Also Read: ಕೋವಿಡ್-19 ಮಹಾಮಾರಿಯೇ? ಭಾರತದ ಅಂಕಿ ಅಂಶಗಳು ಏನನ್ನುತ್ತವೆ?
ಜೂನ್ 14 ರ ಸಂಜೆ 5 ಗಂಟೆಗೆ ರಾಜ್ಯ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ನೀಡಿದ ಕರೋನಾ ಸೋಂಕಿನ ಕುರಿತಾದ ಮಾಹಿತಿ ಪ್ರಕಾರ ರಾಜ್ಯದಲ್ಲಿ 176 ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿದೆ.
ರಾಜ್ಯದಲ್ಲಿ 176 ಪ್ರಕರಣಗಳ ದಾಖಲಾತಿಯೊಂದಿಗೆ ರಾಜ್ಯದಲ್ಲಿ ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 7000 ತಲುಪಿದೆ. ಇದುವರೆಗೂ 3955 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು ಸಾವಿನ ಪ್ರಮಾಣ 86 ತಲುಪಿದೆ. ಸಕ್ರಿಯವಾಗಿರುವ 2956 ಪ್ರಕರಣದಲ್ಲಿ 16 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಪತ್ತೆಯಾಗಿರುವ ಒಟ್ಟು ಪ್ರಕರಣದಲ್ಲಿ 88 ಪ್ರಕರಣಗಳು ಅಂತರಾಜ್ಯ ಮೂಲದಿಂದ ಬಂದವು. 6 ಪ್ರಕರಣಗಳು ಅಂತರಾಷ್ಟ್ರೀಯ ಪ್ರಯಾಣದ ಹಿನ್ನಲೆ ಹೊಂದಿದೆ. ರಾಜ್ಯದಲ್ಲಿ ಇದುವರೆಗೂ 4,43,969 ಮಂದಿಯನ್ನು ಪರೀಕ್ಷಿಸಲಾಗಿದೆ.
Also Read: ಲಾಕ್‌ಡೌನ್ ವಿಚಾರದಲ್ಲಿ ನೆರೆ ರಾಷ್ಟ್ರವನ್ನು ಅನುಸರಿಸಿದ್ದು ತಪ್ಪು: ಡಾ. ಶ್ರೀನಿವಾಸ ಕಕ್ಕಿಲ್ಲಾಯ
ಇನ್ನು ಭಾರತದಲ್ಲಿ 11,458 ಹೊಸ ಪ್ರಕರಣಗಳು ಕಂಡುಬಂದಿದ್ದು ಒಟ್ಟು ಸೋಂಕಿತರ ಸಂಖ್ಯೆ 3 ಲಕ್ಷದ 21 ಸಾವಿರ ದಾಟಿದೆ. ಇದುವರೆಗೂ 1 ಲಕ್ಷದ 62 ಸಾವಿರ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇಂದು 386 ಸೋಂಕಿತರು ಮರಣವನ್ನಪ್ಪಿದ್ದು 9,195 ಮಂದಿ ಇದುವರೆಗೂ ಮರಣವನ್ನಪ್ಪಿದ್ದಾರೆ.






