ಕೋವಿಡ್-19 ರೋಗಿಗಳ ಸಂಖ್ಯೆ ಭಾರತದಲ್ಲಿ 2 ಸಾವಿರದ ಗಟಿ ದಾಟಿದೆ. ಈಗಾಗಲೇ ದೃಢಪಟ್ಟ ಪ್ರಕರಣಗಳು 2010 ಆಗಿದ್ದು, ಅದರಲ್ಲಿ 169 ಮಂದಿ ಗುಣಮುಖರಾದರೆ ಸಾವಿನ ಸಂಖ್ಯೆ 55 ಕ್ಕೆ ಏರಿದೆ. ಇಂದು ಒಂದೇ ದಿನ ಹೊಸ 375 ಪ್ರಕರಣಗಳು ದೇಶಾದ್ಯಂತ ದೃಢಪಟ್ಟಿವೆ, 6 ಮಂದಿ ಅಸುನೀಗಿದ್ದಾರೆ. ಇನ್ನು ಕರ್ನಾಟಕದಲ್ಲಿ ಇಂದು ಮತ್ತೆ 9 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ದೃಢಪಟ್ಟ ಸೋಂಕಿತರ ಸಂಖ್ಯೆ 110 ತಲುಪಿದೆ. ಅದರಲ್ಲಿ ಇದುವರೆಗೆ 3 ಮಂದಿ ಸಾವನ್ನಪ್ಪಿದ್ದರೆ, 9 ಜನ ಗುಣಮುಖರಾಗಿದ್ದಾರೆ. ಇನ್ನು ಇಂದು ಪತ್ತೆಯಾದ ಹೊಸ ಪ್ರಕರಣಗಳು ಮೈಸೂರು ಜಿಲ್ಲೆಯಲ್ಲಿ 5, ಬೆಂಗಳೂರಿನಲ್ಲಿ 3 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಪ್ರಕರಣಗಳು ದೃಢಪಟ್ಟಿವೆ. ಇವರೆಲ್ಲರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಂತೆಯೇ ಜಿಲ್ಲಾವಾರು ಗಮನಿಸೋದಾದರೆ ದೃಢಪಟ್ಟ ಪ್ರಕರಣ, ಗುಣಮುಖರಾದವರು ಹಾಗೂ ಸಾವಿಗೀಡಾದವರ ಪಟ್ಟಿ ಹೀಗಿದೆ.
ಇನ್ನು ಭಾರತದ ಪ್ರಮುಖ ಕರೋನಾ ಸೋಂಕು ಪೀಡಿತ ರಾಜ್ಯವಾರು ಅಂಕಿ ಅಂಶ ಗಮನಿಸುವುದಾದರೆ :