ರಾಜ್ಯ ಕಾಂಗ್ರೆಸ್ (Congress) ಪಾಳಯದಲ್ಲಿ ಕೆಪಿಸಿಸಿ (KPCC) ಗದ್ದುಗೆ ಗುದ್ದಾಟಕ್ಕೆ ಸಂಬಂಧಪಟ್ಟಂತೆ ಕಿತ್ತಾಟ ಜೋರಾಗಿದ್ದು, ಈ ಮಧ್ಯೆ ನಿನ್ನೆ (ಫೆ 21) ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯಲಿದೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ (Dcm DK Shivakumar) ಹೇಳಿಕೆ ನೀಡಿದ್ದರು.
ಈ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga reddy) ಪ್ರತಿಕ್ರಿಯಿಸಿದ್ದು, ಮುಂದಿನ ಚುನಾವಣೆ ಯಾರ ನೇತೃತ್ವದಲ್ಲಿ ನಡೆಯಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಅದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ.ಯಾವ ಚುನಾವಣೆಗೆ ಯಾರು ಎಂಬುದನ್ನ ಹೈಕಮಾಂಡ್ ತೀರ್ಮಾನಿಸುತ್ತೆ.ನನಗೆ ಆಗೋದಿಲ್ಲ ಅಂತಾ ಗೊತ್ತು, ಹಾಗಾಗಿ ನಾನು ಆ ಸ್ಥಾನಕ್ಕೆ ಆಸೆಪಡೋದಿಲ್ಲ ಎಂದಿದ್ದಾರೆ.