ನವೆಂಬರ್ ಒಂದು ಕನ್ನಡ ರಾಜ್ಯೋತ್ಸವದಂದು ಕನ್ನಡ ಬಾವುಟ ಹಾರಿಸದೆ ಕೇವಲ ರಾಷ್ಟ್ರಧ್ವಜ ಹಾರಿಸಿ ನಾಡಧ್ವಜಕ್ಕೆ ಅವಮಾನ ಮಾಡಿದ ಘಟನೆ ವರದಿಯಾಗುತ್ತಿದ್ದಂತೆ ಕನ್ನಡಾಭಿಮಾನಿಗಳಿಂದ ರಾಜ್ಯ ಸರ್ಕಾರದ ನಡೆಗೆ ವಿರೋಧ ವ್ಯಕ್ತವಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಬಿಜೆಪಿ ಸರ್ಕಾರವನ್ನು ಹಲವಾರು ಕನ್ನಡಪರ ಹೋರಾಟಗಾರರು, ಕನ್ನಡ ಸಂಘಟನೆಗಳು ಖಂಡಿಸಿದ್ದು, ನಾಡಧ್ವಜಕ್ಕೆ ಗೌರವ ತೋರುವ ಸಲುವಾಗಿ ನಮ್ಮ ಧ್ವಜ ನಮ್ಮ ಹೆಮ್ಮೆ ಎಂಬ ಹ್ಯಾಷ್‌ಟ್ಯಾಗನ್ನು ಟ್ವಿಟರಿನಲ್ಲಿ ಟ್ರೆಂಡ್ ಮಾಡಿದ್ದಾರೆ.
ಕನ್ನಡ ರಾಜ್ಯೋತ್ಸವದಂದು ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಧ್ವಜವನ್ನು ಹಾರಿಸದೇ ಕೇವಲ ರಾಷ್ಟ್ರಧ್ವಜ ಮಾತ್ರ ಹಾರಿಸಲಾಗಿತ್ತು. ಇದು ಕನ್ನಡ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಬೆನ್ನಲ್ಲೇ ಕರ್ನಾಟಕ ರಕ್ಷಣಾ ವೇದಿಕೆ #ನಮ್ಮಧ್ವಜ_ನಮ್ಮಹೆಮ್ಮೆ ಎಂಬ ಟ್ವಿಟರ್ ಅಭಿಯಾನಕ್ಕೆ ಕರೆ ನೀಡಿದೆ. ಈ ಅಭಿಯಾನಕ್ಕೆ ಸಾವಿರಾರು ಕನ್ನಡಿಗರು ಜೊತೆಗೂಡಿದ್ದು ಕರ್ನಾಟಕದ ಟ್ರೆಂಡಿಂಗ್‌ನಲ್ಲಿ ಈ ಹ್ಯಾಷ್‌ಟ್ಯಾಗ್ ಮೊದಲನೇ ಸ್ಥಾನವನ್ನು ಪಡೆದುಕೊಂಡಿತ್ತು.
ರಾಜ್ಯೋತ್ಸವದ ದಿನವಾದ ನಿನ್ನೆ ಹಲವು ಜಿಲ್ಲಾಕೇಂದ್ರಗಳಲ್ಲಿ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಕನ್ನಡಧ್ವಜ ಹಾರಿಸದೇ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಲಾಗಿದೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಕನ್ನಡಧ್ವಜ ಹಾರಿಸಿರುವಾಗ ಜಿಲ್ಲಾ ಉಸ್ತುವಾರಿ ಸಚಿವರು ಬಾವುಟ ಹಾರಿಸದಂತೆ ತಡೆದ ಶಕ್ತಿ ಯಾವುದು? #ನಮ್ಮಧ್ವಜ_ನಮ್ಮಹೆಮ್ಮೆ pic.twitter.com/XrNvDyRCgS
— ಕರವೇ (KRV) (@karave_KRV) November 2, 2020
ಇನ್ನು ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದು, ಕನ್ನಡ ರಾಜ್ಯೋತ್ಸವದ ದಿನ ನಾಡಧ್ವಜ ಹಾರಿಸದೆ ಹಲವಾರು ಜಿಲ್ಲಾಡಳಿತಗಳು ಅಗೌರವ ತೋರಿಸಿರುವುದು ಖಂಡನೀಯ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಮಕ್ಷಮದಲ್ಲಿಯೇ ನಾಡಧ್ವಜ ಹಾರಿಸಿರುವಾಗ ಜಿಲ್ಲಾಡಳಿತದ ಉಪೇಕ್ಷೇ ಯಾರ ಕುಮ್ಮಕ್ಕಿನಿಂದ ನಡೆಯಿತು ಎನ್ನುವುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
‘Why was the Karnataka flag not hoisted in districts?’: Kannada activists to protest. KRV has called for a social media protest starting 5pm on Monday using #ನಮ್ಮಧ್ವಜ_ನಮ್ಮಹೆಮ್ಮೆ(Our flag, our pride) and will stage protests in all districts as well. https://t.co/cawxaP5cNf
— Pooja Prasanna (@PoojaPrasanna4) November 2, 2020
ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕನ್ನಡ ರಾಜ್ಯೋತ್ಸವದ ದಿನ ಕನ್ನಡ ಧ್ವಜವನ್ನು ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾರಿಸುವ ಸಂಪ್ರದಾಯವನ್ನು ಹಿಂದಿನ ಎಲ್ಲ ಸರ್ಕಾರಗಳು ಪಾಲಿಸುತ್ತಾ ಬಂದಿವೆ. ಕಳೆದ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿಯವರೇ ನಾಡಧ್ವಜ ಆರೋಹಣವನ್ನು ವಿರೋಧಿಸಿದ್ದು ಜನಾಕ್ರೋಶಕ್ಕೆ ಕಾರಣವಾಗಿತ್ತು.ನಾನು ಮುಖ್ಯಮಂತ್ರಿಯಾಗಿದ್ದಾಗ ತಜ್ಞರ ಸಮಿತಿಯನ್ನು ಆಧರಿಸಿ ನಾಡಧ್ವಜವನ್ನು ವಿನ್ಯಾಸ ಮಾಡಿ ಅಂಗೀಕಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕಳಿಸಿದ್ದೆ. ಎರಡು ವರ್ಷಗಳಾದರೂ ಅದಕ್ಕೆ ಅಂಗೀಕಾರ ನೀಡದೆ ಇರುವುದು ಕರ್ನಾಟಕದ ನಾಡಧ್ವಜದ ಬಗ್ಗೆ ಬಿಜೆಪಿಗೆ ಇರುವ ಪೂರ್ವಗ್ರಹಕ್ಕೆ ಸಾಕ್ಷಿ ಎಂದಿದ್ದಾರೆ.
In a 1994 case before the Supreme Court of India, S. R. Bommai v. Union of India, Supreme Court declared that there is no prohibition in the Constitution of India for a state to have its own flag. However, a state flag should not dishonor the national flag,#ನಮ್ಮಧ್ವಜ_ನಮ್ಮಹೆಮ್ಮೆ pic.twitter.com/ax3q1XeD2k
— Imran Khan Yermal (@imrankhanyermal) November 2, 2020
ತಾವು ನಮ್ಮ ಧ್ವಜ ಹಾರಿಸುವುದಿಲ್ಲಾ ನಾವಾಗಿಯೇ ನಮ್ಮ ಬಾವುಟ ಹಿಡಿದು ಬಂದ್ರೆ ಅದಕ್ಕೂ ಹೊಡೆದು ಕೆಟ್ಟದಾಗಿ “ಸುಳೆಮಕ್ಳು” ಅಂತಾ ಬೇರೆ ಅನ್ನಿಸಿಕೊಬೇಕು#ನಮ್ಮಧ್ವಜ_ನಮ್ಮಹೆಮ್ಮೆ pic.twitter.com/VyEvQz0Brh
— Asura (@THE_LIT_) November 2, 2020
ನಾವೇನು ಪ್ರತ್ಯೇಕ ಧ್ವಜವನ್ನು ಕೇಳುತ್ತಿಲ್ಲ. ರಾಜ್ಯಗಳು ತಮ್ಮದೇ ಆಗಿರುವ ಧ್ವಜ ಹೊಂದಲು ಸಂವಿಧಾನದಲ್ಲಿ ಯಾವ ಅಡ್ಡಿಯೂ ಇಲ್ಲ. ಬಿಜೆಪಿಯ ಕೇಂದ್ರ ನಾಯಕರ ಅಭಿಪ್ರಾಯವೇನೇ ಇರಲಿ, ಆ ಪಕ್ಷದ ಸ್ಥಳೀಯ ನಾಯಕರು ಪ್ರಧಾನ ಮಂತ್ರಿ ಮೇಲೆ ಒತ್ತಡ ಹೇರಿ ಕರ್ನಾಟಕದ ನಾಡಧ್ವಜಕ್ಕೆ ಅಧಿಕೃತ ಮನ್ನಣೆ ಸಿಗುವಂತೆ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
Shame on those who have not hoisted Karnataka Flag on the occasion of Kannada Rajyotsava.#ನಮ್ಮಧ್ವಜ_ನಮ್ಮಹೆಮ್ಮೆ pic.twitter.com/W0D6raqBPd
— Kumar Reddy (@KumarRe43919039) November 2, 2020
C.T.Ravi as Kannada and Cultural Minister is itself
a disgrace. How can one expect something more than this from a person like him.
And @BJP4India always rewards such gems by giving important posts.#ನಮ್ಮಧ್ವಜ_ನಮ್ಮಹೆಮ್ಮೆ pic.twitter.com/GdLkNqaNYe— ಅಗಸ್ತ್ಯ… (@Charan_neogi) November 2, 2020
Germany with population of roughly around 88 millions, has no problems with state flags. Why is GOK has problem with it? #ನಮ್ಮಧ್ವಜ_ನಮ್ಮಹೆಮ್ಮೆ https://t.co/dXJuhs2UkI
— Jayateerth Nadagouda (@jayateerthbn) November 2, 2020
ಕೇಸರಿ ದ್ವಜ ಹಾರಿಸಿದರೆ ಭಾರತದ ಏಕತೆಗೆ ಧಕ್ಕೆ ಆಗುವುದಿಲ್ಲ, ರಾಜಕೀಯ ಪಕ್ಷಗಳು ತಮ್ಮ ಧ್ವಜ ಹಾರಿಸಿದಾಗ ಭಾರತದ ಏಕತೆಗೆ ಧಕ್ಕೆ ಆಗುವುದಿಲ್ಲ ಸಂಘ-ಸಂಸ್ಥೆಗಳು ತಮ್ಮ ಬಾವುಟ ಹಾರಿಸಿದರೆ ಭಾರತದ ಏಕತೆಗೆ ಧಕ್ಕೆ ಆಗುವುದಿಲ್ಲ ಆದರೆ ಕನ್ನಡಿಗರು ಬಾವುಟ ಹಾರಿಸಿದರೆ ಭಾರತದ ಏಕತೆಗೆ ಧಕ್ಕೆ ಆಗುತ್ತದೆ #ನಮ್ಮಧ್ವಜ_ನಮ್ಮಹೆಮ್ಮೆ pic.twitter.com/EIPf6MFtpH
— Suhas D G (@Suhas_D_G) November 2, 2020
*ರಾಜ್ಯೋತ್ಸವದಂದು ಕನ್ನಡ ಧ್ವಜ ಹಾರಿಸದ ಸರ್ಕಾರದ ನಡೆಗೆ ಕನ್ನಡಿಗರ ಆಕ್ರೋಶ: ಟ್ವಿಟರ್ ಆಂದೋಲನಕ್ಕೆ ಕರೆ*
ಬಿ.ಎಸ್.ಯಡಿಯೂರಪ್ಪನವರೇ ಕನ್ನಡ ಧ್ವಜ ಹಾರಿಸಿರುವಾಗ ಜಿಲ್ಲಾ ಉಸ್ತುವಾರಿ ಸಚಿವರು ಬಾವುಟ ಹಾರಿಸದಂತೆ ತಡೆದ ಶಕ್ತಿ ಯಾವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರಶ್ನಿಸಿದೆ.#ನಮ್ಮಧ್ವಜ_ನಮ್ಮಹೆಮ್ಮೆhttps://t.co/oA8mP0QVjf
— ಸಣ್ಣೀರಪ್ಪ (@SanneerappaK) November 2, 2020