ಮಾರ್ಚ್ 29 ರಂದು ಆರಂಭವಾಗಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾಟಚನ್ನು ಲಾಕ್‌ಡೌನ್ ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿತ್ತು. ಇದರಿಂದ ಬಿಸಿಸಿಐಗೆ ಕೋಟ್ಯಾಂತರ ರುಪಾಯಿಯ ವ್ಯವಹಾರ ನಷ್ಟವಾಗಿತ್ತು.
ಲಾಕ್‌ಡೌನ್ ಹಿನ್ನಲೆಯಿಂದ ಅಂತರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳೇ ರದ್ದುಗೊಂಡಿದ್ದು, ಅಕ್ಟೋಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ-20 ವರ್ಲ್ಡ್ ಕಪ್ ಪಂದ್ಯಾಟವೂ ನಿಗದಿಪಡಿಸಿದ ವೇಳೆಯಲ್ಲೇ ನಡೆಯುವ ಸಾಧ್ಯತೆ ತೀರಾ ಕಡಿಮೆ ಇದೆ.
ಈ ನಡುವೆ ಐಪಿಎಲ್ ಪಂದ್ಯಾಟವನ್ನು ಈ ವರ್ಷವೇ ನಡೆಸುವುದಾಗಿ ಬಿಸಿಸಿಐ ಅಧ್ಯಕ್ಷ ಗಂಗೂಲಿ ಪತ್ರದಲ್ಲಿ ಹೇಳಿದ್ದಾರೆ. ಅಭಿಮಾನಿಗಳು, ಆಟಗಾರರು, ಫ್ರಾಂಚೈಸಿ, ಬ್ರಾಡ್‌ಕಾಸ್ಟರ್‌ಗಳು ಎಲ್ಲರೂ ಪಂದ್ಯಾಟ ನಡೆಯುವುದನ್ನು ಎದುರು ನೋಡುತ್ತಿದ್ದಾರೆ. ಬಿಸಿಸಿಐ, ಖಾಲಿ ಸ್ಟೇಡಿಯಂನಲ್ಲಾದರೂ ಐಪಿಎಲ್ ಪಂದ್ಯಾಟವನ್ನು ನಡೆಸಿಯೇ ತೀರುತ್ತದೆ ಎಂದು ಗಂಗೂಲಿ ಪತ್ರದಲ್ಲಿ ಹೇಳಿದ್ದಾರೆ.