ಹೊಸ ಶತಮಾನದ ಮೊದಲ ದಶಕ ಪೂರೈಸುವ ಹೊತ್ತಿಗೆ ಹಿಂದಿರುಗಿ ನೋಡಿದರೆ, ಇಡೀ ದಶಕದಲ್ಲೇ 2019ನೇ ಸಾಲು ಸರಣಿ ವಿಷೇಶಗಳವರ್ಷವಾಗಿ ಇತಿಹಾಸ ಸೇರುತ್ತಿದೆ. ಮತ್ತು ಅತ್ಯಂತ ಮಹತ್ವದ ಬೆಳವಣಿಗೆಗಳನ್ನು ಹೊಸ ವರ್ಷಕ್ಕಷ್ಟೇ ಅಲ್ಲಾ ಹೊಸದೊಂದು ದಶಕಕ್ಕೂಕೊಂಡೊಯ್ಯುತ್ತಿದೆ. ಈ ಹೊತ್ತಿನಲ್ಲಿ ಹಿಂತಿರುಗಿ ನೋಡಿದಾಗ ದಾಖಲು ಮಾಡಬೇಕಾದ ಹಲವಾರು ಸಂಗತಿಗಳಿವೆ. ದೇಶದ ಆರ್ಥಿಕತೆಯ ಪಾಲಿಗೆ ನಿರ್ಣಾಯಕ ಎನಿಸಿದಆಯ್ದ ಪ್ರಮುಖ ಘಟನೆಗಳನ್ನು ಎರಡು ಭಾಗಗಳಲ್ಲಿ ‘ಪ್ರತಿಧ್ವನಿ’ ದಾಖಲಿಸಿದೆ.
ಹಿಂಜರಿತದತ್ತಾ ದಾಪುಗಾಲು ಹಾಕಿದ ಆರ್ಥಿಕ ಅಭಿವೃದ್ಧಿ: ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದ ಅಪನಗದೀಕರಣದ ವೇಳೆ ಅನುರಣಿಸಿದ ಆರ್ಥಿಕತೆ ಮರಣಮೃದಂಗದತರಂಗಳೂವರ್ಷವಿಡೀಕಂಪಿಸುತ್ತಿದ್ದವು. ತತ್ಪರಿಣಾಮ ದೇಶದ ಜಿಡಿಪಿ ಸತತ ಕುಸಿತದಹಾದಿಯಲ್ಲಿ ಸಾಗಿತು. ವೀತ್ತೀಯ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿಜಿಡಿಪಿ ಶೇ.4.5ಕ್ಕೆ ಇಳಿಯುವುದರೊಂದಿಗೆ ಮೋದಿ ಸರ್ಕಾರದ ಅತಿ ಕನಿಷ್ಠ ಆರ್ಥಿಕ ಬೆಳವಣಿಗೆ ದಾಖಲಾಯಿತು. ಆರ್ಥಿಕ ತಜ್ಞರ ಪ್ರಕಾರ ಬರುವ ದಿನಗಳಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಈಗಾಗಲೇ ಪ್ರಕಟಿತ ಅಂಕಿ ಅಂಶಗಳು ವಿತ್ತೀಯ ವರ್ಷದ ಪೂರ್ವಾರ್ಧದಲ್ಲಿ ಶೇ.4.75ರಷ್ಟಿದ್ದರೆ, ವರ್ಷವಿಡೀ ಅದು ಶೇ.4.2ಕ್ಕೆ ತಗ್ಗುವಆಪಾಯದ ಮುನ್ಸೂಚನೆ ಇದೆ. ನಮ್ಮ ಭಾರತೀಯ ರಿಸರ್ವ್ ಬ್ಯಾಂಕ್ ಅಷ್ಟೇ ಅಲ್ಲ, ವಿಶ್ವಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸೇರಿದಂತೆ ಜಾಗತಿಕ ವಿತ್ತೀಯ ಸಂಸ್ಥೆಗಳು, ರೇಟಿಂಗ್ಏಜೆನ್ಸಿಗಳು ಭಾರತದ ಅಭಿವೃದ್ಧಿ ಪಥದಮುನ್ನಂದಾಜನ್ನುಗಣನೀಯಾಗಿತಗ್ಗಿಸಿವೆ. ದೇಶದ ಆರ್ಥಿಕತೆ ಚೇತರಿಸಿಕೊಳ್ಳುವ ಸಾಧ್ಯತೆಗಳು ಸದ್ಯಕ್ಕೆ ಕಾಣುತ್ತಿಲ್ಲ.
ಉದಾರತೆ ಮೆರೆದ ಭಾರತೀಯ ರಿಸರ್ವ್ ಬ್ಯಾಂಕ್: ಅತ್ತ ಆರ್ಥಿಕತೆ ಹಿಂಜರಿತದತ್ತ ದಾಪುಗಾಲು ಹಾಕುತ್ತಿದ್ದರೆ, ಅದನ್ನು ತಡೆಯುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸತತ ಪ್ರಯತ್ನ ಮಾಡುತ್ತಲೇ ಇತ್ತು. ಇಡೀ ವರ್ಷದಲ್ಲಿ ಅಭೂತಪೂರ್ವ ಎನಿಸುವಷ್ಟು ಶೇ.1.35ರಷ್ಟು ಬಡ್ಡಿದರ (ರೆಪೊದರ)ವನ್ನು ತಗ್ಗಿಸಿತು. ಪ್ರಸ್ತುತ ಶೇ.5.15ಕ್ಕೆ ಇಳಿದಿರುವ ರೆಪೊದರವುದಶಕದಲ್ಲೇ ಅತಿ ಕನಿಷ್ಠಮಟ್ಟದ್ದಾಗಿದೆ. ಆರ್ಥಿಕತೆ ಕುಸಿತಕ್ಕೆಕಾರಣವಾಗಿದ್ದ ನಗದು ಬಿಕ್ಕಟ್ಟು ನಿವಾರಿಸುವುದು ಮತ್ತು ಜನರ ಖರೀದಿ ಶಕ್ತಿಯನ್ನು ಉದ್ದೀಪಿಸುವುದುಆರ್ಬಿಐಉದ್ದೇಶವಾಗಿತ್ತು. ಆರ್ಬಿಐ ಕಡಿತ ಮಾಡಿದ ಪ್ರಮಾಣದಲ್ಲೇಬ್ಯಾಂಕುಗಳುಸಾಲಗಳ ಮೇಲಿನ ಬಡ್ಡಿಯನ್ನು ಕಡಿತ ಮಾಡಲಿಲ್ಲ. ಹೀಗಾಗಿ ಆರ್ಬಿಐನ ಸತತ ಪ್ರಯತ್ನಗಳ ನಡುವೆಯೂ ಆರ್ಥಿಕತೆಗೆಚೇತರಿಕೆ ಬರಲಿಲ್ಲ ಎಂಬುದು ಅಚ್ಚರಿಯ ಜತೆಗೆ ಆತಂಕವನ್ನೂ ತಂದಿತು.
ನಗದು ಕೊರತೆ ಬಿಕ್ಕಟ್ಟಿನ ಕರಾಳ ಮುಖ: ದೇಶದಲ್ಲಿ ನಗದು ಕೊರತೆಯಬಿಕ್ಕಟ್ಟನ್ನು ಬಹಿರಂಗ ಪಡಿಸಿದಐಎಲ್ಅಂಡ್ಎಫ್ಎಸ್ಸುಸ್ತಿಯಾದ ಘಟನೆ ಹಿಂದಿನ ವಿತ್ತೀಯ ವರ್ಷದಲ್ಲಾದರೂ, ಅದರ ಕರಾಳಮುಖದದರ್ಶನವಾಗಿದ್ದು 2019ರಲ್ಲಿ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಎದುರಿಸುತ್ತಿದ್ದ ಹೊಸದೊಂದು ಬೃಹತ್ ಸಮಸ್ಯೆ ಬಹಿರಂಗಗೊಂಡಿತು. ನಗದು ಕೊರತೆಯ ಬಿಕ್ಕಟ್ಟು ಇಡೀ ಆರ್ಥಿಕತೆಯನ್ನುದಿಕ್ಕೆಡಿಸಿತು. ಅದಕ್ಕೆ ಮೊದಲ ಬಲಿಯಾಗಿದ್ದು ದಿವಾನ್ ಹೌಸಿಂಗ್ಫೈನಾನ್ಸ್ ಕಂಪನಿ (ಡಿಎಚ್ಎಫ್ಎಲ್). ಪಡೆದ ಸಾಲವನ್ನುಸಕಾಲದಲ್ಲಿಪಾವತಿಸಲಾಗದೇಸುಸ್ತಿಯಾಗಿದಿವಾಳಿಯತ್ತ ದಾಪುಗಾಲು ಹಾಕಿ ದಿವಾಳಿ ಸಂಹಿತೆಯಡಿವಿಲೇವಾರಿಗೆದಾಖಲಾದ ಮೊದಲ ಬ್ಯಾಂಕೇತರ ಹಣಕಾಸು ಸಂಸ್ಥೆ ಎಂಬ ಕುಖ್ಯಾತಿಗೆ ಗುರಿಯಾಯ್ತು. ಆದರೆ ಡಿಎಚ್ಎಫ್ಎಲ್ವೈಫಲ್ಯಗಳು ಇಡೀ ಭಾರತದ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಅಂತರಾಳದಲ್ಲಿನಆತಂಕಕಾರಿತಲ್ಲಣಗಳನ್ನುಬಿಚ್ಚಿಟ್ಟಿತು.
ಆರ್ಬಿಐಜೋಳಿಗೆಗೆಕೈಹಾಕಿದ ಕೇಂದ್ರ ಸರ್ಕಾರ: ದೇಶದ ಕೇಂದ್ರೀಯ ಬ್ಯಾಂಕಾಗಿಕಾರ್ಯನಿರ್ವಹಿಸುವ ಭಾರತೀಯ ರಿಸರ್ವ್ ಬ್ಯಾಂಕ್ ಗರಿಷ್ಠ ಲಾಭ ಮಾಡುವ ಬ್ಯಾಂಕು, ಅಷ್ಟೇ ಅಲ್ಲಾ ನಗದು ಶ್ರೀಮಂತ ಬ್ಯಾಂಕು. ಬಂದ ಲಾಭದಲ್ಲಿ ಪ್ರತಿ ವರ್ಷವೂಆರ್ಬಿಐ ಕೇಂದ್ರ ಸರ್ಕಾರಕ್ಕೆ ಲಾಭಾಂಶದ ಪಾಲನ್ನು ನೀಡುತ್ತದೆ. ಆಯಾ ವರ್ಷದಲ್ಲಿ ಮಾಡಿದ ಲಾಭದ ಪ್ರಮಾಣ ಅನುಸರಿಸಿ ಲಾಭಾಂಶವಿತರಿಸಲಾಗುತ್ತದೆ. ಉಳಿದ ಲಾಭವನ್ನುಆರ್ಬಿಐ ತನ್ನ ಮೀಸಲು ನಿಧಿಯಲ್ಲಿಟ್ಟುಕೊಳ್ಳುತ್ತದೆ. ಆರ್ಬಿಐ ಮೀಸಲು ನಿಧಿ ಹೆಚ್ಚಾದಷ್ಟೂ ಆರ್ಥಿಕ ವ್ಯವಸ್ಥೆ ಸದೃಢವಾಗಿರುವುದನ್ನುಪ್ರತಿಬಿಂಬಿಸುತ್ತದೆ. ನರೇಂದ್ರಮೋದಿ ಸರ್ಕಾರ ಆಡಳಿತಕ್ಕೆಬಂದಾಂಗಿಂದಲೂ ಮೀಸಲು ನಿಧಿಯ ಮೇಲೆ ಕಣ್ಣಿಟ್ಟಿತ್ತು. ಆರ್ಬಿಐಗವರ್ನರುಗಳಾಗಿದ್ದರಘುರಾಮ್ರಾಜನ್ ಮತ್ತು ಊರ್ಜಿತ್ ಪಟೇಲ್ ಮೀಸಲುನಿಧಿಯನ್ನುಕೇಂದ್ರಕ್ಕೆ ನೀಡಲು ನಿರಾಕರಿಸಿದ್ದರು. ಇದೇ ಕಾರಣಕ್ಕೆ ಊರ್ಜಿತ್ ಪಟೇಲ್ ಅವಧಿಗೆ ಮುಂಚಿತವಾಗಿ ಹುದ್ದೆ ತೊರೆದರು. ಮೋದಿ ಸರ್ಕಾರದಲ್ಲಿ ಆರ್ಥಿಕ ಇಲಾಖೆಯಲ್ಲಿಕಾರ್ಯದರ್ಶಿಯಾಗಿಕಾರ್ಯನಿರ್ವಹಿಸಿದ್ದಶಕ್ತಿಕಾಂತದಾಸ್ ಅವರನ್ನು ಆರ್ಬಿಐ ಗವರ್ನರ್ ಆಗಿ ನೇಮಕ ಮಾಡಲಾಯಿತು. ಅದಾದ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರವು ಆರ್ಬಿಐ ಮೀಸಲು ನಿಧಿಯಿಂದ 1.76 ಲಕ್ಷ ಕೋಟಿ ರುಪಾಯಿಗಳನ್ನು ತನ್ನ ಖಾತೆಗೆವರ್ಗಾಹಿಸಿಕೊಂಡಿತು.
ಹಿಮ್ಮುಖವಾಗಿಚಲಿಸಿದಆಟೋಮೊಬೈಲ್ ವಲಯ: ದೇಶದಲ್ಲಿ ವಾಹನಗಳ ಮಾರಾಟವುಏರುಹಾದಿಯಲ್ಲಿರುವುದು ಆರ್ಥಿಕತೆಯುಸದೃಢವಾಗಿದರ ಸಂಕೇತ. ವಾಹನ ಖರೀದಿಯು ಜನರ ಖರೀದಿ ಶಕ್ತಿಯನ್ನು ಸಂಕೇತಿಸುತ್ತದೆ. ಜಿಡಿಪಿಕುಸಿತದ ಬಗ್ಗೆ ಪ್ರಸ್ತಾಪಿಸಿದಾಗಲೆಲ್ಲ ವಾಹನ ಮಾರಾಟಗಳಪ್ರಸ್ತಾಪವಾಗುತ್ತದೆ. ಕಳೆದ ವಿತ್ತೀಯ ವರ್ಷದಲ್ಲೇ ಸತತ ಕುಸಿತದಹಾದಿಗೆಜಾರಿದ್ದ ವಾಹನಗಳ ಮಾರಾಟವು ಪ್ರಸಕ್ತ ವರ್ಷದಲ್ಲೂ ಮುಂದುವರೆದಿದೆ. ತ್ರೈಮಾಸಿಕದಿಂದತ್ರೈಮಾಸಿಕಕ್ಕೆ ವಾಹನ ಮಾರಾಟ ಕುಗ್ಗುತ್ತಿದೆ. ದ್ವಿಚಕ್ರವಾಹನ, ಕಾರುಗಳು, ಎಸ್ಯುವಿ, ವಾಣಿಜ್ಯ ವಾಹನಗಳು, ಪ್ರಯಾಣಿಕರ ವಾಹನಗಳು ಸೇರಿದಂತೆ ಯಾವ ವರ್ಗದಲ್ಲೂ ಮಾರಾಟ ಹೆಚ್ಚಳವಾಗಿಲ್ಲ. ಮಾರುತಿ, ಟಾಟಾಮೋರಾಟ್ಸ್, ಮಹಿಂದ್ರಅಂಡ್ಮಹಿಂದ್ರ ಸೇರಿದಂತೆ ಬಹುತೇಕ ಕಂಪನಿಗಳು ಗಣನೀಯ ಪ್ರಮಾಣದಲ್ಲಿ ಉತ್ಪಾದನೆ ತಗ್ಗಿಸಿದ್ದವು. ಮಾರಾಟವಾಗದೇ ಉಳಿದ ಸಿದ್ದ ವಾಹನಗಳನ್ನು ವಿಲೇವಾರಿ ಮಾಡುವುದಕ್ಕೆ ಹರಸಾಹಸಮಾಡುತ್ತಿವೆ. ಎಷ್ಟೆಲ್ಲಾ ರಿಯಾಯ್ತಿ ಘೋಷಣೆಯ ನಂತರವೂ ಜನರು ಖರೀದಿಗೆಮುಂದಾಗುತ್ತಿಲ್ಲ. ಇದು ಇಡೀ ಆಟೋಮೊಬೈಲ್ ಉದ್ಯಮ ಹಿಮ್ಮುಖವಾಗಿ ಚಲಿಸುವಂತೆ ಮಾಡಿದೆ. ಈ ವಲಯದ ಚೇತರಿಕೆಯಾದಾಗ ಮಾತ್ರವೇ ಒಟ್ಟಾರೆ ಆರ್ಥಿಕತೆಯೂಚೇತರಿಸಿಕೊಳ್ಳುತ್ತದೆ.
ದೂರಸಂಪರ್ಕ ಸೇವಾಕಂಪನಿಗಳ ಸಂಕಷ್ಟ: ಇಡೀ ಜಗತ್ತಿನಲ್ಲೇ ಅತಿ ಕಡಮೆ ದರದ ಮೊಬೈಲ್ ಸೇವೆ ಒದಗಿಸುತ್ತಿರುವ ಭಾರತದಲ್ಲಿ ಮೊಬೈಲ್ ಕಂಪನಿಗಳು ಮಾತ್ರ ಸಾಲದ ಹೊರೆಯಿಂದದಿಕ್ಕೆಟ್ಟಿವೆ. ಇತ್ತೀಚೆಗೆ ಸುಪ್ರೀಂಕೋರ್ಟ್ ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ (ಎಜಿಆರ್) ಕುರಿತ ವ್ಯಾಜ್ಯವನ್ನು ಕೇಂದ್ರ ದೂರಸಂಪರ್ಕ ಇಲಾಖೆ ಪರವಾಗಿ ಇತ್ಯರ್ಥಪಡಿಸಿದ್ದು, ಮೊಬೈಲ್ ಕಂಪನಿಗಳು ಭಾರಿ ಪ್ರಮಾಣದಲ್ಲಿ ಪೂರ್ವಾನ್ವಯವಾಗಿ ಬಾಕಿ ತೆರಿಗೆ ಪಾವತಿಸಬೇಕಿದೆ. ಭಾರತಿ ಏರ್ಟೆಲ್ 50,922 ಕೋಟಿ, ವೊಡಾಫೋನ್ಐಡಿಯಾ 23,044 ಕೋಟಿ ರುಪಾಯಿಗಳ ನಷ್ಟ ಘೋಷಣೆ ಮಾಡಿವೆ. ಭಾರ್ತಿಏರ್ಟೆಲ್, ವೊಡಾಫೋನ್ಐಡಿಯಾ ಮತ್ತು ರಿಲಯನ್ಸ್ಜಿಯೋ ಈ ಮೂರು ಕಂಪನಿಗಳ ಸಾಲದ ಹೊರೆಯು ತಲಾ ಒಂದು ಲಕ್ಷ ಕೋಟಿ ರುಪಾಯಿಗಳನ್ನುಮೀರಿದೆ. ಸುಮಾರು ನಾಲ್ಕು ವರ್ಷಗಳಿಂದ ಕಡಮೆ ದರದ ಸೇವೆ ಒದಗಿಸಿದ್ದ ಈ ಕಂಪನಿಗಳೀಗಸೇವಾ ಶುಲ್ಕ ಹೆಚ್ಚಿಸಲು ಆರಂಭಿಸಿವೆ. ಈ ಹೆಚ್ಚಳವುಆರಂಭವಾಗಿದ್ದು, ಬರುವ ದಿನಗಳಲ್ಲಿ ಅದೆಷ್ಟು ಪ್ರಮಾಣದಲ್ಲಿ ಏರಿಕೆ ಆಗುತ್ತದೆ ಎಂಬುದನ್ನು ಅಂದಾಜಿಸಲು ಸಾಧ್ಯವಿಲ್ಲ. ಏಕೆಂದರೆ ಈ ಕಂಪನಿಗಳ ಸಾಲದ ಹೊರೆಯನ್ನು ಗ್ರಾಹಕರೇಮುಂಬರುವ ದಿನಗಳಲ್ಲಿ ತೀರಿಸಬೇಕಿದೆ.
(ನಾಳೆ ಎರಡನೇ ಮತ್ತು ಕೊನೆ ಕಂತು)