ತೆಲಂಗಾಣದಲ್ಲಿ ಹೀಗೊಂದು ಘಟನೆ ನಡೆದಿತ್ತು. ಈಗ ತಡವಾಗಿ ಬೆಳಕಿದೆ ಬಂದಿದೆ. ಈ ಘಟನೆ ನಡೆದಿದ್ದು ಏಪ್ರಿಲ್ 26ಕ್ಕೆ. ಆದರೀಗ ಈ ಬಗ್ಗೆ ತೆಲಂಗಾಣ ಸರ್ಕಾರದ ತೆಲಂಗಾಣ ಹೈಕೋರ್ಟ್ ಗೆ ಈ ಬಗ್ಗೆ ವರದಿ ಒಪ್ಪಿಸಿದೆ. ವರದಿಯಲ್ಲಿ ಗರ್ಭಿಣಿ ಮಹಿಳೆಯೊಬ್ಬರಿಗೆ ನಗರದ ಆರು ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಪರಿಣಾಮ ತಾಯಿ ಹಾಗೂ ಮಗು ಮೃತಪಟ್ಟಿದ್ದಾರೆ. ಅಲ್ದೆ ಆಕೆಗೆ ಕೋವಿಡ್-19 ಸೋಂಕು ಲಕ್ಷಣಗಳು ಇತ್ತು. ಹೀಗಾಗಿ ಚಿಕಿತ್ಸೆ ನೀಡಲು ಹಿಂಜರಿದೆವು ಎಂದು ವೈದ್ಯರು ಕಾರಣಕೊಟ್ಟಿದ್ದಾರೆ.
ವಾಸ್ತವದಲ್ಲಿ ಆಗಿದ್ದೇನು.?
20 ವರ್ಷದ ಜನೀಲಾ ತುಂಬು ಗರ್ಭಿಣಿಯಾಗಿದ್ದಳು. ಹೆರಿಗೆ ನೋವು ಕಾಣಿಸಿಕೊಂಡ ಕೂಡಲೇ ಮನೆಯವರು ಆಸ್ಪತ್ರೆ ಸೇರಿಸಲು ಮುಂದಾಗಿದರು. ಆದರೆ ಜನೀಲಾಗೆ ಯಾವ ಆಸ್ಪತ್ರೆ ಕೂಡ ಚಿಕಿತ್ಸೆ ನೀಡಲು ಒಪ್ಪಲಿಲ್ಲ. ಹೀಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಮೂರು ದಿನಗಳ ಕಾಲ ಜನೀಲಾಳನ್ನ ಹೊತ್ತು ಕೊಂಡು ಆಕೆಯ ಗಂಡ ಹಾಗೂ ಪೋಷಕರು ಓಡಾಡಿದರು. ಸುಮಾರು ಆರು ಆಸ್ಪತ್ರೆಯ ಕದ ತಟ್ಟಿದ್ದಾರೆ ಇವರು.
ಏಪ್ರಿಲ್ 23ಕ್ಕೆ ಜನೀಲಾಳನ್ನು ರಜೋಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಅಲ್ಲಿನ ವೈದ್ಯರು ಸೋಂಕು ಲಕ್ಷಣಗಳಿವೆ ಎಂದು ಗಡ್ವಾಲ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಅಲ್ಲಿಯೂ ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯರು, ತುಂಬು ಗರ್ಭಿಣಿ ಜನೀಲಾಳನ್ನು, ಮೆಹಬೂಬ್ ನಗರ ಜಿಲ್ಲಾಸ್ಪತ್ರೆಗೆ ರೆಫರ್ ಮಾಡಿದರು. ಅಲ್ಲಿಯೂ ಕೂಡ ಚಿಕಿತ್ಸೆ ನಿರಾಕರಿಸಿದರು. ಈ ವೇಳೆ ಆಕೆಯನ್ನು ಸುಲ್ತಾನ್ ಬಜಾರ್‌ನಲ್ಲಿನ ಗಾಂಧಿ ಆಸ್ಪತ್ರೆಯಲ್ಲಿ ಕೋವಿಡ್ 19 ಟೆಸ್ಟ್ ಮಾಡಿಸಲಾಯ್ತು. ಈ ವೇಳೆ ವದರಿ ನೆಗೆಟಿವ್ ಎಂದು ಬಂದಿದೆ. ಜನೀಲಾಗೆ ವೈದ್ಯರು ಚಿಕಿತ್ಸೆ ನಿರಾಕರಿಸಲು ಪ್ರಮುಖ ಕಾರಣ ಏನು ಎಂದರೆ, ಜನೀಲಾ ವಾಸವಾಗಿದ್ದು ಸರ್ಕಾರ ಕರೋನಾ ಸೂಕ್ಷ್ಮ ಪ್ರದೇಶವೆಂದು ಘೋಷಿಸಿದ್ದ ಗಡ್ವಾಲ ಜಿಲ್ಲೆಯ ಜೋಗುಲಂಬಾದಲ್ಲಿ.
ಈ ವದರಿಯನ್ನುಟ್ಟುಕೊಂಡು ಪೆತ್ಲಾಬುರ್ಜ್ ಆಸ್ಪತ್ರೆ ಸೇರಿಕೊಂಡ ಜನೀಲಾ ಗಂಡು ಮಗುವಿಗೆ ಜನ್ಮ ನೀಡಿದಳು. ಅಷ್ಟೊತ್ತಿಗಾಗಲೇ ಹೆರಿಗೆ ಸಮಯ ಮೀರಿತ್ತು. ಹೀಗಾಗಿ ಮಗುವು ಅಸ್ವಸ್ಥ ರೂಪದಲ್ಲಿತ್ತು. ತಕ್ಷಣ ಮಗುವನ್ನು ನಗರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರವಾನಿಸಲಾಯ್ತು. ಆದ್ರೆ ಅಷ್ಟೊತ್ತಿಗಾಗಲೇ ಮಗುವಿನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇದಾದ ಮರುದಿನವೇ ಆರೋಗ್ಯದಲ್ಲಿ ಏರುಪೇರಾಗಿ ಜನೀಲಾ ಕೂಡ ಸಾವನ್ನಪ್ಪಿದಳು.
ಶಿಸ್ತು ಕ್ರಮ ಕೈಗೊಂಡ ತೆಲಂಗಾಣ ಹೈ ಕೋರ್ಟ್.!
ಈ ಬಗ್ಗೆ ತೆಲಂಗಾಣ ಸರ್ಕಾರ ಹೈಕೋರ್ಟ್‌ಗೆ ವರದಿ ಒಪ್ಪಿಸಿತ್ತು. ಈ ವರದಿಯನ್ನು ಪರಿಶೀಲಿಸಿದ ನ್ಯಾಯಾಲಯ ತಪ್ಪಿತಸ್ಥ ವೈದ್ಯರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಆದೇಶಿಸಿದೆ. ಅಲ್ಲದೆ ಸವಿಸ್ತಾರವಾದ ತನಿಖೆಗೆ ಸೂಚಿಸಿದೆ. ಇದೇ ವೇಳೆ ಕೋವಿಡ್-19 ವೈರಾಣು ಪಾಸಿಟಿವ್ ಇದ್ದ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸ ಕೂಡದು. ಅದ್ರಲ್ಲೂ ಗರ್ಭಿಣಿಯರಿಗೆ ಎಂದು ತಾಕೀತು ಮಾಡಿದೆ. ಅಲ್ಲದೆ ರೋಗಿಗಳಿಗೆ ಆಂಬುಲೆನ್ಸ್ ಸೇರಿದಂತೆ ಎಲ್ಲಾ ವೈದ್ಯ ವ್ಯವಸ್ಥೆಗಳು ಸೂಕ್ತ ಸಮಯಕ್ಕೆ ಒದಗಿಸಿ ಕೊಡಲು ಹೇಳಿದೆ. ಅಲ್ಲದೆ ಈ ಪ್ರಕರಣದ ಕುರಿತು ಮಾನವ ಹಕ್ಕುಗಳ ಆಯೋಗವೂ ಮಧ್ಯ ಪ್ರವೇಶಿಸಿದೆ.