‘ಮನ್ ಕಿ ಬಾತ್’ ಕಾರ್ಯಕ್ರಮದ 66 ನೇ ಆವೃತ್ತಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಳೆದ ಕೆಲವು ತಿಂಗಳುಗಳಲ್ಲಿ ದೇಶವು ಎದುರಿಸುತ್ತಿರುವ ವಿವಿಧ ವಿಪತ್ತುಗಳ ಬಗ್ಗೆ ಮಾತನಾಡುತ್ತಾ ಚೀನಾಕ್ಕೆ ಸೂಕ್ತ ಉತ್ತರ ನೀಡುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
2020 ರ ಅರ್ಧ ವರ್ಷ ಮುಗಿದಿದೆ. ಮನ್ ಕಿ ಬಾತ್ನಲ್ಲಿ ನಾವು ವ್ಯಾಪಕವಾದ ವಿಷಯಗಳನ್ನು ಚರ್ಚಿಸುತ್ತಿದ್ದೇವೆ. ಈ ದಿನಗಳಲ್ಲಿ, ಜನರು ಸಾಮಾನ್ಯವಾಗಿ 2020 ಯಾವಾಗ ಕೊನೆಗೊಳ್ಳುತ್ತದೆ ಎಂಬ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಅನೇಕ ಸವಾಲು-ಸಂಕಷ್ಟಗಳ ವರ್ಷವಾಗಿದೆ ಎಂದು ಅವರು ಭಾವಿಸಿದ್ದಾರೆ. ಯಾವುದೇ ಸವಾಲು ಇರಲಿ, ವರ್ಷವನ್ನು ದೂಷಿಸಬಾರದು; ಭಾರತದ ಇತಿಹಾಸವು ಎಲ್ಲಾ ರೀತಿಯ ಸವಾಲುಗಳನ್ನು ಮೀರಿ ನಿಂತಿದೆ.
ತನ್ನ ಗಡಿ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವ ಭಾರತಗಿರುವ ಬದ್ಧತೆಯನ್ನು ಜಗತ್ತು ಕಂಡಿದೆ. ಲಡಾಕ್‌ನಲ್ಲಿ, ನಮ್ಮ ಭಾಗದ ಮೇಲೆ ಹಸ್ತಕ್ಷೇಪ ಮಾಡುವವರಿಗೆ ಸೂಕ್ತವಾದ ಉತ್ತರವನ್ನು ನೀಡಲಾಗಿದೆ. ನಮ್ಮ ಕೆಚ್ಚೆದೆಯ ಹುತಾತ್ಮರನ್ನು ದೇಶ ನಮಿಸುತ್ತದೆ. ಅವರು ಯಾವಾಗಲೂ ಭಾರತವನ್ನು ಸುರಕ್ಷಿತವಾಗಿರಿಸಿದ್ದಾರೆ. ಅವರ ಶೌರ್ಯ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ.ನಮ್ಮ ಪ್ರಯತ್ನವು ದೇಶವನ್ನು ಸದೃಢ ಮತ್ತು ಸ್ವಾವಲಂಬಿಯನ್ನಾಗಿ ಮಾಡುವ ಕಡೆಗೆ ಇರಬೇಕು – ಇದು ನಮ್ಮ ಹುತಾತ್ಮರಿಗೆ ನಿಜವಾದ ಗೌರವವಾಗಿರುತ್ತದೆ ಎಂದು ಮೋದಿ ಹೇಳಿದ್ದಾರೆ.

ಜನರ ಪಾಲ್ಗೊಳ್ಳುವಿಕೆ ಇಲ್ಲದೆ ಯಾವುದೇ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ – ನಾಗರಿಕನಾಗಿ, ದೇಶವನ್ನು ಆತ್ಮನಿರ್ಭರ ಭಾರತ್ ಮಾಡುವಲ್ಲಿ ನಿಮ್ಮ ಸಂಕಲ್ಪ, ಭಕ್ತಿ ಮತ್ತು ಸಹಕಾರವನ್ನು ನಾನು ಎದುರು ನೋಡುತ್ತೇನೆ.ನೂರಾರು ವರ್ಷಗಳಿಂದ, ದಾಳಿಕೋರರು ಭಾರತದ ಮೇಲೆ ದಾಳಿ ಮಾಡಿದರು; ಭಾರತವು ತನ್ನ ಅಸ್ತಿತ್ವ ಮತ್ತು ಸಂಸ್ಕೃತಿಯನ್ನು ಕಳೆದುಕೊಳ್ಳುತ್ತದೆ ಎಂದುಕೊಂಡಂತೆಲ್ಲಾ ರಾಷ್ಟ್ರ ತನ್ನ ತೇಜಸ್ಸು ಮತ್ತು ವೈಭವವನ್ನು ಹೆಚ್ಚಿಸಿತು.ಭಾರತದ ಸಾಂಸ್ಕೃತಿಕತೆಯು ಸವಾಲುಗಳನ್ನು ಯಶಸ್ಸಿನತ್ತ ತಿರುಗಿಸಿದೆ. ನಾವು ಈ ಬಾರಿ ಮತ್ತೆ ಹಾಗೆ ಮಾಡುತ್ತೇವೆ.
ಸ್ನೇಹವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ಭಾರತಕ್ಕೆ ತಿಳಿದಿದೆ, ಹೇಗೆ ಪ್ರತೀಕಾರ ತೀರಿಸಬಹುದು ಎಂದೂ ತಿಳಿದಿದೆ. ನಮ್ಮ ಧೈರ್ಯಶಾಲಿ ಯೋಧರು ಭಾರತ ಮಾತೆಗೆ ಯಾವುದೇ ಹಾನಿ ಮಾಡಲು ಬಿಡುವುದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಯಾವುದೇ ಸವಾಲುಗಳು ಇರಬಹುದು ಆದರೆ ನಾವು ಯಾವಾಗಲೂ ಅವುಗಳನ್ನು ಜಯಿಸುತ್ತಾ ಬಂದಿದ್ದೇವೆ ಎಂದು ನಮ್ಮ ಇತಿಹಾಸ ತೋರಿಸುತ್ತದೆ ಎಂದು ನರೆಂದ್ರ ಮೋದಿ ಹೇಳಿದ್ದಾರೆ.
ಇನ್ನು ಖಾಸಗೀಕರಣವನ್ನು ಸಮರ್ಥಿಸಿದ ಪ್ರಧಾನಿ, ಕಲ್ಲಿದ್ದಲು, ಬಾಹ್ಯಾಕಾಶ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ದಶಕಗಳಿಂದ ಮುಚ್ಚಿದ್ದ ಬಾಗಿಲನ್ನು ನಾವು ತೆರೆದಿದ್ದೇವೆ. ವಾಣಿಜ್ಯ ಗಣಿಗಾರಿಕೆಗೆ ಅವಕಾಶ ನೀಡುವುದರಿಂದ ಭಾರತದ ಪರಿಸ್ಥಿತಿ ಬದಲಾಗುತ್ತದೆ ಎಂದು ಹೇಳಿದ್ದಾರೆ. ಈ ಕ್ರಮಗಳು ಭಾರತವನ್ನು ಸ್ವಾವಲಂಬಿಯಾಗಲು ಹಾಗೂ ತಾಂತ್ರಿಕವಾಗಿ ಪ್ರಗತಿ ಹೊಂದಲು ಸಹಾಯಿಸುತ್ತದೆ ಎಂದು ಹೇಳಿದ್ದಾರೆ.