ದೇಶದಾದ್ಯಂತ ರೈತ ಚಳವಳಿ ತೀವ್ರವಾಗಿ ಹಬ್ಬುತ್ತಿದೆ. ಸಮಾಜದ ವಿವಿಧ ಸ್ಥರಗಳ ನಾಯಕರು ಮುಂದೆ ಬಂದು ಈ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಆದರೆ, ಈ ಹೊತ್ತಿನಲ್ಲಿ ಜನರ ಮೇಲೆ ಅತೀ ಹೆಚ್ಚಿನ ಪ್ರಭಾವ ಬೀರುವ ಚಿತ್ರ ನಟರು ಕೂಡಾ ರೈತರೊಂದಿಗೆ ಹೋರಾಟ ನಡೆಸಬೇಕು ಎಂಬ ಕೂಗು ಕೇಳಿ ಬರುತ್ತಿದೆ.
ಈ ಕುರಿತಾಗಿ ಕರ್ನಾಟಕದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು, ಇದು ರೈತರ ಹೋರಾಟ ರಾಜಕೀಯ ಪಕ್ಷಗಳ ಹೋರಾಟ ಅಲ್ಲ ಎಂದು ಹೇಳಿದ್ದಾರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದರೊಂದಿಗೆ “ಈ ಮಣ್ಣಿನ ಸಾಹಿತಿಗಳು, ಕಲಾವಿದರು, ವಿಶೇಷವಾಗಿ ನಟ-ನಟಿಯರು ಬೀದಿಗಿಳಿದು ಹೋರಾಟ ನಡೆಸಿ ರೈತರನ್ನು ಬೆಂಬಲಿಸಬೇಕು,” ಎಂದು ಹೇಳಿದ್ದಾರೆ.
ನಾವೆಲ್ಲರೂ ರೈತರು ಬೆಳೆದ ಅನ್ನ ತಿನ್ನುವವರಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.