

July 1, 2025

Mallikarjun Kharge: ಸಂಚಲನ ಸೃಷ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ. ಶೀಘ್ರವೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ.

July 1, 2025
ಕಾಶ್ಮೀರದಲ್ಲಿ ನಡೆಯುತ್ತಿರುವುದು ಭಯೋತ್ಪಾದನೆ ಅಲ್ಲ..ಸ್ವತಂತ್ರ ಹೋರಾಟ : ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನಿರ್ 

ಕಾಶ್ಮೀರದಲ್ಲಿ ನಡೆಯುತ್ತಿರುವುದು ಭಯೋತ್ಪಾದನೆ ಅಲ್ಲ..ಸ್ವತಂತ್ರ ಹೋರಾಟ : ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನಿರ್ 

July 1, 2025
Next Post
ಕಾಲಿಟ್ಟಲ್ಲೆಲ್ಲಾ ಕರಿಬೇವು: ಮಲೆನಾಡಿನಲ್ಲೊಂದು ಭೀಮನ ಕಾಲದ ಬೇವಿನ ಬೆಟ್ಟ

ಕಾಲಿಟ್ಟಲ್ಲೆಲ್ಲಾ ಕರಿಬೇವು: ಮಲೆನಾಡಿನಲ್ಲೊಂದು ಭೀಮನ ಕಾಲದ ಬೇವಿನ ಬೆಟ್ಟ

Please login to join discussion

Recent News

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 
Top Story

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

by Chetan
July 2, 2025
ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.
Top Story

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

by ಪ್ರತಿಧ್ವನಿ
July 2, 2025
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Top Story

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
July 1, 2025
ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 
Top Story

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

by Chetan
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

July 2, 2025
ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada