ಕಳೆದ ತಿಂಗಳು ಭಾರತ ಹಾಗೂ ನೇಪಾಳದ ನಡುವೆ ಎದ್ದಿರುವ ಗಡಿವಿವಾದ ಇನ್ನೂ ಹೊಗೆಯಾಡುತ್ತಲೇ ಇದೆ. ನೇಪಾಳ ಭಾರತದೊಂದಿಗೆ ಕಾಲು ಕೆದರಿ ನಿಂತಿರುವುದರ ಬೆನ್ನಲ್ಲಿ ಚೀನಾದ ಷಡ್ಯಂತರವಿದೆ ಎನ್ನಲಾಗುತ್ತಿದೆ. ಈಗಾಗಲೇ ಚೀನಾ ಸೇನೆ ಭಾರತಕ್ಕೆ ಸೇರಿರುವ ಭೂಪ್ರದೇಶಗಳ ಮೇಲೆ ಅತಿಕ್ರಮಿಸಿದೆ. ನೆರೆಯ ಎರಡೂ ರಾಷ್ಟ್ರಗಳು ಕಾಲುಕೆದರಿ ನಿಂತಿರುವುದರಿಂದ ಭಾರತ ಸರ್ಕಾರ ಒಂದಿಷ್ಟು ಯೋಚಿಸಿ ತೀರ್ಮಾನ ಕೈಗೊಳ್ಳಬೇಕಾದ ಒತ್ತಡದಲ್ಲಿದೆ.
ಭಾರತಕ್ಕೆ ಸೇರಿದೆ ಎನ್ನಲಾದ ಭೂ ಭಾಗವನ್ನು ನೇಪಾಳಕ್ಕೆ ಸೇರಿಸಿ ನೇಪಾಳ ಸರ್ಕಾರ ಹೊಸ ನಕ್ಷೆ ಪ್ರಕಟ ಮಾಡಿತ್ತು. ನೇಪಾಳದ ಈ ಕ್ರಮವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಟೀಕಿಸಿದ್ದರು. ಟಿಬೆಟ್ ಮಾಡಿರುವ ತಪ್ಪನ್ನು ನೇಪಾಳ ಪುನರಾವರ್ತಿಸಬಾರದು. ಟಿಬೇಟ್ ಅನುಭವಿಸಿದ ನಷ್ಟಗಳನ್ನೇ ನೇಪಾಳವೂ ಅನುಭವಿಸಬೇಕಾದೀತು ಎಂದು ಯೋಗಿ ಎಚ್ಚರಿಕೆ ನೀಡಿದ್ದರು.
ಯೋಗಿ ಆದಿತ್ಯನಾಥರ ಎಚ್ಚರಿಕೆಯನ್ನು ಬೆದರಿಕೆಯೆಂದು ಪರಿಗಣಿಸಿದ ನೇಪಾಳ ಪ್ರಧಾನಿ ಕೆ ಪಿ ಶರ್ಮ ಒಲಿ ಯೋಗಿಯ ಹೇಳಿಕೆ ಅಧಿಕ ಪ್ರಸಂಗಿತನವೆಂದು ಪರೋಕ್ಷವಾಗಿ ಟೀಕಿಸಿದ್ದಾರೆ.
ಬುಧವಾರ ಈ ಕುರಿತು ಮಾತನಾಡಿದ ಶರ್ಮಾ, ಉತ್ತರ ಪ್ರದೆಶ ಮುಖ್ಯಮಂತ್ರಿ ಯೋಗಿ ನೇಪಾಳದ ಕುರಿತು ಕೆಲವು ಮಾತುಗಳನ್ನಾಡಿದ್ದಾರೆ. ಅವರ ಹೇಳಿಕೆ ಸೂಕ್ತ ಅಥವಾ ನ್ಯಾಯಸಮ್ಮತವಲ್ಲ. ಅವರು ಗಡಿ ವಿಚಾರದಲ್ಲಿ ಬೆದರಿಕೆ ದಾಟಿಯಲ್ಲಿ ಮಾತಾಡಕೂಡದು. ಅವರು ಜವಾಬ್ದಾರರಲ್ಲದ ವಿಷಯಗಳ ಬಗ್ಗೆ ಮಾತನಾಡಕೂಡದೆಂದು ಭಾರತದ ಕೇಂದ್ರ ಸರ್ಕಾರ ಅವರಿಗೆ ಹೇಳಬೇಕು ಅಲ್ಲದೆ ನೇಪಾಳದ ಕುರಿತು ಅವರ ಹೇಳಿಕೆಗಳನ್ನು ಖಂಡಿಸಬೇಕು ಎಂದಿದ್ದಾರೆ.
ಭಾರತವು ನೇಪಾಳದ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂದು ಆರೋಪಿಸಿದ ಶರ್ಮಾ, ಲಿಪುಲೇಖ್, ಕಾಲಪಾನಿ, ಲಿಂಪಿಯಾಧುರ ನೇಪಾಳದ ಭಾಗವಾಗಿದ್ದು 1960 ರಿಂದ ಭಾರತ ತನ್ನ ಸೇನೆಯನ್ನು ಅಲ್ಲಿ ನಿಯೋಜಿಸಿದೆ. ವಿವಾದ ಇತ್ಯರ್ಥಕ್ಕೆ ಮಾತುಕತೆ ನಡೆಸಲು ಉತ್ಸುಕರಾಗಿರುವ ಅವರು ರಾಜತಾಂತ್ರಿಕ ಗೆಲುವು ನಮ್ಮದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ







