• Home
  • About Us
  • ಕರ್ನಾಟಕ
Wednesday, July 30, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಗಂಭಿರ ಸಮಸ್ಯೆಯ ಕುರಿತು ಅರಿವು ಮೂಡಿಸುತ್ತಿರುವ 8ರ ಪುಟ್ಟ ಬಾಲಕಿ

by
March 8, 2020
in ದೇಶ
0
ಗಂಭಿರ ಸಮಸ್ಯೆಯ ಕುರಿತು ಅರಿವು ಮೂಡಿಸುತ್ತಿರುವ 8ರ ಪುಟ್ಟ ಬಾಲಕಿ
Share on WhatsAppShare on FacebookShare on Telegram

ಅವಳು 8 ವರ್ಷದ ಪುಟ್ಟ ಬಾಲೆ. ಆದರೆ, ಅವಳ ಈ ಸಣ್ಣ ಹರೆಯದಲ್ಲೇ, ಜಗತ್ತೇ ಅವಳೆಡೆಗೆ ತಿರುಗಿ ನೋಡುವಂತಹ ಹೋರಾಟವನ್ನು ಮಾಡಿದಂತಹ ಹುಡುಗಿ. ಹವಾಮಾನ ಬದಲಾವಣೆಯ ಕುರಿತು ಜಗತ್ತಿನಾದ್ಯಂತ ಅರಿವು ಮೂಡಿಸುವ ಕಾರ್ಯ ಮಾಡುತ್ತಿರುವ ಈ ಹುಡುಗಿಯ ಹೆಸರು ಲಿಸಿಪ್ರಿಯಾ ಕಂಗುಜಮ್. ಇವಳ ದಿಟ್ಟತನ ಎಂತಹದ್ದೆಂದರೆ, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಾಮಾಜಿಕ ಜಾಲತಾಣದ ಖಾತೆಯನ್ನು ನಿರ್ವಹಿಸುವ ಆಹ್ವಾನವನ್ನು ನೇರವಾಗಿ ತಿರಸ್ಕರಿಸಿದ್ದಾಳೆ. ಇದರ ಬದಲು, ಭಾರತದಲ್ಲಿ Climate Bill (ಹವಾಮಾನ ಮಸೂದೆ)ಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾಳೆ.

#SheInspireUs ಶೀರ್ಷಿಕೆಯಡಿ ನರೇಂದ್ರ ಮೋದಿಯವರು ಇನ್ನೊಬ್ಬರಿಗೆ ಸ್ಪೂರ್ತಿಯಾಗುವಂತಹ ಮಹಿಳೆಯರಿಗೆ ತಮ್ಮ ಸಾಮಾಜಿಕ ಜಾಲತಾಣಗಳನ್ನು ನಿಭಾಯಿಸುವ ಅವಕಾಸವನ್ನು ನೀಡುತ್ತೇನೆಂದು ಘೋಷಿಸಿದ್ದರು. ಇದಕ್ಕೆ ಹಲವು ವ್ಯಕ್ತಿಗಳ ಹೆಸರುಗಳು ಕೇಳಿ ಬಂದಿತ್ತು. ಅವರಲ್ಲಿ ಲಿಸಿಪ್ರಿಯಾ ಕೂಡಾ ಒಬ್ಬಳು. ಆದರೆ, ಪ್ರಧಾನಿಯವರ ಆಹ್ವಾನವನ್ನು ತಿರಸ್ಕರಿಸಿರುವ ಲಿಸಿಪ್ರಿಯಾ, ನನ್ನ ಮಾತುಗಳನ್ನು ಕೇಲಲು ನೀವು ಸಿದ್ದರಿಲ್ಲದೇ ಇರುವ ಕಾರಣಕ್ಕೆ ನಿಮ್ಮ ಆಹ್ವಾನವನ್ನು ನಾನು ತಿರಸ್ಕರಿಸುತ್ತಾ ಇದ್ದೇನೆಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

Dear @narendramodi Ji,
Please don’t celebrate me if you are not going to listen my voice.

Thank you for selecting me amongst the inspiring women of the country under your initiative #SheInspiresUs. After thinking many times, I decided to turns down this honour.

Jai Hind! pic.twitter.com/pjgi0TUdWa

— Licypriya Kangujam (@LicypriyaK) March 6, 2020


ಟ್ವಿಟರ್‌ನಲ್ಲಿ ಬಹಳಷ್ಟು ಸದ್ದು ಮಾಡಿರುವ ಲಿಸಿಪ್ರಿಯಾ ಅವಳ ಮಾತುಗಳಿಗೆ ಹಲವು ವ್ಯಕ್ತಿಗಳಿಂದ ಪ್ರಶಂಸೆಯ ಪೂರವೇ ಹರಿದು ಬಂದಿದೆ. ಈದನ್ನು ರಾಜಕೀಯ ಲಾಭಕ್ಕಾಗಿ ಬಳಸಲು ಪ್ರಯತ್ನಿಸಿದ ಕಾಂಗ್ರೆಸ್‌ನ ಟ್ವೀಟ್‌ಗೆ ಖಾರವಾಗಿ ಉತ್ತರಿಸಿರುವ ಲಿಸಿಪ್ರಿಯಾ ಕಾಂಗ್ರೆಸ್‌ನ ಎಷ್ಟು ಜನ ಸಂಸದರು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಹವಾಮಾನ ಬದಲಾವಣೆಯ ಕುರಿತಾಗಿ ಮಾತನ್ನು ಎತ್ತೀದ್ದೀರಿ? ಎಂದು ಪ್ರಶ್ನಿಸಿದ್ದಾರೆ. ನನ್ನ ಹೆಸರನ್ನು ಕೇವಲ ಟ್ವಿಟರ್‌ ಕಾಂಪೈನ್‌ಗಳಿಗಾಗಿ ಮಾತ್ರ ಬಳಸಿಕೊಳ್ಳಬೇಡಿ. ಎಷ್ಟು ಜನರು ನನ್ನ ಮಾತನ್ನು ಕೇಳಿದ್ದೀರಿ? ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೂ ಈ ವಿಷಯದ ಕುರಿತು ಪ್ರಸ್ತಾಪಿಸಿತ್ತು. ಮತ್ತೆ ನಾನು ಕೂಡಾ ಹವಮಾನ ಬದಲಾವಣೆಯ ಕುರಿತಾದ ಹಲವು ದುಂಡು ಮೇಜಿನ ಸಭೆಗಳಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿದ್ದಾರೆ.

OK @INCIndia. You feel sympathy for me. It’s ok. Let’s comes to the point. How many of your MPs going to put up my demands in the ongoing Parliament Session both in Lok Sabha & Rajya Sabha?
I also don’t want you to use my name just for twitter campaign? Who is listening my voice? https://t.co/ms54F9MnQt

— Licypriya Kangujam (@LicypriyaK) March 7, 2020


ADVERTISEMENT

ಯಾರು ಈ ಲಿಸಿಪ್ರಿಯಾ?

ಅಕ್ಟೋಬರ್‌ 2, 2011ರಲ್ಲಿ ಮಣಿಪುರ್‌ನ ಬಾಷಿಖಾಂಗ್‌ನಲ್ಲಿ ಜನಿಸಿದ ಲಿಸಿಪ್ರಿಯಾಗೆ ಈವರೆಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಏಳು ವಯಸ್ಸಿನಲ್ಲೇ ಸಂಸತ್ತಿನ ಎದುರು ಹವಮಾನ ಬದಲಾವಣೆಯ ಕುರಿತು ಪ್ರತಿಭಟನೆಯನ್ನು ನಡೆಸಿ ದೇಶದ ಗಮನ ಸೆಳೆದವಳು ಈಕೆ. 2019ರಲ್ಲಿ ಅಂಗೋಲಾದಲ್ಲಿ ಸುಮಾರು 50,000 ಮಕ್ಕಳು ಹಾಗೂ ಯುವಕರನ್ನು ಜೊತೆ ಸೇರಿಸಿ ಹವಾಮಾನ ಬದಲಾವಣೆಯ ಕುರಿತು ಜಾಗೃತಿ ಮೂಡಿಸಲು ಯಶಸ್ವಿ ಜಾಥಾವನ್ನು ಕೂಡಾ ಕೈಗೊಂಡಿದ್ದಳು. ನಂತರ ಅಂಗೋಲದಲ್ಲಿ UNESCO ಸಹಭಾಗಿತ್ವದೊಂದಿಗೆ ನಡೆದ ಸಮಾವೇಶದಲ್ಲಿ ಅಂಗೋಲಾ ದೇಶದ ಅಧ್ಯಕ್ಷ, ಮಾಲಿ ದೇಶದ ಅಧ್ಯಕ್ಷ, ರಿಪಬ್ಲಿಕ್‌ ಆಫ್‌ ಕಾಮಗೋ ಅಧ್ಯಕ್ಷ, UNESCO ಡೈರೆಕ್ಟರ್‌ ಜನರಲ್‌ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವ ಅವಕಾಶ ಲಿಸಿಪ್ರಿಯಾಗೆ ಸಿಕ್ಕಿತ್ತು.

ನವದೆಹಲಿಯ ಇಂಡಿಯಾ ಗೇಟ್‌ನಲ್ಲಿ ಕಳೆದ ಅಕ್ಟೋಬರ್‌ನಲ್ಲಿ ʼGreat October March 2019′ ಆರಂಭಿಸಿದ ಲಿಸಿಪ್ರಿಯಾ, ಅಕ್ಟೋಬರ್‌ 21ರಿಂದ 27ರವರೆಗೆ ಸತತವಾಗಿ ಹವಾಮಾನ ಬದಲಾವಣೆಯ ಕುರಿತು ಸರ್ಕಾರದ ಗಮನ ಸೆಳೆಯಲು ಪ್ರಯತ್ನ ಪಟ್ಟಿದ್ದಳು. ಹವಾಮಾನ ಮಸೂದೆಯ ಕುರಿತು ಮಾತನಾಡಿರುವ ಲಿಸಿಪ್ರಿಯಾ “ಪ್ರಪಂಚದ ಕೇವಲ ಐದು ರಾಷ್ಟ್ರಗಳು ಮಾತ್ರ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿವೆ. ಆ ಪಟ್ಟಿಯಲ್ಲಿ ಇನ್ನೂ ಭಾರತದ ಹೆಸರಿಲ್ಲ. ನಮ್ಮ ಭವಿಷ್ಯವನ್ನು ಸುಭಧ್ರವಾಗಿಸಲು ಆದಷ್ಟು ತ್ವರಿತವಾಗಿ ಹವಾಮಾನ ಬದಲಾವಣೆಯ ಕುರಿತಾದ ಮಸೂದೆಯನ್ನು ಜಾರಿಗೆ ತರಲೇ ಬೇಕು,” ಎಂದು ಹೇಳಿದ್ದಾಳೆ.

ಈ ಪುಟ್ಟ ಪೋರಿಯ ದಿಟ್ಟತನಕ್ಕೊಂದು ಸಲಾಮ್‌ ಇರಲಿ. ಇಂತಹ ದಿಟ್ಟತನ ದೇಶದ ಎಲ್ಲಾ ಹೆಣ್ಣು ಮಕ್ಕಳಲ್ಲಿ ಬಂದರೆ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುವ ಉದ್ದೇಶವೂ ಈಡೇರಿದಂತಾಗುತ್ತದೆ.

Tags: Climate BillEnvironmental ActivistLicypriya Kangujamಲಿಸಿಪ್ರಿಯಾ ಕಂಗುಜಮ್ಹವಾಮಾನ ಮಸೂದೆ
Previous Post

ಸಾಧನೆಯ ಹಾದಿಯಲ್ಲಿ ಕೊಡಗಿನ ಬಹುಮುಖ ಪ್ರತಿಭೆ ಮಿಲನ ಭರತ್‌

Next Post

ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಬಂಧನ; ₹10,000 ಕೋಟಿ ಹೂಡಿಕೆಗೆ ‘YES’ ಅಂದ ಎಸ್‌ಬಿಐ

Related Posts

Top Story

UNTOLD STORY Of Lawyer Jagadish ಜಗದೀಶ್‌ ನೀವು ʻಫೇಕ್‌ʼ ಲಾಯರಾ..?

by ಪ್ರತಿಧ್ವನಿ
July 30, 2025
0

https://www.youtube.com/live/Yv33Ou0dYGQ?si=WhSp9jVO4jELudG_

Read moreDetails

ಶಿಥಿಲ ಶಾಲಾ ಕಟ್ಟಡ: ಪರ್ಯಾಯ ವ್ಯವಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌ ಲಾಡ್‌ ಸೂಚನೆ

July 30, 2025

Lakshmi Hebbalkar: ಬಾಲಕರ ಬಾಲಮಂದಿರ, ಮಹಿಳಾ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ..

July 30, 2025
ಆಪರೇಷನ್ ಸಿಂಧೂರ ನಿಲ್ಲಿಸಲು ವಿಶ್ವದ ಯಾವ ನಾಯಕನೂ ಹೇಳಿಲ್ಲ – ಪಾರ್ಲಿಮೆಂಟ್ ನಲ್ಲಿ ಮೋದಿ ಗುಡುಗು 

ಆಪರೇಷನ್ ಸಿಂಧೂರ ನಿಲ್ಲಿಸಲು ವಿಶ್ವದ ಯಾವ ನಾಯಕನೂ ಹೇಳಿಲ್ಲ – ಪಾರ್ಲಿಮೆಂಟ್ ನಲ್ಲಿ ಮೋದಿ ಗುಡುಗು 

July 30, 2025

ಸಂಸತ್‌ನಲ್ಲಿ ಮೋದಿ, ರಾಹುಲ್‌ ಗಾಂಧಿ ಭಾಷಣ..!

July 30, 2025
Next Post
ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಬಂಧನ; ₹10

ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಬಂಧನ; ₹10,000 ಕೋಟಿ ಹೂಡಿಕೆಗೆ ‘YES’ ಅಂದ ಎಸ್‌ಬಿಐ

Please login to join discussion

Recent News

Top Story

UNTOLD STORY Of Lawyer Jagadish ಜಗದೀಶ್‌ ನೀವು ʻಫೇಕ್‌ʼ ಲಾಯರಾ..?

by ಪ್ರತಿಧ್ವನಿ
July 30, 2025
Top Story

ಶಿಥಿಲ ಶಾಲಾ ಕಟ್ಟಡ: ಪರ್ಯಾಯ ವ್ಯವಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌ ಲಾಡ್‌ ಸೂಚನೆ

by ಪ್ರತಿಧ್ವನಿ
July 30, 2025
Top Story

Elumalai: ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾದ ಮೆಲೋಡಿ ಹಾಡು ರಿಲೀಸ್..

by ಪ್ರತಿಧ್ವನಿ
July 30, 2025
ಸಿಎಂ ನೇತೃತ್ವದಲ್ಲಿ ಸಚಿವರು, ಶಾಸಕರ ಸಭೆ – ಸಮಸ್ಯೆಗಳನ್ನು ಆಲಿಸಿದ ಸಿದ್ದು..! 
Top Story

ಸಿಎಂ ನೇತೃತ್ವದಲ್ಲಿ ಸಚಿವರು, ಶಾಸಕರ ಸಭೆ – ಸಮಸ್ಯೆಗಳನ್ನು ಆಲಿಸಿದ ಸಿದ್ದು..! 

by Chetan
July 30, 2025
Top Story

Lakshmi Hebbalkar: ಬಾಲಕರ ಬಾಲಮಂದಿರ, ಮಹಿಳಾ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ..

by ಪ್ರತಿಧ್ವನಿ
July 30, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

UNTOLD STORY Of Lawyer Jagadish ಜಗದೀಶ್‌ ನೀವು ʻಫೇಕ್‌ʼ ಲಾಯರಾ..?

July 30, 2025

ಶಿಥಿಲ ಶಾಲಾ ಕಟ್ಟಡ: ಪರ್ಯಾಯ ವ್ಯವಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌ ಲಾಡ್‌ ಸೂಚನೆ

July 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada