2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ನಡೆದ ನಿರ್ಭಯ ಅತ್ಯಾಚಾರ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಆರು ಮಂದಿ ಅತ್ಯಾಚಾರಿಗಳ ಪೈಕಿ ಓರ್ವ ಆರೋಪಿ ಆತ್ಮಹತ್ಯೆಗೆ ಶರಣಾದ. ಮತ್ತೋರ್ವನನ್ನು ಬಾಲಾಪರಾಧಿ ನ್ಯಾಯಮಂಡಳಿ ಬಿಡುಗಡೆ ಮಾಡಿದೆ. ಇನ್ನುಳಿದ ನಾಲ್ವರು ಆರೋಪಿಗಳಿಗೆ ತ್ವರಿತಗತಿ ನ್ಯಾಯಾಲಯ ಮರಣದಂಡನೆ ವಿಧಿಸಿದ್ದು, ಸುಪ್ರೀಂಕೋರ್ಟ್ ಕೂಡ ಶಿಕ್ಷೆಯನ್ನು ಎತ್ತಿ ಹಿಡಿದಿದೆ. ರಾಷ್ಟ್ರಪತಿಗಳು ಕ್ಮಾಧಾನ ಅರ್ಜಿಯನ್ನು ವಜಾ ಮಾಡಿದೆ. ರಾಷ್ಟ್ರಪತಿ ನಿರ್ಧಾವನ್ನೇ ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಇದೀಗ ಎಲ್ಲರಿಗೂ ಗಲ್ಲು ಶಿಕ್ಷೆ ನೀಡಲು ದೆಹಲಿಯ ಸೆಷನ್ಸ್ ಕೋರ್ಟ್ ಜಡ್ಜ್ ಆದೇಶ ಮಾಡಿದ್ದಾರೆ.
ನಾಲ್ವರು ಅಪರಾಧಿಗಳಿಗೆ ಮಾರ್ಚ್ 3ರಂದು ಬೆಳಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆ ಜಾರಿ ಮಾಡಲು ಹೊಸದಾಗಿ ಡೆತ್ ವಾರೆಂಟ್ ಹೊರಡಿಸಲಾಗಿದೆ. ಇದೇ ರೀತಿ ಈ ಹಿಂದೆ ಕೂಡ ಎರಡು ಬಾರಿ ಡೆತ್ ವಾರೆಂಟ್ ಹೊರಡಿಸಲಾಗಿತ್ತು. ಇದೀಗ ಮೂರನೇ ಬಾರಿಗೆ ದೆಹಲಿಯ ಅಡಿಷನಲ್ ಸೆಷನ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಆದೇಶ ಹೊರಡಿಸಿದ್ದಾರೆ. 32 ವರ್ಷದ ಮುಖೇಶ್ ಸಿಂಗ್, 25 ವರ್ಷದ ಪವನ್ ಗುಪ್ತ, 26 ವರ್ಷದ ಪವನ್ ಕುಮಾರ್ ಶರ್ಮಾ ಹಾಗು 31 ವರ್ಷದ ಅಕ್ಷಯ್ ಕುಮಾರ್ ಜೀವನ ಮಾರ್ಚ್ 3ರಂದು ಬೆಳಗ್ಗೆ 6 ಗಂಟೆಗೆ ಅಂತ್ಯವಾಗಲಿದೆ. ಮೂರನೇ ಬಾರಿಯಾದರೂ ಶಿಕ್ಷೆಯಾಗುತ್ತೆ ಎನ್ನುವ ನೆಮ್ಮದಿಯ ನಿಟ್ಟುಸಿರುವ ನಿರ್ಭಯಾ ಪೋಷಕರದ್ದಾಗಿದೆ.
ಈ ಮೊದಲು ಜನವರಿ 22ರಂದು ಗಲ್ಲು ಶಿಕ್ಷೆ ಜಾರಿಗೆ ಆದೇಶ ಮಾಡಲಾಗಿತ್ತು. ಆ ಬಳಿಕ ಜನವರಿ 17ರಂದು ಫೆಬ್ರವರಿ 1ಕ್ಕೆ ಮುಂದೂಡಿಕೆ ಮಾಡಿ ಕೋರ್ಟ್ ಆದೇಶ ಮಾಡಿತ್ತು. ಮತ್ತೆ ಜನವರಿ 31ಕ್ಕೆ ಆದೇಶ ಮಾಡಿದ ಸೆಷನ್ಸ್ ಕೋರ್ಟ್, ಫೆಬ್ರವರಿ 1ರಂದು ಜಾರಿಯಾಗಬೇಕಿದ್ದ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡ ಮುಂದಿನ ಆದೇಶದ ತನಕ ಶಿಕ್ಷೆ ಜಾರಿ ಮಾಡದಂತೆ ಆದೇಶ ಹೊರಡಿಸಿತ್ತು. ಅದಾದ ಬಳಿಕ ಸೋಮವಾರ ಫಬ್ರವರಿ 17ರಂದು 3ನೇ ಬಾರಿಗೆ ದೆಹಲಿಯ ಅಡಿಷನಲ್ ಕೋರ್ಟ್ ಮಾರ್ಚ್ 3ರಂದು ಗಲ್ಲು ಶಿಕ್ಷೆ ಜಾರಿ ಮಾಡಲು ಆದೇಶ ಹೊರಡಿಸಿದೆ. ಈ ಆದೇಶಕ್ಕೆ ಸಂತಸ ವ್ಯಕ್ತಪಡಿಸಿರುವ ನಿರ್ಭಯಾ ತಾಯಿ ಆಶಾದೇವಿ, ಇದು ಅಂತಿಮ ದಿನಾಂಕ ಎಂದು ನಂಬಿದ್ದೇನೆ. ಈ ಆದೇಶ ನನಗೆ ತೃಪ್ತಿ ಕೊಟ್ಟಿದೆ. ಈ ದಿನಾಂಕದಲ್ಲಿ ಆದರೂ ಆರೋಪಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಲಿ ಎಂದಿದ್ದಾರೆ.
ದೆಹಲಿಯ ತಿಹಾರ್ ಜೈಲಿನಲ್ಲಿ ನಾಲ್ವರು ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗ್ತಿದೆ. ಆದರೆ ಗಲ್ಲು ಶಿಕ್ಷೆಯನ್ನು ಕೊಡಬಾರದು ಎನ್ನುವ ಮಾನವೀಯತೆಯ ಕೂಗು ಸಹ ಕೇಳಿಸುತ್ತಿದೆ. ಆದರೆ ವಿಶೇಷ ಎಂದರೆ, ಈ ಅಪರಾಧಿಗಳು ನಿಸ್ಸಾಹಕ ಹೆಣ್ಣು ಮಗಳ ಮೇಲೆ ಮೃಗೀಯವಾಗಿ ಅತ್ಯಾಚಾರ ನಡೆಸಿದ್ದು ಮಾತ್ರವಲ್ಲದೆ ಗುಪ್ತಾಂಗಕ್ಕೆ ಕಬ್ಬಿಣದ ಸಲಾಕೆ ಹಾಕಿ ತಮ್ಮ ವಿಕೃತಿ ಮೆರೆದಿದ್ದರು. ಈ ನಾಲ್ವರು ಆಪರಾಧಿಗಳಿಗೆ ಗಲ್ಲು ಶಿಕ್ಷೆಯೂ ಕಡಿಮೆಯೆ ಎನ್ನುವುದರಲ್ಲಿ ಅನ್ಯ ಮಾತಿಲ್ಲ. ಆದರೆ ಸಾಯುವ ಮೊದಲು ಉಳಿದವರನ್ನು ಸಾಯಿಸಿ, ಇಡಿ ಕುಟುಂಬದವರ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಇಡೀ ಕುಟುಂಬದ ಸದಸ್ಯರು ಮರಣದಂಡನೆ ದಿನವನ್ನು ಕಾಯುವಂತಾಗಿದೆ.
ಅಪರಾಧ ಮಾಡಿದ್ದಾರೆ ಎನ್ನುವುದು ಗೊತ್ತಿದ್ದರೂ ಅವರಿಗೆ ಹೆತ್ತ ಕರುಳು ಕರುಣೆಯನ್ನು ಹುಟ್ಟಿಸುತ್ತದೆ. ಒಮ್ಮೆ ಮರಣದಂಡನೆ ಆದರೆ ಸತ್ತನೆಂದು ಕಣ್ಣೀರನ್ನು ವರೆಸಿ ಬದುಕು ಮುಂದುವರಿಸಬಹುದು. ಆದರೆ ತಿಂಗಳಿಗೊಮ್ಮೆ ದಿನಾಂಕ ಬದಲಾಗುತ್ತಾ ಹೋದರೆ ಅತ್ಯಾಚಾರ ಮಾಡಿದ ಅಪರಾಧಿಗಳು ಸಾಯುವ ಬದಲು ಕುಟುಂಬದ ಸಾಕಷ್ಟು ಜನರನ್ನು ಸಾವಿನ ನೋವಿನಲ್ಲಿ ಸಿಲುಕಿ ಒದ್ದಾಡುವಂತೆ ಮಾಡಿದ್ದಾರೆ. ನಿಜವಾಗಲು ಇಡೀ ಅತ್ಯಾಚಾರ ಅಪರಾಧಿಗಳ ಕುಟುಂಬಸ್ಥರು ಜೀವನ ಪೂರ್ತಿ ಶಿಕ್ಷೆ ಅನುಭವಿಸುವಂತಾಗಿದೆ. ಒಟ್ಟಾರೆ, ಸತ್ತು ಇವರ ನೆನಪು ಮಾಸಿದರೆ ಸಾಕು ನಾವು ಹೊಸ ಬದುಕು ಕಟ್ಟಿಕೊಳ್ಳುವ ತವಕದಲ್ಲಿ ಈ ಕುಟುಂಬಗಳಿವೆ.