ಬಿಹಾರದಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ, ಲೋಕ ಜನಶಕ್ತಿ ಪಕ್ಷ (LJP) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ಮತ್ತೊಮ್ಮೆ ನಿತೀಶ್ ಕುಮಾರ್ ವಿರುದ್ದ ಕಿಡಿಕಾರಿದ್ದಾರೆ. ನವೆಂಬರ್ 10 (ಮತ ಎಣಿಕೆಯ ದಿನ) ನಂತರ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಇನ್ನು ಯಾವತ್ತೂ ಮುಖ್ಯಮಂತ್ರಿಯಾಗಿರಲ್ಲ, ಎಂದು ಹೇಳಿದ್ದಾರೆ.
ಮಂಗಳವಾರ ಮತದಾನ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿರುವ ಚಿರಾಗ್ ಪಾಸ್ವಾನ್, ಬಿಹಾರವನ್ನು ನಿತೀಶ್ ಮುಕ್ತರನ್ನಾಗಿಸಲು ಬಿಹಾರದ ಜನತೆ ಮತ ನೀಡುತ್ತಿದ್ದಾರೆ. ಇದರೊಂದಿಗೆ, ನನ್ನ ʼಬಿಹಾರ ಮೊದಲು-ಬಿಹಾರಿ ಮೊದಲುʼ ಎಂಬ ಆಶಯವನ್ನು ಗುರಿ ತಲುಪಿಸಲೂ ಆಶಿರ್ವಾದ ನೀಡಿದ್ದಾರೆ, ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಂತರ ಟ್ವಿಟರ್‌ನಲ್ಲಿ ನಿತಿಶ್ ಕುಮಾರ್ ವಿರುದ್ದ ಕಿಡಿಕಾರಿರುವ ಪಾಸ್ವಾನ್, ನಿತೀಶ್ ಆಡಳಿತದಲ್ಲಿ ಬಿಹಾರ ರಾಜ್ಯವು ತನ್ನ ಹೆಸರನ್ನು ಕೆಡಿಸಿಕೊಂಡಿದೆ. ನಾವು ಬಿಹಾರಿಗಳು ಎಂದು ಹೇಳಲು ಕೂಡಾ ನಮಗೆ ನಾಚಿಕೆಯಾಗುತ್ತದೆ. ವಲಸೆ, ಉದ್ಯೋಗ ಮತ್ತು ಪ್ರವಾಹ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣವಾಗಿ ಎಡವಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇಬ್ಬರೂ ತಮ್ಮ ಜೀವನವನ್ನು ಕತ್ತಲೆಯಲ್ಲಿ ಕಳೆಯುತ್ತಿದ್ದಾರೆ, ಎಂದು ಬರೆದುಕೊಂಡಿದ್ದಾರೆ.
15 साल मुख्यमंत्री बनने के बाद भी पिछले 5 साल में विकास का कार्य गिनवाने के नाम पर मौन रहने वालों को आगामी 10 तारीख़ को बिहार की जनता सबक़ सिखाएगी।कोरोना बाढ़ पलायन रोज़गार कृषि शिक्षा स्वास्थ की समस्याओं पर मौन क्यों ? #असम्भवनीतीश
— युवा बिहारी चिराग पासवान (@iChiragPaswan) November 3, 2020
पिछले 15 साल में बिहार बदनाम से बदहाल हो गया।पलायन,रोजगार,बाढ़ में नहीं हुआ कोई सुधार।शिक्षक और बच्चे दोनो अपना जीवन उदासी में जी रहें हैं।प्रवासी बिहारी दूसरे प्रदेश मे बताने में शर्माते है की वह बिहारी हैं।आज फिर लोकतंत्र ने मौक़ा दिया है अपनी तक़दीर बदलने का।#असम्भवनीतीश
— युवा बिहारी चिराग पासवान (@iChiragPaswan) November 3, 2020
“ಬಿಹಾರದ ಹಣೆಬರಹವನ್ನು ಬದಲಾಯಿಸಲು ಪ್ರಜಾಪ್ರಭುತ್ವವು ಬಿಹಾರಿಗಳಿಗೆ ಉತ್ತಮ ಅವಕಾಶವನ್ನು ತಂದುಕೊಟ್ಟಿದೆ,” ಎಂದು ಪಾಸ್ವಾನ್ ಹೇಳಿದ್ದಾರೆ.