ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು CEZ (ಕರಾವಳಿ ನಿಯಂತ್ರಣ ವಲಯ) ಕ್ಕೆ 2015ರಲ್ಲಿ ತಿದ್ದುಪಡಿ ತಂದಿದ್ದು ಕರಾವಳಿ ತೀರದ ಅಭಿವೃದ್ಧಿಗೆ ಆದ್ಯತೆ ನೀಡುತ್ತದೆ. ಮರಳು ಮತ್ತು ಕಲ್ಲನ್ನು ಬಳಸಿ ಭಾರತದ 7500 ಕಿ.ಮೀ ಉದ್ದದ ಸಮದ್ರ ತೀರದಲ್ಲಿ ರಸ್ತೆ ನಿರ್ಮಿಸಲು ಮೊದಲ ಬಾರಿ ಅನುಮತಿ ನೀಡಲಾಯಿತು. ಪರಿಸರಕ್ಕೆ ಸಂಬಂಧಿಸಿದ ಯಾವ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳದೆ ಇಂತಹ ತಿದ್ದುಪಡಿ ಮಾಡಲಾಗಿದೆ.
ಪರಿಸರ ಸಂರಕ್ಷಣೆ ಕಾಯ್ದೆ1986 ಮತ್ತು ವನ್ಯಜೀವಿ ಸಂರಕ್ಷಣೆ ಕಾಯ್ದೆ 1972 ರ ಅಡಿಯಲ್ಲಿ ಮಾಡಲಾದ 1991ರ ಮೂಲ ತಿದ್ದುಪಡಿಯ ಅನೇಕ ಕಾನೂನುಗಳನ್ನು ಉಲ್ಲಂಘಿಸಿ ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣೆ ಮಂಡಳಿ (MCZMA)ಯು ಮಾಡಿದ ಶಿಫಾರಸ್ಸಿನ ಆಧಾರದ ಮೇಲೆ ಹೊಸ ತಿದ್ದುಪಡಿ ಮಾಡಲಾಯಿತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ತಿದ್ದುಪಡಿ ಮಾಡುವಾಗ ತೀರ ಪ್ರದೇಶದ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ನಿರ್ಲಕ್ಷಿಸಲಾಗಿದೆ. ಕೃತಕವಾಗಿ ಸೃಷ್ಟಿಸಲ್ಪಡುವ ಭೂಭಾಗವು ಕರಾವಳಿಯ ಪರಿಸರ ವ್ಯವಸ್ಥೆಯನ್ನೇ ದುರ್ಬಲಗೊಳಿಸಬಲ್ಲದು. ಹವಳದ ದಂಡೆ, ಮೀನಿನ ಮೊಟ್ಟೆ ಇಡುವಿಕೆಯ ಪ್ರಕ್ರಿಯೆಯನ್ನೂ ನಾಶಪಡಿಸುತ್ತವೆ. ಜಲಚರಗಳ ಜೀವವ್ಯವಸ್ಥೆ ಮತ್ತು ವೈವಿಧ್ಯತೆ ಅಡ್ಡಪಡಿಸುತ್ತವೆ. ಇದರ ನೇರ ಪರಿಣಾಮ ಆಗಲಿರುವುದು ತೀರದ ಮೀನುಗಾರರ ಆರ್ಥಿಕತೆಯ ಮೇಲೆ. ಅದಲ್ಲದೆ ಊರು ಅಥವಾ ಪಟ್ಟಣ ಮತ್ತು ನೀರಿನ ಮೂಲಗಳ ಮಧ್ಯೆ ಒಂದು ಅಣೆಕಟ್ಟು ಸೃಷ್ಟಿಸಿ ನೈಸರ್ಗಿಕ ಒಳಚರಂಡಿ ವ್ಯವಸ್ಥೆಯನ್ನೇ ಬದಲಾಯಿಸುತ್ತವೆ. ಮತ್ತು ಕೃತಕವಾಗಿ ಸೃಷ್ಟಿಸುವ ಭೂಭಾಗದಿಂದಾಗಿ ನೆರೆ ಬರುವ ಸಂಭವವೂ ಇರುತ್ತದೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು CEZ (ಕರಾವಳಿ ನಿಯಂತ್ರಣ ವಲಯ)ಕ್ಕೆ 2015ರಲ್ಲಿ ತಿದ್ದುಪಡಿ ತಂದಿದ್ದು ಕರಾವಳಿ ತೀರದ ಅಭಿವೃದ್ಧಿಗೆ ಆದ್ಯತೆ ನೀಡುತ್ತದೆ. ಮರಳು ಮತ್ತು ಕಲ್ಲನ್ನು ಬಳಸಿ ಭಾರತದ 7500 ಕಿ.ಮೀ ಉದ್ದದ ಸಮದ್ರ ತೀರದಲ್ಲಿ ರಸ್ತೆ ನಿರ್ಮಿಸಲು ಮೊದಲ ಬಾರಿ ಅನುಮತಿ ನೀಡಲಾಯಿತು. ಪರಿಸರಕ್ಕೆ ಸಂಬಂಧಿಸಿದ ಯಾವ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳದೆ ಇಂತಹ ತಿದ್ದುಪಡಿ ಮಾಡಲಾಗಿದೆ.
ಪರಿಸರ ಸಂರಕ್ಷಣೆ ಕಾಯ್ದೆ1986 ಮತ್ತು ವನ್ಯಜೀವಿ ಸಂರಕ್ಷಣೆ ಕಾಯ್ದೆ 1972 ರ ಅಡಿಯಲ್ಲಿ ಮಾಡಲಾದ 1991ರ ಮೂಲ ತಿದ್ದುಪಡಿಯ ಅನೇಕ ಕಾನೂನುಗಳನ್ನು ಉಲ್ಲಂಘಿಸಿ ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣೆ ಮಂಡಳಿ (MCZMA)ಯು ಮಾಡಿದ ಶಿಫಾರಸ್ಸಿನ ಆಧಾರದ ಮೇಲೆ ಹೊಸ ತಿದ್ದುಪಡಿ ಮಾಡಲಾಯಿತು.
ಈ ತಿದ್ದುಪಡಿ ಮಾಡುವಾಗ ತೀರ ಪ್ರದೇಶದ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ನಿರ್ಲಕ್ಷಿಸಲಾಗಿದೆ. ಕೃತಕವಾಗಿ ಸೃಷ್ಟಿಸಲ್ಪಡುವ ಭೂಭಾಗವು ಕರಾವಳಿಯ ಪರಿಸರ ವ್ಯವಸ್ಥೆಯನ್ನೇ ದುರ್ಬಲಗೊಳಿಸಬಲ್ಲದು. ಹವಳದ ದಂಡೆ, ಮೀನಿನ ಮೊಟ್ಟೆ ಇಡುವಿಕೆಯ ಪ್ರಕ್ರಿಯೆಯನ್ನೂ ನಾಶಪಡಿಸುತ್ತವೆ. ಜಲಚರಗಳ ಜೀವವ್ಯವಸ್ಥೆ ಮತ್ತು ವೈವಿಧ್ಯತೆ ಅಡ್ಡಪಡಿಸುತ್ತವೆ. ಇದರ ನೇರ ಪರಿಣಾಮ ಆಗಲಿರುವುದು ತೀರದ ಮೀನುಗಾರರ ಆರ್ಥಿಕತೆಯ ಮೇಲೆ. ಅದಲ್ಲದೆ ಊರು ಅಥವಾ ಪಟ್ಟಣ ಮತ್ತು ನೀರಿನ ಮೂಲಗಳ ಮಧ್ಯೆ ಒಂದು ಅಣೆಕಟ್ಟು ಸೃಷ್ಟಿಸಿ ನೈಸರ್ಗಿಕ ಒಳಚರಂಡಿ ವ್ಯವಸ್ಥೆಯನ್ನೇ ಬದಲಾಯಿಸುತ್ತವೆ. ಮತ್ತು ಕೃತಕವಾಗಿ ಸೃಷ್ಟಿಸುವ ಭೂಭಾಗದಿಂದಾಗಿ ನೆರೆ ಬರುವ ಸಂಭವವೂ ಇರುತ್ತದೆ.
ಪರಿಸರವಾದಿಗಳ ತೀವ್ರ ವಿರೋಧ ಎದುರಿಸುತ್ತಿರುವ ಈ ಕಾಯ್ದೆಯ ವಿರುದ್ಧ ಸುಪ್ರೀಂ ಕೋರ್ಟಿಗೂ ಅರ್ಜಿ ಸಲ್ಲಿಸಲಾಗಿದೆ. ಸಮುದ್ರ ತೀರದ ಪ್ರದೇಶಗಳು ಖಾಸಗಿ ಸೊತ್ತಾಗಿರದೆ ಸರ್ಕಾರಿ ಆಸ್ತಿಯಾಗಿರುವುದೇ ಈ ಯೋಜನೆಯನ್ನು ಮುಂದುವರೆಸಲು ಸರ್ಕಾರಕ್ಕಿರುವ ಮುಖ್ಯ ಆಯ್ಕೆಯಾಗಿದೆ. ಇದರ ಹಿಂದಿರುವುದು ಭೂಮಿ ವಶಪಡಿಸಿಕೊಳ್ಳಬೇಕಿಲ್ಲ, ಪರಿಹಾರ ನೀಡಬೇಕಿಲ್ಲ ಎನ್ನುವ ವ್ಯಾವಹಾರಿಕ ಲೆಕ್ಕಾಚಾರಗಳು ಮಾತ್ರ. ಬೃಹತ್ ಮುಂಬೈ ಮಹಾನಗರ ಪಾಲಿಕೆ ಈಗಾಗಲೇ ಈ ಸಂಬಂಧ 12,700 ಕೋಟಿ ರೂಪಾಯಿಯ ಯೋಜನೆಯೊಂದನ್ನು ತಯಾರಿಸಿದೆ.
ಪರಿಸರವನ್ನು, ದೂರಗಾಮಿ ಪರಿಣಾಮಗಳನ್ನು ನಿರ್ಲಕ್ಷಿಸಿ ನಿರ್ಮಿಸಲ್ಪಡುವ ಈ ರಸ್ತೆಗಳಿಂದಾಗಿ ನಮ್ಮ ಕರಾವಳಿ ತೀರಗಳು ಕೇವಲ ರಿಯಲ್ ಎಸ್ಟೇಟ್ಗಳಾಗಿ ಮಾರ್ಪಾಡಾಗುತ್ತಿವೆ. ಮುಂಬೈಯ ಉದಾಹರಣೆಯನ್ನೇ ನೋಡುವುದಾದರೆ ‘ಮರೈನ್ ಡ್ರೈವ್’ ನಿಂದ ‘ವರ್ಲಿ’ವರೆಗಿನ 10 ಕಿ.ಮೀ ಉದ್ದದ ಕೋಸ್ಟಲ್ ರೋಡ್ಗಾಗಿ BMC (ಬೃಹತ್ ಮುಂಬೈ ಮಹಾನಗರ ಪಾಲಿಕೆ) ಅರಬ್ಬೀ ಸಮುದ್ರದಿಂದ 90 ಎಕ್ರೆ ಪ್ರದೇಶವನ್ನು ಬಳಸಿಕೊಳ್ಳುವ ನೀಲಿನಕ್ಷೆ ರಚಿಸಿದೆ. ಆದರೆ ಪರಿಸರ ತಜ್ಞರ ಪ್ರಕಾರ ಈ ಯೋಜನೆಗೆ ಬೇಕಿರುವುದು 20 ಎಕ್ರೆ ಪ್ರದೇಶ ಮಾತ್ರ. ಅಷ್ಟೇ ಅಲ್ಲದೆ ಶೆಡ್ಯೂಲ್ 1 ಪ್ರಕಾರ ಸಂರಕ್ಷಿತ ಜೀವಜಾಲ ಎಂದು ಪರಿಗಣಿಸಲ್ಪಟ್ಟಿರುವ ಹವಳದ ದಿಣ್ಣೆಗಳನ್ನು ಕೃತಕವಾಗಿ ಬೇರೆ ಕಡೆ ಸ್ಥಳಾಂತರಿಸಲಾಗುತ್ತದೆ. ಇದು ಸಮುದ್ರ ಜೀವಿಗಳ ಜೈವಿಕ ಸಂರಚನೆಗೆ ಸವಾಲೊಡ್ಡುತ್ತದೆ ಎಂದು ಜೀವಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.
ಈ ಯೋಜನೆಯು ಪರಿಸರ ವ್ಯವಸ್ಥೆಯ ಮೇಲೆ ಬೀರುವ ಪರಿಣಾಮವಲ್ಲದೆ ಭಾರತದಲ್ಲಿನ ಅಭಿವೃದ್ಧಿಯ ವಿಧಾನ ಮತ್ತು ಆದ್ಯತೆಯನ್ನೇ ಪ್ರಶ್ನಿಸುತ್ತದೆ. ಕಾರ್ಗಳ ಓಡಾಟಕ್ಕಾಗಿ ಅತಿ ಬಂಡವಾಳ ಹೂಡುವುದು ಪಶ್ಚಿಮದ ದೇಶಗಳ ಪದ್ಧತಿ. ಅದರಲ್ಲೂ ಕೈಗಾರೀಕರಣ ಮತ್ತು ಕೈಗಾರೀಕರಣೋತ್ತರ ಪಶ್ಚಿಮದ ಮಾದರಿ. ಅದನ್ನೇ ಭಾರತದಲ್ಲಿ ಅಳವಡಿಸಿಕೊಳ್ಳುವುದು ಎಷ್ಟು ಸರಿ? ಇಲ್ಲಿನ ಹವಾಗುಣ, ಪರಿಸರದ ವರ್ತನೆಗಳು, ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುವ ಪರಿಸರ ವ್ಯವಸ್ಥೆ ಇವೆಲ್ಲದರ ಮೇಲೆ ಬೀರುವ ಪರಿಣಾಮಗಳನ್ನು ಪರಿಗಣಿಸದೆ ಯೋಜನೆಯನ್ನು ರೂಪಿಸಿರುವುದು ಸ್ಪಷ್ಟವಾಗುತ್ತದೆ.
ಪ್ರಯಾಣಕ್ಕಾಗಿ ಮತ್ತು ದೈನಂದಿನ ಅಗತ್ಯಕ್ಕಾಗಿ ಬಸ್, ರಿಕ್ಷಾ, ರೈಲುಗಳಂತಹ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸುತ್ತಿರುವ ಭಾರತದಲ್ಲಿ ಇಂತಹ ಯೋಜನೆಗಳು ಪರಿಸರಕ್ಕೆ ಮಾರಕ ಮಾತ್ರವಲ್ಲ, ಅವೈಜ್ಞಾನಿಕವೂ ಹೌದು. ಅತೀವ ಸಮಯ ಮತ್ತು ಅತಿ ದುಬಾರಿಯಾಗಿರುವ ಈ ರಸ್ತೆಗೆ ಬದಲಾಗಿ ಪರಿಸರಕ್ಕೆ ಧಕ್ಕೆಯಾಗದಂತೆ ಅಂಡರ್ಗ್ರೌಂಡ್ ರಸ್ತೆಗಳನ್ನು ನಿರ್ಮಿಸಬಹುದಿತ್ತು. ಅದರಲ್ಲೂ ಖಾಸಗಿ ಕಾರ್ಗಳನ್ನು ಶೇಕಡಾ ಹತ್ತಕ್ಕಿಂತಲೂ ಕಡಿಮೆ ಮಂದಿ ಬಳಸುವ ಮುಂಬೈಯಂತಹ ನಗರಗಳಲ್ಲಿ ಇಂತಹ ರಸ್ತೆಯೇ ಅಪ್ರಸ್ತುತ.
ಹಾಗೆ ನೋಡುವುದಾದರೆ ನಮ್ಮ ರಸ್ತೆಗಳು ಪಾದಚಾರಿಗಳಿಗೆ ಹೆಚ್ಚು ಉಪಕಾರಿಯಾಗುವಂತಿರಬೇಕಿತ್ತು. ಹೆಚ್ಚು ಸಾಂದ್ರತೆಯನ್ನು ತಾಳಿಕೊಳ್ಳಬಲ್ಲ ರಸ್ತೆಗಳನ್ನು ನಿರ್ಮಿಸಬೇಕು. ಪ್ರತಿಯೊಬ್ಬನಿಗೂ ತಾನಿರುವ ಪ್ರದೇಶದಿಂದ 500 ಮೀ. ಒಳಗೆ ಶಾಲೆ, ಕಾಲೇಜು, ಆಸ್ಪತ್ರೆ, ಮಕ್ಕಳಿಗೆ ಮೈದಾನಗಳನ್ನು ಒಳಗೊಂಡಂತೆ ಎಲ್ಲಾ ಮೂಲ ಸೌಲಭ್ಯಗಳು ದೊರಕುವಂತಿರಬೇಕು. ಹೀಗಿದ್ದರೆ ನಮ್ಮ ಪ್ರಯಾಣದ ಅವಧಿಯ ಜೊತೆಗೆ ಪರಿಸರಕ್ಕೆ ಬಿಡುಗಾಡೆಯಾಗುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವೂ ಕಡಿಮೆಯಾಗುತ್ತದೆ.
ರಸ್ತೆಗಳು, ನಗರ, ಪಟ್ಟಣಗಳು ನೈಸರ್ಗಿಕ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡು ಪರಿಸರಕ್ಕೆ ಪೂರಕವಾಗಿ ಮಿತದರದ ಬದುಕನ್ನು ಪ್ರೋತ್ಸಾಹಿಸುವಂತಿರಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಕೆಲಸ ಆರಂಭಿಸಿರುವ ಫ್ರಾನ್ಸ್ ‘ಹದಿನೈದು ನಿಮಿಷಗಳ ನಗರ’ ಎಂಬಾ ಹೊಸ ಯೋಜನೆ ರೂಪಿಸಿದ್ದು ರಸ್ತೆ ಬದಿಯಲ್ಲಿದ್ದ 60,000 ಪಾರ್ಕಿಂಗ್ಗಳನ್ನು ತೆರವುಗೊಳಿಸಿ ಆ ಸ್ಥಳವನ್ನು ಆಟದ ಮೈದಾನವಾಗಿ ಮಾರ್ಪಡಿಸಲಾಗಿದೆ. ಆಸ್ಟ್ರೇಲಿಯಾದ ಮೆಲ್ಬರ್ನ್ನಲ್ಲೂ ಇಂಥದ್ದೊಂದು ಕಾರ್ಯ ಯೋಜನೆ ರೂಪುಗೊಳ್ಳುತ್ತಿದೆ.