ಅರುಣ್ ಭೋಥ್ರ ಎಂಬ ಐಪಿಎಸ್ ಅಧಿಕಾರಿ ತನ್ನ ಟ್ವಿಟರ್ ಖಾತೆಯಲ್ಲಿ ಹೀಗೊಂದು ವಿಚಾರ ಪೋಸ್ಟ್ ಮಾಡಿದ್ದರು. ಇದೊಂದು ಹೃದಯ ತುಂಬಿ ಬರುವ ಕಥೆ. ಈ ಫೋಟದಲ್ಲಿ ಕಾಣುವ ಹುಡುಗ ಈ ಲಾಕ್ ಡೌನ್ ಅಧಿಯಲ್ಲಿ ತನ್ನ ಪೋಷಕರನ್ನು ಕಳೆದುಕೊಂಡಿದ್ದಾನೆ. ಎಂದು ಭೋಥ್ರ ಬರೆದು ಟ್ವೀಟ್ ಮಾಡಿದ್ದರು.
ಮಾರ್ಚ್ 24ರಂದು ಯಾರೂ ಊಹಿಸಿರಲಿಲ್ಲ. ಪ್ರಧಾನಿ ಮೋದಿ ಇಡೀ ದೇಶವನ್ನು ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದರು. ಈ ಲಾಕ್ ಡೌನ್ ಎಷ್ಟು ದಿನಗಳ ಕಾಲ ಇರಲಿದೆ. ಈ ಲಾಕ್ ಡೌನ್ನ ಪರಿಣಾಮವೇನು ಏನು ಎಂಬುದು ಕೂಡ ಯಾರ ಊಹಿಗೆ ನಿಲುಕಿರಲಿಲ್ಲ. ಹೀಗೆ ನಂಬಿದ್ದ ಜನರಲ್ಲಿ ಈ ಹುಡುಗ ಹಾಗೂ ಇವನ ಪೋಷಕರೂ ಇದ್ದರು.
ಈ 12 ವರ್ಷದ ಹುಡುಗನ ಪೋಷಕರು, ಬೀಹಾರ ಮೂಲದವರು. ದೆಹಲಿಗೆ ಬಂದು ದುಡಿಯುತ್ತಿದ್ದರು. ಈ ವೇಳೆ ಲಾಕ್ ಡೌನ್ಗು ಮುಂಚಿತವಾಗಿ ಈ ಹುಡುಗನ ಪೋಷಕರು ಇವನನ್ನ ದೂರ ಸಂಬಂಧಿಯೊಬ್ಬರ ಮನೆಯಲ್ಲಿ ಬಿಟ್ಟು ಬಿಹಾರಕ್ಕೆ ಹೊರಟು ಹೋಗಿದ್ದರು. ಈತನ್ಮಧ್ಯೆ, ಮೋದಿ ಲಾಕ್ ಡೌನ್ ಘೋಷಣೆ ಮಾಡಿ ಬಿಟ್ಟಿದ್ದರು. ಈ ವೇಳೆ ಅತ್ತ ಬಿಹಾರದಲ್ಲಿ ಪೋಷಕರು ಇತ್ತ ದೆಹಲಿಯಲ್ಲಿ ಈ 12 ವರ್ಷದ ಹುಡುಗ ಸಿಲುಕಿಕೊಂಡರು. ಲಾಕ್ ಡೌನ್ ಕಾರಣ ವಾಪಾಸು ಮಗನ ಬಳಿ ಬರಲಾಗದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಆದರೆ ಅದ್ಯಾವ ಸಂಬಂಧಿಕ್ಕರೋ ಏನೋ..? ಸಿಕ್ಕಿದ್ದೇ ಚಾನ್ಸೂ ಅಂತ 12 ವರ್ಷದ ಮಗನನ್ನು ಆತನ ಪೋಷಕರ ಮೇಲಿನ ದ್ವೇಷಕ್ಕೆ ಏಕಾಏಕಿಯಾಗಿ ಮನೆಯಿಂದ ಹೊರ ಹಾಕಿದ್ದಾರೆ ದೂರ ಸಂಬಂಧಿಗಳು. ದಿಕ್ಕು ದೋಚದ 12 ವರ್ಷದ ಈ ಹುಡುಗ ದೆಹಲಿಯಲ್ಲಿನ ದ್ವಾರಕಾದ ಉದ್ಯಾನವನದಲ್ಲಿ ಹೀಗಿ ಕುಳಿತಿದ್ದಾನೆ.
ಆ ಹುಡುಗನಿಗೆ ಬೇರೆ ಸ್ಥಳವಿರಲಿಲ್ಲ. ಹಲವು ದಿನಗಳ ಕಾಲ ಅದೇ ಉದ್ಯಾನವದಲ್ಲೇ ಉಳಿದುಕೊಂಡ. ಈ ವೇಳೆ ಉದ್ಯಾನವನದ ಬಳಿ ಈ ಹುಡುಗನಿಗೆ ಸ್ನೇಹ ಎಂಬ ಮಹಿಳೆಯ ಪರಿಚಯವಾಯ್ತು. ಈ ಲಾಕ್ ಡೌನ್ ಸಮಯದಲ್ಲಿ ಹುಡುಗ ಒಬ್ಬನೇ ಇರುವುದನ್ನು ಕಂಡು ಸ್ನೇಹ ಹುಡುಗನ ಪೂರ್ವ ಪರ ವಿಚಾರಿಸಿದಳು. ಹುಡುಗನ ಕಥೆ ಕೇಳಿದ ಸ್ನೇಹ, ಬಾಲಕನಿಗೆ ಸಹಾಯ ಮಾಡುವ ನಿರ್ಧಾರಕ್ಕೆ ಬಂದಳು. ಅಂತೆಯೇ, ಬಾಲಕನ ಕಣ್ಣೀರ ವೃತ್ತಾಂತವನ್ನು ಬರೆದು ಫೋಟೋ ಸಮೇತ ತನ್ನ ಟ್ವಿಟರ್ ಖಾತೆಗೆ ಹಾಕಿ, @ indiacares_2020 ಎಂಬ ಸಂಘಟೆನಯೊಂದಕ್ಕೆ ಟ್ಯಾಗ್ ಮಾಡಿದರು. ಈ @ indiacares_2020 ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸಂಘನೆಯಾಗಿದೆ.
ಈ ವೇಳೆ ಈ ಘಟನೆ ಅಲ್ಲಿನ ಐಪಿಎಸ್ ಅಧಿಕಾರಿ ಅರುಣ್ ಭೋಥ್ರ ಎಂಬವರ ಗಮನಕ್ಕೆ ಬಂತು. ಭೋಥ್ರ ಮಧ್ಯಪ್ರವೇಶಿಸಿ, ತನ್ನ ಖಾತೆಯಿಂದಲೂ ಈ ಕುರಿತು ಟ್ವೀಟ್ ಮಾಡಿದರು. ನೋಡ ನೋಡುತ್ತಲೇ ಈದು ನೆಟ್ಟಿಗರ ಗಮನ ಸೆಳೆಯಿತು. ಎಲ್ಲೆಲ್ಲೂ ಹುಡುಗನ ಫೋಟೋ ಹರಿದಾಡಿದವು. ಈ ವೇಳೆ ಪೋಷಕರು ಸಮಸ್ತಿಪುರದಲ್ಲಿದ್ದಾರೆಂದು ಗಮನಕ್ಕೆ ಬಂತು. ಈ ವೇಳೆ ಅವರನ್ನು ಆಗ ಚಾಲ್ತಿಯಲ್ಲಿದ್ದ ವಿಶೇಷ ರೈಲಿನಲ್ಲಿ ದೆಹಲಿಗೆ ಕರೆದುಕೊಂಡು ಬರಲಾಯ್ತು. ಹೀಗೆ ಕಳೆದ ಕೆಲವು ದಿನಗಳಿಂದ ಕಂಗೆಟ್ಟು ಹೋಗಿದ್ದ ಮಗನನ್ನು ಒಂದು ಮಾಡಲಾಯ್ತು. ಈ ಘಟನೆ ಬಳಿಕ ಅರುಣ್ ಭೋಥ್ರ ತನ್ನ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದರು. “ನೀವು ಯಾರಿಗಾದರು ಸಹಾಯ ಮಾಡಲು ನಿಮ್ಮ ಬಳಿ ಹಣವಿರಲೇ ಬೇಕೆಂದೇನಿಲ್ಲ. ಬದಲಿಗೆ ಹೀಗೆ ಘಟನೆ ವಿವರಿಸಿ, ಯಾರಿಗಾದರೂ ಟ್ಯಾಗ್ ಮಾಡಿದರೆ ಆಯ್ತು. ಇದಿಷ್ಟೇ ಈ ಕಥೆಯ ನೈತಿಕ ಪಾಠ ಎಂದು ಟ್ವೀಟ್ ಮಾಡಿದರು.