ದೇಶವನ್ನೇ ಬೆಚ್ಚಿ ಬೀಳಿಸಿದ, ವ್ಯಾಪಕ ಆಕ್ರೋಶಕ್ಕೆ ಕಾರಣವಾದ ತೂತುಕುಡಿ ಲಾಕಪ್ ಡೆತ್ ಕುರಿತಂತೆ ಸಿಬಿಐ ದೋಷಾರೊಪಣಾ ಪಟ್ಟಿ ಸಲ್ಲಿಸಿದ್ದು, ದೋಷಾರೊಪಣಾ ಪಟ್ಟಿಯಲ್ಲಿ, ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ತಂದೆ-ಮಗನಿಗೆ ಸಂಜೆ 7-45 ರಿಂದ ಬೆಳಗಿನ ಜಾವ 3 ಗಂಟೆಯವರೆಗೆ ಪೊಲೀಸರು ಸತತವಾಗಿ ಥಳಿಸಿದ್ದಾರೆ ಎಂದು ಹೇಳಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪೊಲೀಸರು ತಂದೆ ಮಗನಿಗೆ 6 ರಿಂದ 7 ಗಂಟೆಗಳ ಕಾಲ ಕ್ರೂರವಾಗಿ ಥಳಿಸಿದ್ದು, ಹಲ್ಲೆಯ ತೀವೃತೆಗೆ ಠಾಣೆಯ ಗೋಡೆಗಳು ರಕ್ತಮಯವಾಗಿತ್ತು ಎಂದು ವಿಧಿವಿಜ್ಞಾನ (forensic) ಸಾಕ್ಷ್ಯಗಳು ಸಾಬೀತುಪಡಿಸಿದೆ.
ಜೂನ್ 19 ರಂದು ಲಾಕ್‌ಡೌನ್ ಮಾರ್ಗಸೂಚಿಗಳನ್ನು ಮೀರಿ 15 ನಿಮಿಷಗಳ ಕಾಲ ತಮ್ಮ ಮೊಬೈಲ್ ಫೋನ್ ಅಂಗಡಿಯನ್ನು ತೆರೆದಿಟ್ಟಿದ್ದಕ್ಕಾಗಿ ತೂತುಕುಡಿ ನಿವಾಸಿ ಜಯರಾಜ್ ಮತ್ತು ಅವರ ಮಗ ಬೆನ್ನಿಕ್ಸ್ ಅವರನ್ನು ಬಂಧಿಸಲಾಗಿತ್ತು.
Also Read: ತೂತುಕುಡಿ ಲಾಕಪ್ ಡೆತ್: ಆರೋಪಿ ಪೋಲಿಸ್ ಕರೋನಾಗೆ ಬಲಿ
ಪೊಲೀಸರ ಕ್ರೂರ ಹಲ್ಲೆಯ ಪರಿಣಾಮ ತಂದೆ ಮಗ ಇಬ್ಬರೂ ಸಾವನ್ನಪ್ಪಿದ್ದರು. ಅಮೇರಿಕಾದಲ್ಲಿ ಪೊಲೀಸರ ದೌರ್ಜನ್ಯಕ್ಕೆ ಜಾರ್ಜ್ ಫ್ಲಾಯ್‌ಡ್ ಬಲಿಯಾದ ಕೆಲವೇ ದಿನಗಳಲ್ಲಿ ಇದು ನಡೆದಿತ್ತು.
ಹಲವು ಸುತ್ತಿನ ಚಿತ್ರಹಿಂಸೆಗೆ ಒಳಗಾದ ತಂದೆ-ಮಗ ತಮ್ಮ ತೀವೃವಾದ ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ವರದಿಗಳು ತಿಳಿಸಿವೆ.
ತಮ್ಮ ಅಪರಾಧವನ್ನು ಮುಚ್ಚಿಹಾಕಲು ಪೊಲೀಸರು, ಬೆನಿಕ್ಸ್ ಹಾಗೂ ಜಯರಾಜ್ ವಿರುದ್ಧ ಸುಳ್ಳು ಎಫ್ ಐ ಆರ್ ದಾಖಲಿಸಿದ್ದಾರೆ. ತಂದೆ-ಮಗ ಯಾವುದೇ ಕೋವಿಡ್ ಮಾರ್ಗ ಸೂಚಿಯನ್ನು ಉಲ್ಲಂಘಿಸಿರಲಿಲ್ಲ ಎಂದು ಸಿಬಿಐ ತನಿಖೆ ಬಹಿರಂಗಪಡಿಸಿದೆ.
Also Read: ಜಯರಾಜ್ ಮತ್ತು ಬೆನಿಕ್ಸ್ ಕಸ್ಟಡಿ ಸಾವು ಪ್ರಕರಣ; ಸುಚಿತ್ರಾ ವೈರಲ್ ವಿಡಿಯೋ ಡಿಲೀಟ್ ಮಾಡಲು ಸೂಚನೆ
ಮಾತ್ರವಲ್ಲದೆ, ಸಾಕ್ಷ್ಯ ನಾಶಪಡಿಸಲು ಪೊಲೀಸರು, ರಕ್ತ ಸಿಕ್ತ ಉಡುಪನ್ನು ಸರ್ಕಾರಿ ಆಸ್ಪತ್ರೆಯ ಕಸದ ತೊಟ್ಟಿಗೆ ಎಸೆದಿದ್ದಾರೆ ಎಂದು ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ಹೇಳಿದೆ.
ಇಬ್ಬರನ್ನು ಥಳಿಸಲಾಯಿತು ಎಂದು ಹೇಳಲಾದ ದಿನದ ಯಾವುದೇ ಸಿಸಿಟಿವಿ ದೃಶ್ಯಾವಳಿಗಳು ಇರಲಿಲ್ಲ. ಸಿಸ್ಟಂನ ಹಾರ್ಡ್ ಡಿಸ್ಕ್ನಲ್ಲಿ ಸಾಕಷ್ಟು ಶೇಖರಣಾ ಸ್ಥಳವಿದ್ದರೂ ಪೊಲೀಸ್ ಠಾಣೆಯಲ್ಲಿ ಭದ್ರತಾ ಕ್ಯಾಮೆರಾಗಳನ್ನು ಪ್ರತಿದಿನ ಸ್ವಯಂಚಾಲಿತವಾಗಿ ದೃಶ್ಯಗಳನ್ನು ಅಳಿಸುವ ಪ್ರೋಗ್ರಾಮ್ ಮಾಡಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.