ಕರೋನಾ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ʼಕರೋನಾ ವಾರಿಯರ್ಸ್ʼಗಳಾಗಿ ಸೇವೆ ಸಲ್ಲಿಸುತ್ತಿದ್ದ ವೈದ್ಯರಲ್ಲಿ ಕನಿಷ್ಟ 500 ಮಂದಿ ಮೃತಪಟ್ಟಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘದ ಪರಿಷ್ಕೃತ ವರದಿಯು ತಿಳಿಸಿದೆ.
Also Read: ಕರೋನಾ ಜೊತೆಗೆ ಹಸಿವನ್ನೂ ಓಡಿಸಲು ಪಣತೊಟ್ಟಿರುವ ಕರೋನಾ ವಾರಿಯರ್ಸ್
“ನಮ್ಮ ನೂತನ ಅಂಕಿ ಅಂಶಗಳ ಪ್ರಕಾರ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ 515 ವೈದ್ಯರು ಕರೋನಾದಿಂದಾಗಿ ಮೃತಪಟ್ಟಿದ್ದಾರೆ. ಮತ್ತು ಇವರೆಲ್ಲರೂ ನಮ್ಮ ಭಾರತೀಯ ವೈದ್ಯಕೀಯ ಸಂಘದ ವಿವಿಧ ಶಾಖೆಗಳ ಮೂಲಕ ಗುರುತಿಸಿರುವ ಅಲೋಪತಿ ವೈದ್ಯರು – ದೇಶಾದ್ಯಂತ 1,746 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಖ್ಯೆ ಹೆಚ್ಚಾಗಲೂ ಬಹುದು,” ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ರಾಜನ್ ಶರ್ಮಾ ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೃತಪಟ್ಟ 201 ವೈದ್ಯರು 60 ವರ್ಷದಿಂದ 70 ವರ್ಷದೊಳಗಿನವರು. 50 ರಿಂದ 60 ವರ್ಷದ ಒಳಗಿನ 171 ವೈದ್ಯರು ಮೃತಪಟ್ಟಿದ್ದಾರೆ. 70 ವರ್ಷಕ್ಕಿಂತ ಮೇಲ್ಪಟ್ಟ 66 ವೈದ್ಯರು ಮೃತಪಟ್ಟಿದ್ದರೆ, 59 ವೈದ್ಯರು 35 ರಿಂದ 50 ವರ್ಷದೊಳಗಿನವರು. ಕನಿಷ್ಠ 18 ವೈದ್ಯರು 35 ವರ್ಷಕ್ಕಿಂತ ಕೆಳಪಟ್ಟವರು ಎಂದು ಐಎಂಎ ದತ್ತಾಂಶಗಳು ತಿಳಿಸುತ್ತದೆ.
Also Read: ಕರೋನಾ ವಾರಿಯರ್ಸ್ ಕುರಿತ ಕೇಂದ್ರದ ಹೇಳಿಕೆಗೆ ಸಿಡಿಮಿಡಿಗೊಂಡ IMA
ಸರ್ಕಾರ ಘೋಷಿಸಿದಂತೆ, ಮೃತಪಟ್ಟ ಹಲವು ವೈದ್ಯರ ಕುಟುಂಬಗಳಿಗೆ ಇನ್ನೂ ಪರಿಹಾರ ಧನ ದೊರೆತಿಲ್ಲ. ಐಎಂಎ ಪ್ರಕಾರ ಮೃತಪಟ್ಟವರಲ್ಲಿ ಶೇ. 50ರಷ್ಟು ವೈದ್ಯರ ಕುಟುಂಬಗಳಿಗೆ ಇನ್ನೂ ಪರಿಹಾರ ಧನ ಸಿಕ್ಕಿಲ್ಲ.
Also Read: ಕರೋನಾ ವಾರಿಯರ್ಸ್ ಸಾವು: ಪರಿಹಾರದಲ್ಲಿ ಸರ್ಕಾರದ ತಾರತಮ್ಯ
ಐಎಂಎ ಈ ಹಿಂದೆಯೇ ಸರ್ಕಾರದ ವಿರುದ್ದ ಕಿಡಿಕಾರಿತ್ತು. ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಮೃತಪಟ್ಟ ವೈದ್ಯರ ಲೆಕ್ಕ ನಮ್ಮ ಬಳಿ ಇಲ್ಲ. ಅದು ನಮ್ಮ ಕೆಲಸವಲ್ಲ ರಾಜ್ಯ ಸರ್ಕಾರಗಳ ಕೆಲಸ ಎಂದು ಹೇಳಿದ್ದಕ್ಕೆ, ಈ ಹಿಂದೆ IMA 300ಕ್ಕೂ ಹೆಚ್ಚು ಮೃತಪಟ್ಟ ವೈದ್ಯರ ವರದಿ ಬಿಡುಗಡೆ ಮಾಡಿತ್ತು. ಸರ್ಕಾರದ ನಿರ್ಲಕ್ಷ್ಯತೆಯನ್ನು ತೀವ್ರವಾಗಿ ಖಂಡಿಸಿತ್ತು.