ದೆಹಲಿ ಗಲಭೆಯ ಕುರಿತು ಸತ್ಯಶೋಧನಾ ವರದಿಯಲ್ಲಿ ದಾಖಲಿಸಲಾದ ಸುಳ್ಳುಗಳ ಕುರಿತು ಮೊದಲ ಭಾಗದಲ್ಲಿ ಸವಿಸ್ತಾರವಾಗಿ ಹೇಳಲಾಗಿತ್ತು. ಹಾದಿ ತಪ್ಪಿಸುವ ವರದಿ ಹಾಗೂ ಅವುಗಳ ಕುರಿತು ಮಾಡಲಾದ ಫ್ಯಾಕ್ಟ್ಚೆಕ್ಗಳನ್ನು ನೀಡಲಾಗಿತ್ತು. ದ್ವಿತೀಯ ಭಾಗದಲ್ಲಿ, ದೆಹಲಿಯಲ್ಲಿ ನಡೆದ ಘಟನೆಗಳನ್ನು ತಪ್ಪಾಗಿ ವಿಶ್ಲೇಷಿಸಿ ಹಾಗೂ ಘಟನಾವಳಿಗಳ ಸರಣಿಯನ್ನು ತಪ್ಪಾಗಿ ನಮೂದಿಸಿ ಯಾವ ರೀತಿ ವರದಿಯು ಹಳ್ಳ ಹಿಡಿಯುವಂತೆ ಮಾಡಲಾಗಿದೆ ಎಂಬುದರ ಕುರಿತು ವಿವರವಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಘಟನೆ 1: ದೆಹಲಿ ಗಲಭೆಯ ಹಿಂದಿನ ದಿನ ಈದ್ಗಾ ಮೈದಾನದಲ್ಲಿ 700 ಜನ ಸೇರಿದ್ದರು
ದೆಹಲಿ ಗಲಭೆ ನಡೆಯುವ ಮುನ್ನಾ ದಿನ ಅಂದರೆ ಫೆಬ್ರುವರಿ 23ರಂದು ಈದ್ಗಾ ಮೈದಾನದಲ್ಲಿ 15-35 ವರ್ಷ ವಯಸ್ಸಿನ ಸುಮಾರು 7000 ಜನ ಸೇರಿದ್ದರು ಎಂದು ವರದಿಯಲ್ಲಿ ಐದು ಬಾರಿ ದಾಖಲಿಸಲಾಗಿದೆ (ಪುಟ ಸಂಖ್ಯೆ 3, 10, 11, 30 ಮತ್ತು 60). ಅವರಿಗೆ ವಿದ್ವಂಸಕಾರಿ ಚಟುವಟಿಕೆಗಳನ್ನು ಮಾಡಲು ಅಲ್ಲಿ ತರಬೇತಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಸರ್ದಾರ್ ಬಜಾರ್ನಲ್ಲಿರುವ ಈದ್ಗಾ ಮೈದಾನದಲ್ಲಿ ಜಮಾಯಿಸಿದ್ದ ಜನರ ಧರ್ಮದ ಕುರಿತು ವರದಿಯಲ್ಲಿ ಯಾವುದೇ ಉಲ್ಲೇಖಗಳಿಲ್ಲ.
ಅಲ್ಲಿ ಸೇರಿದ್ದ ಜನರು ʼಕೊನೇಯ ಯುದ್ದಕ್ಕೆʼ ಅಣಿಯಾಗುತ್ತಿದ್ದರು ಎಂದು ಸಮೀಪದ ಹಣ್ಣು ಹಂಪಲು ಅಂಗಡಿ ಮಾಲಿಕನ ಹೇಳಿಕೆಯನ್ನು ದಾಖಲಿಸಲಾಗಿದೆ.
ಈ ಕುರಿತಾಗಿ ಫ್ಯಾಕ್ಟ್ ಚೆಕ್ ನಡೆಸಿದಾಗ ಅಂದು ಈದ್ಗಾದಲ್ಲಿ 7000 ಜನ ಸೇರಿ ವಿಧ್ವಂಸಕಾರಿ ಚಟುವಟಿಕೆಗಳ ತರಭೇತಿ ಪಡೆಯುತ್ತಿದದ್ದರು ಎನ್ನುವ ಕುರಿತು ಯಾವುದೇ ವರದಿಗಳು ಪ್ರಕಟವಾಗಿಲ್ಲ. ಒಂದು ಜಾಗದಲ್ಲಿ ಅಷ್ಟು ಜನರು ಸೇರಿರುವಾಗ, ಆ ಘಟನೆ ಓರ್ವ ಅಂಗಡಿ ಮಾಲಿಕನ ಹೊರತಾಗಿ ಬೇರೆ ಯಾರಿಗೂ ಕಂಡಿರಲಿಲ್ಲ. ಇದಕ್ಕೂ ಮಿಗಿಲಾಗಿ, ಆ ಪ್ರದೇಶದಲ್ಲಿರುವ ಪೊಲೀಸ್ ಠಾಣೆಯ ಅಧಿಕಾರಿಗಳು ಕೂಡಾ ಅಷ್ಟು ಜನ ಸೇರಿರುವ ವಿಚಾರವನ್ನು ಅಲ್ಲಗೆಳೆದಿದ್ದಾರೆ.
Also Read: ದೆಹಲಿ ಗಲಭೆ: ಸತ್ಯಶೋಧನಾ ವರದಿಯಲ್ಲಿನ ಸುಳ್ಳುಗಳ ಸರಮಾಲೆ| ಭಾಗ – 1
ಘಟನೆ 2: ಮೀರ್ ಫೈಸಲ್ ಎಂಬಾತನ ಫೇಸ್ಬುಕ್ ಪೋಸ್ಟ್
ಜಾಮಿಯಾ ಟೈಮ್ಸ್ನ ಫ್ರೀಲ್ಯಾನ್ಸ್ ವರದಿಗಾರರಾದ ಮೀರ್ ಫೈಸಲ್ ಎಂಬಾತನ ಫೇಸ್ಬುಕ್ ಪೋಸ್ಟ್ ಅನ್ನು ಕೂಡಾ ಸಾಕ್ಷ್ಯವಾಗಿ ಬಳಸಲಾಗಿದೆ. ಅವರ ಫೇಸ್ಬುಕ್ ಪೋಸ್ಟ್ ಜನರಿಗೆ ರಸ್ತೆಗಳನ್ನು ಮುಚ್ಚಲು ಪ್ರಚೋದಿಸುತ್ತಿದೆ ಎಂದು ಆರೋಪಿಸಲಾಗಿದೆ. ಆದರೆ, ಫೈಸಲ್ ಅವರ ಫೆಸ್ಬುಕ್ ಪೋಸ್ಟ್ನ ಸ್ಕ್ರೀನ್ ಶಾಟ್ ಅಸ್ಪಷ್ಟವಾಗಿ ಗೋಚರಿಸುತ್ತಿದ್ದರೂ, ಆರೋಪವನ್ನು ಮಾತ್ರ ಸ್ಪಷ್ಟವಾಗಿ ಮಾಡಲಾಗಿದೆ.
ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಫೈಸಲ್ ʼಆ ಪೋಸ್ಟ್ನಲ್ಲಿ ಕೆಲವು ಅಸಂಬದ್ದ ಪದಗಳನ್ನು ಬಳಸಿರುವ ಕಾರಣದಿಂದ, ಅದನ್ನು ಸಾರ್ವಜನಿಕರು ನೋಡದಂತೆ ʼಪ್ರೈವೇಟ್ʼ ಪೋಸ್ಟ್ ಆಗಿ ಹಾಕಿದ್ದೆ,” ಎಂದು ಹೇಳಿದ್ದಾರೆ. ಅವರ ಪ್ರಕಾರ, ಫೆಬ್ರುವರಿ 22ರಂದು ಶಹೀನ್ ಬಾಘ್ ಕಡೆಗೆ ತೆರಳುವ ರಸ್ತೆಯನ್ನು ತೆರೆದ ನಂತರ ಜನರು ಖುಷಿಯಲ್ಲಿ ಕುಣಿದಾಡುತ್ತಿದ್ದ ಫೋಟೋ ಹಾಕಿ ಪೋಸ್ಟ್ ಮಾಡಿದ್ದೆ. ಈ ಘಟನೆಯನ್ನು ದ ಹಿಂದೂ ಹಾಗೂ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗಳು ವರದಿ ಮಾಡಿವೆ.
ಫೈಸಲ್ ಅವರ ಫೆಸ್ಬುಕ್ ಪೋಸ್ಟ್ ಏನು ಹೇಳುತ್ತದೆ ಎಂದರೆ, “ಪ್ರತಿಭಟನೆಯಲ್ಲಿ ಅಷ್ಟು ಸಮಯ ವ್ಯರ್ಥ ಮಾಡಲು ನಾವೇನು ಬುದ್ದಿಹೀನರೇ? ಪೊಲೀಸರು ಒಂದು ಕಡೆ ರೋಡ್ ಬಂದ್ ಮಾಡಿದರೆ, ಇನ್ನೊಂದು ಕಡೆ ತೆರೆಯುತ್ತಿದ್ದಾರೆ. ಜನರು ಇದನ್ನು ಸಂಭ್ರಮಿಸುತ್ತಿದ್ದಾರೆ. 5-6 ಜನ ನ್ಯೂಸ್ ಆಂಕರ್ಗಳ ದೆಸೆಯಿಂದ ಶಹೀನ್ ಬಾಘ್ ಹಾದಿ ತಪ್ಪಿದೆ. ಇನ್ನು ಯಾವುದೇ ವಿಡಿಯೋ ಹಾಕುವುದಿಲ್ಲ. ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುವಷ್ಟು ನಾವು ಮೂರ್ಖರೆ? ವಿ.ಸೂ. ಸರಿತಾ ವಿಹಾರ್ ರಸ್ತೆ (ಶಹೀನ್ ಬಾಘ್ ಕಡೆಗೆ ಹೋಗುವಂತದ್ದು) ಕೂಡಾ ಶೀಘ್ರದಲ್ಲೇ ತೆರವಾಗಲಿದೆ ಎಂದು ನನ್ನ ನಂಬಿಕೆ.”
Also Read: ದೆಹಲಿ ಗಲಭೆ ತನಿಖೆ: ಪೊಲೀಸರ ವಿರುದ್ಧ ವ್ಯಾಪಕ ಟೀಕೆ, ಫೇಸ್ಬುಕ್ಗೆ ಛೀಮಾರಿ!
ಫೈಸಲ್ ಹಾಕಿರುವ ಪೋಸ್ಟ್ನಲ್ಲಿದ್ದ ಫೊಟೋವಿನ ವಿಡಿಯೋವನ್ನು ANI ಕೂಡಾ ಹಂಚಿಕೊಂಡಿತ್ತು.
ಈ ವಿಡಿಯೋ ಮತ್ತು ಫೈಸಲ್ ಹಾಕಿದ್ದ ಫೋಟೋ ಎರಡೂ ಕೂಡಾ ಒಂದೇ ಸ್ಥಳಕ್ಕೆ ಸಂಬಂಧಪಟ್ಟದ್ದು ಎಂದು ಈ ಕೆಳಗಿನ ಚಿತ್ರಗಳು ಹೇಳುತ್ತವೆ.
ಈ ಹಿಂದೆ, OpIndia ಕೂಡಾ ಫೈಸಲ್ ಅವರ ಫೇಸ್ಬುಕ್ಅನ್ನು ತಪ್ಪಾಗಿ ವಿಶ್ಲೇಷಿಸಿ ವರದಿ ಪ್ರಕಟಿಸಿತ್ತು. ಜೆಎನ್ಯು ವಿದ್ಯಾರ್ಥಿ ಶಾರ್ಜಿಲ್ ಇಮಾಮ್ ಅವರ ಗೋಡೆ ಚಿತ್ರವನ್ನು ಫೈಸಲ್ ಬರೆದಿದ್ದರು ಎಂದು OpIndia ಹೇಳಿತ್ತು. ಈ ಕುರಿತಾಗಿ ಹೇಳಿಕೆ ನೀಡಿರುವ ಫೈಸಲ್ ʼಗೋಡೆ ಚಿತ್ರವನ್ನು ಯಾವ ರೀತಿ ಬರೆಯುತ್ತಾರೆಂದು ನನಗೆ ತಿಳಿದಿಲ್ಲ. ನಾನು ಆ ಚಿತ್ರವನ್ನು ಬಿಡಿಸಿರಲಿಲ್ಲ. ಆದರೆ, ಜಾಮಿಯಾ ಟೈಮ್ಸ್ಗಾಗಿ ಆ ಚಿತ್ರವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದೆ,” ಎಂದು ಹೇಳಿದ್ದರು.
Also Read: ಸತ್ಯಶೋಧನಾ ವರದಿಯಲ್ಲಿಯೇ ಹತ್ತಾರು ಸುಳ್ಳುಗಳು..!!
ಈ ವಿಚಾರಗಳು, ʼಸತ್ಯಶೋಧನಾʼ ವರದಿ ಯಾವ ರೀತಿ ಜನರ ಹಾದಿ ತಪ್ಪಿಸಲು ಪ್ರಯತ್ನವನ್ನು ಪಟ್ಟಿತ್ತು ಎಂಬುದನ್ನು ಸಾಕ್ಷ್ಯಗಳ ಸಮೇತ ನಿರೂಪಿಸುತ್ತದೆ.
ಮುಂದುವರೆಯುವುದು…