• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ನಟನಾಗಲು ಸಿನಿಮಾಗೆ ಬಂದ ಅಪ್ಪ ಚಿತ್ರಸಾಹಿತಿಯಾದರು

by
July 2, 2020
in ಕರ್ನಾಟಕ
0
ನಟನಾಗಲು ಸಿನಿಮಾಗೆ ಬಂದ ಅಪ್ಪ ಚಿತ್ರಸಾಹಿತಿಯಾದರು
Share on WhatsAppShare on FacebookShare on Telegram

ಅಪ್ಪನಿಗೆ ನಟನಾಗಬೇಕೆನ್ನುವ ಆಸೆಯಿತ್ತು. ಚಿಕ್ಕವಯಸ್ಸಿನಲ್ಲೇ ಅವರು ನಮ್ಮ ತಾತ ಚಿತ್ರಕಥೆ – ಸಂಭಾಷಣೆ ಬರೆಯುತ್ತಿದ್ದ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಆರಂಭಿಸಿದ್ದರು. ನಟನಾಗುವ ತಮ್ಮ ಕನಸನ್ನು ಅವರೆಂದೂ ಬಿಟ್ಟುಕೊಟ್ಟಿರಲಿಲ್ಲ. ಮುಂದೊಂದು ದಿನ ನಟನಾಗುವ ಅವರ ಒತ್ತಾಸೆಗೆ ತಾತನ ಕಡೆಯಿಂದ ಒಪ್ಪಿಗೆ ಸಿಕ್ಕಿತು. ಆದರೆ ತಾವು ಶಿಫಾರಸು ಮಾಡಲು ಅವರು ಸಿದ್ಧರಿರಲಿಲ್ಲ.

ADVERTISEMENT

ಅಪ್ಪ ಅದೊಂದು ದಿನ ಹಿರಿಯ ಕನ್ನಡ ಚಿತ್ರ ನಿರ್ದೇಶಕರೊಬ್ಬರೆದುರು ಹೋಗಿ ತಮ್ಮ ಆಸೆಯನ್ನು ನಿವೇದಿಸಿಕೊಂಡರು. ತುಂಬಾ ಸಣ್ಣಗಿದ್ದ ಅಪ್ಪನಿಗೆ, ಆ ನಿರ್ದೇಶಕರು ದಪ್ಪಗಾಗುವಂತೆ ಸೂಚಿಸಿದರಂತೆ. ಇದರಿಂದ ಉತ್ತೇಜಿತರಾದ ಅಪ್ಪ `ಅತಿ ಬೇಗ ದಪ್ಪಗಾಗುವ’ ಪ್ರಕ್ರಿಯೆ ಆರಂಭಿಸಿದ್ದಾರೆ. ಅವರಿಗೆ ಹಲವರಿಂದ ವಿವಿಧ ರೀತಿಯ ಸಲಹೆಗಳು ಸಿಕ್ಕಿದ್ದವು. ಕಡಲೇಕಾಯಿ ನೀರಲ್ಲಿ ನೆನೆಸಿ ಬೆಳಗ್ಗೆ ಎದ್ದಾಕ್ಷಣ ತಿನ್ನುತ್ತಾ ಬಂದರೆ ಬೇಗ ದಪ್ಪಗಾಗಬಹುದು ಎನ್ನುವುದೂ ಸೇರಿದಂತೆ ಕೆಲವು ಸಲಹೆಗಳನ್ನು ಅವರು ಶ್ರದ್ಧೆಯಿಂದ ಪಾಲಿಸಿದ್ದಾರೆ. ಕೊನೆಗೆ ಈ ಉಪಾಯಗಳು ಫಲಿಸಿವೆ!

ಸಿನಿಮಾವೊಂದರ ಚಿತ್ರಕಥೆಗೆ ಸಂಬಂಸಿದಂತೆ ತಂದೆ ಸದಾಶಿವಯ್ಯನವರು ಪುತ್ರ ಉದಯಶಂಕರ್ಗೆ ಸಲಹೆ ನೀಡುತ್ತಿರುವ ಸಂದರ್ಭ

ದಪ್ಪಗಾದ ಅಪ್ಪ ಸೀದಾ ಹೋಗಿ ಹಿಂದೊಮ್ಮೆ ತಾವು ಭೇಟಿ ಮಾಡಿದ್ದ ನಿರ್ದೇಶಕರೆದುರು ನಿಂತಿದ್ದಾರೆ. ಆಗ ಆ ನಿರ್ದೇಶಕರು, `ನಾನು ದಪ್ಪಗಾಗು ಎಂದು ಹೇಳಿದ್ದೇನೋ ಹೌದು. ಆದರೆ ಅದಕ್ಕೂ ಒಂದು ಮಿತಿ ಇರಬೇಕು. ನೀನು ಹೀಗೆ ಮೈ ಬೆಳೆಸಿಕೊಂಡು ಬಂದರೆ ನಾನು ನಿನಗೆ ರಾಕ್ಷಸನ ಪಾತ್ರ ಸೃಷ್ಟಿಸಬೇಕಷ್ಟೆ!’ ಎಂದಿದ್ದಾರೆ. ಅಲ್ಲಿಗೆ ನಟನಾಗುವ ಅಪ್ಪನ ಆಸೆ ಕಮರಿತು. ಮುಂದೆ ಚಿತ್ರಸಾಹಿತಿಯಾಗಿ ಮಿಂಚಿದ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿ ತಮ್ಮ ಆಸೆ ಪೂರೈಸಿಕೊಂಡರು. ಆದರೆ ದಪ್ಪಗಿದ್ದುದರಿಂದ ಹಾಸ್ಯಪಾತ್ರಗಳಿಗಷ್ಟೇ ಅವರು ಸೀಮಿತರಾಗಬೇಕಾಯ್ತು.

ತಮ್ಮಷ್ಟಕ್ಕೆ ತಾವು ನಗುತ್ತಿದ್ದರು!

50-60ರ ದಶಕಗಳಲ್ಲಿ ವರ್ಷವೊಂದಕ್ಕೆ ತಯಾರಾಗುತ್ತಿದ್ದುದು ಬೆರಳೆಣಿಕೆಯ ಕನ್ನಡ ಚಿತ್ರಗಳಷ್ಟೆ. ಹಾಗಾಗಿ ಸಂಪಾದನೆಗೂ ಮಿತಿ ಇರುತ್ತಿತ್ತು. ತಾತನ(ಚಿತ್ರಸಾಹಿತಿ ಚಿ.ಸದಾಶಿವಯ್ಯ) ಜೊತೆ ತಾವೂ ಮನೆಗೆ ದುಡಿಯಬೇಕೆಂದು ಅಪ್ಪ ಪ್ರಯತ್ನಿಸುತ್ತಿದ್ದರು. ಎಲ್ಐಸಿ ಏಜೆಂಟ್ ಆಗಿದ್ದ ಅಪ್ಪ ಒಂದು ಹಂತದಲ್ಲಿ ಮದರಾಸಿನಿಂದ ಬೆಂಗಳೂರಿಗೆ ಹಿಂತಿರುಗಿ ಬೇರೆ ಏನಾದರೂ ವೃತ್ತಿ ಕೈಗೊಳ್ಳಬೇಕೆಂದು ಆಲೋಚಿಸಿದ್ದರಂತೆ. ಆಗ ಅವರಿಗೆ ರಾಜಕುಮಾರ್ ನೌತಿಕ ಬೆಂಬಲ ನೀಡಿ ಸಂತೈಸಿದ್ದರು. `ಆತುರ ಬೇಡ, ಎಲ್ಲದಕ್ಕೂ ಕಾಲ ಕೂಡಿ ಬರಬೇಕು…’ ಎನ್ನುವ ರಾಜ್‌ರ ಹಿತನುಡಿಯಿಂದಾಗಿ ಅಪ್ಪ ಮದರಾಸಿನಲ್ಲೇ ಉಳಿದರು. ರಾಜ್‌ರ ಮಾತುಗಳಂತೆ ಮುಂದೆ ಅಪ್ಪ ಬಿಡುವಿಲ್ಲದ ಚಿತ್ರಸಾಹಿತಿಯಾಗಿ ಬೆಳೆದದ್ದು ಇತಿಹಾಸ.

ಭಲೇ ಹುಚ್ಚ ಚಿತ್ರೀಕರಣದ ಸಂದರ್ಭದಲ್ಲಿ ರಾಜಕುಮಾರ್ ಜೊತೆ ಉದಯಶಂಕರ್

ನನಗೆ ಈಗಲೂ ನೆನಪಿದೆ. ಅಪ್ಪ ಸಿನಿಮಾಗೆ ಹಾಡು, ಚಿತ್ರಕಥೆ, ಸಂಭಾಷಣೆ ಬರೆಯುವಾಗ ಬರವಣಿಗೆಯಲ್ಲಿ ಲೀನವಾಗಿಬಿಡುತ್ತಿದ್ದರು. ದುಃಖ, ಹಾಸ್ಯದ ಸನ್ನಿವೇಶಗಳನ್ನು ಬರೆಯುವಾಗ ಸ್ವತಃ ತಾವೂ ಭಾವುಕರಾಗುವುದು, ನಗುವುದೂ ಇತ್ತು! ಆಗೆಲ್ಲಾ ನಾನು ಮತ್ತು ಅಮ್ಮ ಇಬ್ಬರೂ ಅವರನ್ನು ನೋಡಿ ನಗುತ್ತಿದ್ದೆವು. ಇದರ ಪರಿವೆಯಿಲ್ಲದೆ ಅವರು ತಮ್ಮ ಪಾಡಿಗೆ ತಾವು ಸನ್ನಿವೇಶಗಳಲ್ಲಿ ಮುಳುಗಿರುತ್ತಿದ್ದರು.

ಇಲ್ಲೊಂದು ಘಟನೆಯನ್ನು ಪ್ರಸ್ತಾಪಿಸಲು ಇಚ್ಛಿಸುತ್ತೇನೆ. ಆಗ ಕನ್ನದಾಸನ್ ದಕ್ಷಿಣ ಭಾರತದ ಬಹುದೊಡ್ಡ ಚಿತ್ರಸಾಹಿತಿ. ತಮಿಳು, ತೆಲುಗು ಮತ್ತು ಕನ್ನಡ ಮೂರೂ ಭಾಷೆಗಳಲ್ಲಿ ಚಿತ್ರವೊಂದು ಸೆಟ್ಟೇರಿತ್ತು. ಸ್ಟುಡಿಯೋಗೆ ಬಂದ ಕನ್ನದಾಸನ್ ಟ್ಯೂನ್‌ಗೆ ಸರಿಯಾಗಿ ತಮಿಳು ಅವತರಣಿಕೆಗೆ ಹದಿನೈದು ನಿಮಿಷಗಳಲ್ಲೇ ಸಾಹಿತ್ಯ ಬರೆದರಂತೆ. ಅದೇ ವೇಳೆ ಅಪ್ಪ ಕೂಡ ಕನ್ನಡ ಅವತರಣಿಕೆಗೆ ಹಾಡು ಬರೆದುಕೊಟ್ಟಿದ್ದಾರೆ. ಹದಿನೈದು ನಿಮಿಷದಲ್ಲೇ ಟ್ಯೂನ್‌ಗೆ ಗೀತೆ ರಚಿಸಿಕೊಟ್ಟ ಅಪ್ಪನ ಬಗ್ಗೆ ಕನ್ನದಾಸನ್ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರಂತೆ. `ನಿಮಗೆ ಸರಸ್ವತಿ ಒಲಿದಿದ್ದಾಳೆ. ದೊಡ್ಡ ಸಾಧನೆ ಮಾಡುತ್ತೀರಿ’ ಎಂದು ಕನ್ನದಾಸನ್ ಆಲಂಗಿಸಿಕೊಂಡದ್ದನ್ನು ಅಪ್ಪ ನಮ್ಮಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಕನ್ನದಾಸನ್ ಹಾರೈಕೆ, ಆಶಿರ್ವಾದ ಫಲಿಸಿದ್ದಕ್ಕೆ ಕನ್ನಡಿಗರಾದ ನಾವೆಲ್ಲಾ ಸಾಕ್ಷಿಯಾಗಿದ್ದೇವೆ.

ಚಿ ಉದಯಶಂಕರ್:

ತಂದೆಯ ನೆರಳಿನಲ್ಲಿ ಚಿತ್ರಸಾಹಿತಿಯಾಗಿ ರೂಪುಗೊಂಡ ಚಿ ಉದಯಶಂಕರ್ ಚಿತ್ರಸಾಹಿತ್ಯ ವೃತ್ತಿಗೆ ಗೌರವ ತಂದುಕೊಟ್ಟರು. ಬರವಣಿಗೆಯಲ್ಲಿ ಪ್ರೌಢಿಮೆ ಇದ್ದರೂ ಉದಯಶಂಕರ್‌ರಿಗೆ ಆಸಕ್ತಿಯಿದ್ದುದು ನಟನೆಯಲ್ಲಿ. ಆದರೆ ನಟನಾಗಿ ರೂಪುಗೊಳ್ಳುವಲ್ಲಿ ಅದೃಷ್ಟ ಕೈಹಿಡಿಯಲಿಲ್ಲ. ಇದರಿಂದ ವರವಾಗಿದ್ದು ಚಿತ್ರಸಾಹಿತ್ಯಕ್ಕೆ! ಪ್ರೌಢಶಾಲೆ ನಂತರ ಸಿನಿಮಾಟೋಗ್ರಫಿ ಕಲಿತ ಉದಯಶಂಕರ್ ತಂದೆಯವರೊಂದಿಗೆ ಮದರಾಸಿನಲ್ಲಿದ್ದರು.

`ವಿಜಯನಗರದ ವೀರಪುತ್ರ’ ಸೇರಿದಂತೆ ಕೆಲವು ಚಿತ್ರಗಳ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದೂ ಆಯ್ತು. ಮುಂದೆ ತಂದೆಯ ಸಲಹೆ ಮೇರೆಗೆ ಬರವಣಿಗೆಯತ್ತ ಹೊರಳಿದರು. `ಸಂತ ತುಕಾರಾಂ’ (1963) ಚಿತ್ರಕ್ಕೆ ಸಂಭಾಷಣೆ ರಚಿಸುವುದರೊಂದಿಗೆ ಚಿತ್ರಸಾಹಿತಿಯಾಗಿ ಅವರ ಸಿನಿಮಾ ಪ್ರವೇಶವಾಯ್ತು. `ಶಿವರಾತ್ರಿ ಮಹಾತ್ಮೆ'(1964) ಚಿತ್ರಕ್ಕೆ ಮೊದಲ ಹಾಡು ಬರೆದರು. ರಾಜಕುಮಾರ್‌ಗೆ ಇವರು ಬರೆದ `ಮನಮೋಹಿನಿ ಸರಿಸೆಯಾ ನಾಚಿಕೆಯ ತೆರೆಯಾ…’ ಚೊಚ್ಚಲ ಗೀತೆಯನ್ನು ಪಿ ಬಿ ಶ್ರೀನಿವಾಸ್ ಹಾಡಿದ್ದರು. `ಮಹಾಸತಿ ಅನಸೂಯ’, ಇವರು ಸಂಭಾಷಣೆ ಮತ್ತು ಹಾಡುಗಳನ್ನು ಬರೆದ ಮೊದಲ ಚಿತ್ರ. ಸರಳ ಮತ್ತು ಲಯಬದ್ಧತೆ ಇವರ ಹಾಡಿನ ವೈಶಿಷ್ಟ್ಯ.

ಚಿ ಉದಯಶಂಕರ್ ಕಿರಿಯ ಸಹೋದರ ಚಿ ದತ್ತರಾಜ್‌ರವರ ಮಾಹಿತಿಯನ್ವಯ ಚಿ ಉದಯಶಂಕರ್ 300ಕ್ಕೂ ಹೆಚ್ಚು ಚಿತ್ರಗಳಿಗೆ ಚಿತ್ರಸಾಹಿತ್ಯ ಬರೆದಿದ್ದು, ಅವರು ರಚಿಸಿರುವ ಹಾಡುಗಳ ಸಂಖ್ಯೆ ಮೂರು ಸಾವಿರ ದಾಟುತ್ತದೆ. ಡಾ ರಾಜ್ ಅಭಿನಯದ 98 ಚಿತ್ರಗಳ ಚಿತ್ರಸಾಹಿತ್ಯ ಚಿ ಉದಯಶಂಕರ್ ಅವರದ್ದೇ.

ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಇವುಗಳ ಪೈಕಿ ಬಹುತೇಕ ಹಾಸ್ಯಪಾತ್ರಗಳು ಎನ್ನುವುದು ವಿಶೇಷ. ಕುಲಗೌರವ, ನಾಗರಹಾವು, ಪ್ರೇಮದ ಕಾಣಿಕೆ, ಜೀವನ ಚೈತ್ರ ಚಿತ್ರಗಳ ಸಂಭಾಷಣೆಗಾಗಿ ಹಾಗೂ ಭಾಗ್ಯದ ಲಕ್ಷ್ಮೀ ಬಾರಮ್ಮ, ಆನಂದ್ ಚಿತ್ರಗಳ ಚಿತ್ರಕಥೆಗಾಗಿ ರಾಜ್ಯ ಪ್ರಶಸ್ತಿಗಳು ಸಂದಿವೆ. ಚಿ ಉದಯಶಂಕರ್‌ರ ಕಿರಿಯ ಪುತ್ರ, ನಟ ಚಿ ರವಿಶಂಕರ್ ಹರೆಯದಲ್ಲೇ ಅಪಘಾತವೊಂದರಲ್ಲಿ ಕಾಲವಾದರು. ಹಿರಿಯ ಪುತ್ರ ಚಿ ಗುರುದತ್ ನಟನೆ, ನಿರ್ದೇಶನದಲ್ಲಿ ಸಕ್ರಿಯರಾಗಿದ್ದಾರೆ. ಉದಯಶಂಕರ್ 1993ರಲ್ಲಿ ನಮ್ಮನ್ನಗಲಿದರು.

Tags: Chi GurudatthChi Udayshankarsandalwoodಕನ್ನಡ ಚಿತ್ರರಂಗಚಿ ಉದಯಶಂಕರ್ಚಿ ಗುರುದತ್ಚಿತ್ರಸಾಹಿತಿ
Previous Post

ಆನ್ ಲೈನ್‌ನಲ್ಲಿ ರಾಜ್ಯ ಪಠ್ಯ ಪುಸ್ತಕಗಳು

Next Post

ಕರೋನಾ ಸೋಂಕಿತರ ಶವ ಸಂಸ್ಕಾರ ಸರಣಿ ಯಡವಟ್ಟುಗಳಿಗೆ ಕಾರಣವೇನು?

Related Posts

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
0

ಶಾಸಕರ ಅಭಿಪ್ರಾಯ ಪಕ್ಷದ ವರಿಷ್ಠರ ತೀರ್ಮಾನವಲ್ಲ, ನಾವಿಬ್ಬರೂ ವರಿಷ್ಠರ ತೀರ್ಮಾನಕ್ಕೆ ಬದ್ಧ ಮುಖ್ಯಮಂತ್ರಿಗಳ ಬದಲಾವಣೆ ಮಾಧ್ಯಮಗಳ ಸೃಷ್ಠಿ - ಊಹಾಪೋಹಗಳಿಗೆ ಆಸ್ಪದವಿಲ್ಲ-ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ,ಜುಲೈ 10 :...

Read moreDetails

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

July 10, 2025

5ವರ್ಷ ನಾನೇ ಸಿಎಂರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ..!

July 10, 2025

ಗೃಹ ಸಚಿವರು ಏನೇ ಕೇಳಿದ್ರೂ I Dont No ಅಂತಾರೇ..!

July 10, 2025
5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 

5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 

July 10, 2025
Next Post
ಕರೋನಾ ಸೋಂಕಿತರ ಶವ ಸಂಸ್ಕಾರ ಸರಣಿ ಯಡವಟ್ಟುಗಳಿಗೆ ಕಾರಣವೇನು?

ಕರೋನಾ ಸೋಂಕಿತರ ಶವ ಸಂಸ್ಕಾರ ಸರಣಿ ಯಡವಟ್ಟುಗಳಿಗೆ ಕಾರಣವೇನು?

Please login to join discussion

Recent News

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
Top Story

5ವರ್ಷ ನಾನೇ ಸಿಎಂರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ..!

by ಪ್ರತಿಧ್ವನಿ
July 10, 2025
Top Story

ಗೃಹ ಸಚಿವರು ಏನೇ ಕೇಳಿದ್ರೂ I Dont No ಅಂತಾರೇ..!

by ಪ್ರತಿಧ್ವನಿ
July 10, 2025
5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 
Top Story

5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 

by Chetan
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

July 10, 2025

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

July 10, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada