ಆರೋಪಿ ಗಂಡನಿಗೆ ಜಾಮೀನು ಕೊಡಿಸ್ತೀನಿ ಎಂದು ಅತ್ಯಾಚಾರ ಎಸಗಿದ ಪಂಜಾಬ್‌ನ ಮೊಹಾಲಿ ನಗರದ ಕೌನ್ಸಿಲರ್ ಕೃತ್ಯಕ್ಕೆ ಕಾಂಗ್ರೆಸ್ ತಲೆತಗ್ಗಿಸುವಂತಾಗಿದೆ. ಆಮಿಷಗಳನ್ನೊಡ್ದಿ ಅಶಕ್ತ ಮಹಿಳೆಯರನ್ನ ಚಪಲಕ್ಕೆ ಬಳಸಿಕೊಳ್ಳುವುದು ಸಾಮಾನ್ಯವಾಗಿದೆ. ಅದರಲ್ಲೂ ರಾಜಕಾರಣಿಗಳು ಹಾಗೂ ಅಧಿಕಾರಿಗಳಂತೂ ಈ ದೌರ್ಬಲ್ಯವನ್ನ ಸಮರ್ಥವಾಗಿ ಉಪಯೋಗಿಸಿಕೊಳ್ಳುತ್ತಾರೆ. ಉದ್ಯೋಗ ಕೊಡುವುದಾಗಿ, ಹಣ ಸಹಾಯ ಮಾಡುವುದಾಗಿ ಸಾಕಷ್ಟು ಮಹಿಳೆಯರನ್ನ ಮಂಚಕ್ಕೆ ಕರೆದಿರುವ ಘಟನೆಗಳು ನಡೆದಿವೆ, ರೇಷನ್ ಕಾರ್ಡ್ ನೀಡಲು ಮಂಚಕ್ಕೆ ಕರೆದ ದೆಹಲಿ ಆಮ್ ಆದ್ಮಿ ಪಕ್ಷದ ನಾಯಕನ ರಾಸಲೀಲೆಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈಗ ಮಾದಕ ವಸ್ತು ಸಾಗಣೆಗಾಗಿ ಜೈಲು ಪಾಲಾಗಿದ್ದ ಸಂತ್ರಸ್ಥೆ ಗಂಡನಿಗೆ ಜಾಮೀನು ಕೊಡಿಸ್ತೀನಿ ಎಂದು ಆಕೆಯನ್ನ ಕಾಮತೃಷೆಗೆ ಬಳಸಿದ ಪಂಜಾಬ್‌ನ ಮೊಹಾಲಿಯ ಕೌನ್ಸಿಲರ್ ರಾಜಸ್ಥಾನ ಪೊಲೀಸರ ಅತಿಥಿಯಾಗಿದ್ದಾನೆ.
ಪಂಜಾಬ್‌ನ ಮೊಹಾಲಿ ಸೆಕ್ಟರ್ 70 ವಾರ್ಡ್‌ನ ಕೌನ್ಸಿಲರ್ ಸುರೀಂದರ್ ಎಸ್ ರಜಪೂತ್ ಕಾಂಗ್ರೆಸ್ ಮುಖಂಡ, ಮಹಾ ಚಪಲಚನ್ನಿಗರಾಯ, ಈ ಹಿಂದೆ ಅಶ್ಲೀಲ ಹೇಳಿಕೆಗಳಿಗಾಗಿ ಸಾಕಷ್ಟು ಸುದ್ದಿಯಲ್ಲಿದ್ದಾತ. ಈತ ಪಕ್ಕದ ಮನೆಯ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದು, ವಿಡಿಯೋ ಮಾಡಿಕೊಂಡು ಎರಡು ವರ್ಷಗಳ ಕಾಲ ಕಿರುಕುಳ ನೀಡಿದ್ದಾನೆ, ರಾತ್ರೋರಾತ್ರಿ ರಾಜಸ್ಥಾನ ಪೊಲೀಸರು ಈತನ ಮನೆ ಮೇಲೆ ದಾಳಿ ನಡೆಸಿ, ಬಂಧಿಸಿ ಎಳೆದೊಯ್ದಿದ್ದಾರೆ.
ಸುರೀಂದರ್ ಪಕ್ಕದ ಮನೆಯಲ್ಲಿ ವಾಸಿಸುತ್ತಿರುವ ಮೂವತ್ತು ವರ್ಷ ವಯಸ್ಸಿನ ಮಹಿಳೆಯ ಗಂಡ ಟ್ರಾನ್ಸ್‌ಪೋರ್ಟ್ ನಡೆಸುತ್ತಿದ್ದ, ಆತನ ಲಾರಿ ರಾಜಸ್ಥಾನದಲ್ಲಿ ಪೊಲೀಸರಿಂದ ತಪಾಸಣೆಗೆ ಒಳಗಾದಾಗ ಲಾರಿಯಲ್ಲಿ ನಿಷೇಧಿತ ಮಾಧಕ ವಸ್ತು ಅಫೀಮ್ ಸಿಗುತ್ತೆ, ಆತನನ್ನ ಮಾದಕ ವಸ್ತು ಮಾರಾಟ ನಿಷೇಧ ಕಾನೂನಿನಡಿ ರಾಜಸ್ಥಾನ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸುತ್ತಾರೆ. ಪಕ್ಕದ ರಾಜ್ಯದಲ್ಲಿ ಜಾಮೀನು ಪಡೆಯಲು ಮಹಿಳೆಯ ಸಹಾಯಕ್ಕೆ ಕೌನ್ಸಿಲರ್ ಸುರೀಂದರ್ ಬರುತ್ತಾನೆ, ತನ್ನ ವಾರ್ಡ್ ನಿವಾಸಿಯಾಗಿದ್ದರಿಂದ ಸಾಕಷ್ಟು ಪರಿಚಯವೂ ಇತ್ತು. ಜೈಪುರದ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸಾಕಷ್ಟು ನನಗೆ ಗೊತ್ತಿದೆ, ಅಲ್ಲಿಗೆ ಹೋಗಿ ಮಾತಾಡೋಣ ಎಂದು ಪುಸಲಾಯಿಸಿ ಜೈಪುರಕ್ಕೆ ಕರೆತಂದು ರೂಂ ಮಾಡಿ ಉಳಿಸಿಕೊಳ್ಳುತ್ತಾನೆ, ಅಂದು ರಾತ್ರಿ ಅಮಲು ಬರುವ ಔಷಧ ನೀಡಿ ಅತ್ಯಾಚಾರವೆಸಗಿದ್ದಾನೆಂದು ಸಂತ್ರಸ್ಥೆ ದೂರಿಕೊಂಡಿದ್ದಾಳ
ಈ ಘಟನೆ ನಡೆದು ಎರಡು ವರ್ಷಗಳಾದರೂ ಮಹಿಳೆಗೆ ಈತ ಸಹಾಯ ಮಾಡಿಲ್ಲ, ಆಕೆಯ ಗಂಡ ಹೊರಗೆ ಬಂದಿರಲಿಲ್ಲ, ಹಾಗೂ ಆಕೆ ಪ್ರಕರಣವನ್ನೂ ದಾಖಲಿಸಿರಲಿಲ್ಲ, ಆರೋಪಿ ಸುರೀಂದರ್ ಆಕೆಯ ವಿಡಿಯೋ ಮಾಡಿ ಸತತವಾಗಿ ಕಿರುಕುಳ ನೀಡುತ್ತಿದ್ದ. ಆತ ಪ್ರಭಾವಿ ಕಾಂಗ್ರೆಸ್ ನಾಯಕನೂ ಆಗಿದ್ದರಿಂದ ವಾರ್ಡ್‌ನಲ್ಲಿ ಪ್ರಾಪರ್ಟಿ ಡೀಲರ್ ವೃತ್ತಿ ಮಾಡುತ್ತಿದ್ದರಿಂದ ಪೊಲೀಸರೂ ಮಹಿಳೆಯ ಸಹಾಯಕ್ಕೆ ಬಂದಿರಲಿಲ್ಲ. ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದ್ದರಿಂದ ಮಹಿಳೆ ತನ್ನ ಗಂಡ ಜಾಮೀನಿನ ಮೇಲೆ ಹೊರಬಂದ ಬಳಿಕ ಫೆಬ್ರುವರಿ 20ರಂದು ಜೈಪುರದ ಸದರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ, ಜೈಪುರ ಪೊಲೀಸರು ರಾತ್ರೋರಾತ್ರಿ ಸುರೀಂದರ್ ಮನೆ ಮೇಲೆ ದಾಳಿ ಮಾಡಿ ಬಂಧಿಸಿ ಕರೆದೊಯ್ದಿದ್ದು ಪಂಜಾಬ್ ಕಾಂಗ್ರೆಸ್‌ಗೂ ಮುಜುಗರ ತಂದಿದೆ. ಸದ್ಯ ಪೊಲೀಸರ ಅತಿಥಿಯಾಗಿರುವ ಕೌನ್ಸಿಲರ್‌ನ ಪ್ರಕರಣದ ದಿಕ್ಕು ಎತ್ತ ಸಾಗುತ್ತೋ, ಸಂತ್ರಸ್ಥೆಗೆ ನ್ಯಾಯ ಸಿಗುತ್ತಾ ನೋಡಬೇಕಿದೆ.