ಕೋವಿಡ್-19 ಚಿಕಿತ್ಸೆಗೆ ಹೆಚ್ಚುವರಿ ಶುಲ್ಕ ವಿಧಿಸದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದೇಶದಲ್ಲಿ ಚಿಕಿತ್ಸೆಗೆ ವಿಧಿಸಬೇಕಾದ ಮೊತ್ತವನ್ನೂ ವಿವರಿಸಲಾಗಿತ್ತು. ಖಾಸಗಿ ಆಸ್ಪತ್ರೆಗಳು 4,500 ರುಪಾಯಿಗಳಿಗಿಂತ ಹೆಚ್ಚಿನ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ಸರ್ಕಾರ ಆದೇಶದಲ್ಲಿ ಹೇಳಿತ್ತು.
ಜೂನ್ 18 ರಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದ ಕರ್ನಾಟಕ ರಾಜ್ಯ ಸರ್ಕಾರ, ಸರ್ಕಾರಿ ಆಸ್ಪತ್ರೆಯ ಮುಖಾಂತರ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದರೆ 2600 ರುಪಾಯಿ ಹಾಗೂ ನೇರವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ಒಳಪಟ್ಟವರಿಗೆ 4500 ರುಪಾಯಿಗಳನ್ನು ಪರೀಕ್ಷಾ ಶುಲ್ಕವಾಗಿ ವಿಧಿಸಬೇಕೆಂದು ಆದೇಶ ಹೊರಡಿಸಿತ್ತು.
ಅದಾಗ್ಯೂ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಜೂನ್ 25 ರಂದು ಕೋವಿಡ್ ಪರೀಕ್ಷೆಗೆ 6,000 ರುಪಾಯಿ ಶುಲ್ಕ ವಿಧಿಸಿರುವುದು ಆರೋಗ್ಯ ಇಲಾಖೆಯ ಗಮನಕ್ಕೆ ಬಂದಿದ್ದು ಸಂಬಂಧಪಟ್ಟ ಆಸ್ಪತ್ರೆ ಆಡಳಿತ ಮಂಡಳಿಗೆ ನೋಟೀಸ್ ಜಾರಿ ಮಾಡಿ ಎರಡು ದಿಗಳೊಳಗೆ ವಿವರಣೆ ನೀಡಬೇಕೆಂದು ಅಥವಾ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದೆ.
Notice issued to Apollo Hospital.
Charging more than 4500/- for RT-PCR Covid19 testing will attract legal action.@CMofKarnataka @BSYBJP @sriramulubjp @DrKSudhakar4 @CovidKarnataka @nimmasuresh @drashwathcn @mysurucitycorp @HospitalsApollo pic.twitter.com/AkDaxYq9NX
— PANKAJ KUMAR PANDEY, IAS (@iaspankajpandey) July 6, 2020