• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ದೆಹಲಿ ಗಲಭೆ ಏಕಪಕ್ಷೀಯ ವರದಿಯ ಆರೋಪ: BBCಯ ಆಹ್ವಾನ ತಿರಸ್ಕರಿಸಿದ ಪ್ರಸಾರ ಭಾರತಿ ಮುಖ್ಯಸ್ಥ 

by
March 6, 2020
in ದೇಶ
0
ದೆಹಲಿ ಗಲಭೆ ಏಕಪಕ್ಷೀಯ ವರದಿಯ ಆರೋಪ: BBCಯ ಆಹ್ವಾನ ತಿರಸ್ಕರಿಸಿದ ಪ್ರಸಾರ ಭಾರತಿ ಮುಖ್ಯಸ್ಥ 
Share on WhatsAppShare on FacebookShare on Telegram

ಪ್ರಸಾರ ಭಾರತಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾದ ಶಶಿ ಶೇಖರ್‌ ವೆಂಪಾಟಿ ಅವರು BBC (British Broadcasting Corporation)ನ ಮಹತ್ವದ ಕಾರ್ಯಕ್ರಮಕ್ಕೆ ನೀಡಿರುವ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ದೆಹಲಿ ಗಲಭೆಯ ಸಮಯದಲ್ಲಿ BBC ಸಂಸ್ಥೆಯಿಂದ ಏಕಪಕ್ಷೀಯವಾದ ವರದಿ ನೀಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತಾಳಿರುವುದಾಗಿ ತಮ್ಮ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ. ನವ ದೆಹಲಿಯಲ್ಲಿ ಮಾರ್ಚ್‌ 8ರಂದು BBC ಸಂಸ್ಥೆಯಿಂದ ಆಯೋಜಿಸಲಾಗಿದ್ದ ಮಹಿಳಾ ಆಟಗಾರ್ತಿಯರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ವೆಂಪಾಟಿ ಅವರಿಗೆ ಆಹ್ವಾನ ನೀಡಲಾಗಿತ್ತು.

ADVERTISEMENT

BBCಯ ಮುಖ್ಯ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಪತ್ರಕರ್ತೆ ಯೋಗಿತಾ ಲಿಮಾಯೆ ಅವರ ವರದಿಯನ್ನು ಉಲ್ಲೇಖ ಮಾಡಲಾಗಿದೆ. ಈ ವರದಿಯು ದೆಹಲಿ ಗಲಭೆಯ ಸಂದರ್ಭದಲ್ಲಿ ಪೊಲೀಸರ ಪಾತ್ರವನ್ನು ವಿಶ್ಲೇಷಿಸಿದ ವರದಿ ಇದಾಗಿತ್ತು. ವರದಿಯಲ್ಲಿ ದೆಹಲಿ ಪೊಲೀಸರು ಗಲಭೆಯನ್ನು ಹುಟ್ಟುಹಾಕುತ್ತಿರುವ ಕೆಲವರಿಗೆ ಸಹಾಯಾಸ್ತ ಚಾಚುತ್ತಿರುವುದು ಹಾಗೂ ಗಲಭೆಯನ್ನು ನಿಯಂತ್ರಿಸಲು ವಿಫಲರಾಗಿರುವುದಕ್ಕೆ ಕಾರಣವನ್ನು ಕೂಡಾ ತೋರಿಸಲಾಗಿತ್ತು. ಹಲವು ಸಾಕ್ಷಿಗಳ ಹೇಳಿಕೆಯ ಮೇರೆಗೆ ಈ ವರದಿಯನ್ನು ನೀಡಲಾಗಿತ್ತು.

BBC ಪ್ರಸಾರ ಮಾಡಿದ್ದ ವಿಡಿಯೋದಲ್ಲಿ ಪೊಲೀಸರು ಗಲಭೆಕಾರರ ಜೊತೆಗೂಡಿ ಕಲ್ಲುತೂರಾಟ ನಡೆಸುವುದು ಕೂಡಾ ಸ್ಪಷ್ಟವಾಗಿ ತೋರಿಸಲಾಗಿತ್ತು. ಇನ್ನು ಗಲಭೆಯಲ್ಲಿ ಪೊಲೀಸರ ದೌರ್ಜನ್ಯದಿಂದ ಮೃತಪಟ್ಟಿದ್ದ 23 ವರ್ಷ ವಯಸ್ಸಿನ ಯುವಕ ಫೈಜಾ಼ನ್‌ ಸಾವಿನ ಕುರಿತಾದ ತನಿಖಾ ವರದಿಯನ್ನು ಕೂಡಾ BBC ಪ್ರಸಾರ ಮಾಡಿತ್ತು. ಈ ತನಿಖಾ ವರದಿಗಳು ದೆಹಲಿ ಪೊಲೀಸರ ಮೇಲೆ ಗಂಭೀರವಾದ ಆರೋಪಗಳನ್ನು ಮಾಡಿತ್ತು.

ಈ ವರದಿಯನ್ನು ಏಕಪಕ್ಷೀಯ ವರದಿ ಎಂದು ಹಾಗೂ ಗಲಭೆಯಿಂದ ಉರಿಯುತ್ತಿದ್ದ ದೆಹಲಿಯಲ್ಲಿ ಮತ್ತಷ್ಟು ಅಶಾಂತಿಯನ್ನು ಉಂಟು ಮಾಡಲು ಕಾರಣವಾಯಿತು ಎಂದು ಪ್ರಸಾರ ಭಾರತಿ ಆರೋಪಿಸಿದೆ. ಗಲಭೆಯನ್ನು ಸಮರ್ಥವಾಗಿ ನಿಭಾಯಿಸಲು ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದ ದೆಹಲಿ ಪೊಲೀಸರ ಕುರಿತು ನಕಾರಾತ್ಮಕವಾಗಿ ವರದಿ ಮಾಡಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಗಲಭೆಕೋರರ ಮಾರಣಾಂತಿಕ ದಾಳಿಯಿಂದ ಗಲಭೆಯನ್ನು ಹತೋಟಿಗೆ ತರಲು ಪ್ರಯತ್ನಿಸಿದ್ದ ಪೊಲೀಸ್‌ ಹೆಡ್‌ ಕಾನ್ಸ್ಟೇಬಲ್‌ ಅವರ ಸಾವಿನ ಕುರಿತು ಹಾಗೂ ಇಂಟೆಲಿಜೆನ್ಸ್‌ ಅಧಿಕಾರಿಯ ಮೇಲೆ ನಡೆದ ಇರಿತದಿಂದ ಅವರು ಮೃತಪಟ್ಟಿರುವ ಕುರಿತು ಯಾವುದೇ ವರದಿಯನ್ನು ಮಾಡಲಾಗಿಲ್ಲ ಎಂದು ವೆಂಪಾಟಿಯವರು ಪತ್ರದಲ್ಲಿ ಹೇಳಿದ್ದಾರೆ.

“ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಭಾರತಿ ಮತ್ತು BBC ಒಳ್ಳೆಯ ಸಂಬಂಧವನ್ನು ಹೊಂದಿದ್ದರೂ, ತಾವೂ ಕಾರ್ಯ ನಿರ್ವಹಿಸುವ ಮೂಲ ದೇಶದ ಸಾರ್ವಭೌಮತೆಯನ್ನು ಕಾಪಾಡಿಕೊಂಡು ಬರುವುದು ಮುಖ್ಯವಾಗಿರುತ್ತದೆ. BBC ಸಂಸ್ಥೆಯು ತನ್ನ ಸಂಪಾದಕೀಯ ನಿಲುವುಗಳನ್ನು ಬದಲಾಯಿಸುವ ಭರವಸೆಯನ್ನು ನಾವು ಹೊಂದಿದ್ದೇವೆ,” ಎಂದು ವೆಂಪಾಟಿ ಹೇಳಿದ್ದಾರೆ.

Tags: BBCBBC Report on Delhi ViolenceDelhi ViolencePrasar BharatiShashishekhar Vempatiದೆಹಲಿ ಗಲಭೆಪ್ರಸಾರ ಭಾರತಿ ಮುಖ್ಯಸ್ಥಶಶಿ ಶೇಖರ್‌ ವೆಂಪಾಟಿ
Previous Post

ಕಡಲು ಪ್ಲಾಸ್ಟಿಕ್‌ ಮಯವಾಗಲು ಮೀನುಗಾರರ ಕೊಡುಗೆಯೂ ಅಪಾರ!

Next Post

Yes Bankನ ಶೋಚನೀಯ ಪರಿಸ್ಥಿತಿಗೆ ಕಾರಣವೇನು?

Related Posts

Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
0

ಹಾಸನ ಜಿಲ್ಲೆಯ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ರಾಜ್ಯದಲ್ಲಿ ಮೂರು ಸಾವಿರ ಅಕ್ರಮ ಪಂಪ್ ಸೆಟ್ ಗಳ ಸಕ್ರಮ ಕೃಷಿ ಫೀಡರ್ ಗಳನ್ನು ಸೌರೀಕರಣಗೊಳಿಸಿ ರೈತರ...

Read moreDetails

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025
Next Post
Yes Bankನ ಶೋಚನೀಯ ಪರಿಸ್ಥಿತಿಗೆ ಕಾರಣವೇನು?

Yes Bankನ ಶೋಚನೀಯ ಪರಿಸ್ಥಿತಿಗೆ ಕಾರಣವೇನು?

Please login to join discussion

Recent News

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

July 5, 2025

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada