ಕೋವಿಡ್ 19 ಎಂಬ ಮಹಾಮಾರಿಯು ದೇಶದ ಎಲ್ಲ ಉದ್ಯಮಗಳನ್ನೂ ದಶಕಗಳ ಹಿಂದಕ್ಕೆ ಕರೆದೊಯ್ದಿದೆ. ಯಾವುದೇ ಉದ್ಯಮಿಯನ್ನು ಪ್ರಶ್ನಿಸಿದರೂ ಕೂಡ ವಹಿವಾಟೇ ಇಲ್ಲದೆ ಸೊರಗುತ್ತಿರುವುದು ಕಂಡು ಬರುತ್ತಿದೆ, ರಾಜ್ಯದಲ್ಲಿ ಲಕ್ಷಾಂತರ ಉದ್ಯೋಗಗಳು ನಷ್ಟವಾಗಿವೆ. ಇದರಲ್ಲಿ ಚಲನ ಚಿತ್ರೋದ್ಯಮಕ್ಕೆ ಆಗಿರುವ ಹಾನಿ ಎಲ್ಲ ಉದ್ಯಮಗಳಿಗಿಂತಲೂ ಹೆಚ್ಚು. ಯಾಕೆಂದರೆ ಈಗಾಗಲೇ ಕೋವಿಡ್ ಅನ್ ಲಾಕ್ ಆಗಿದ್ದರೂ ಸ್ಯಾಂಡಲ್ ವುಡ್ ಗೆ ಇನ್ನೂ ಆ ಅನುಕೂಲ ದೊರೆತಿಲ್ಲ. ರಾಜ್ಯ ಸರ್ಕಾರ ಚಿತ್ರಮಂದಿರಗಳನ್ನು ತೆರೆಯಲು ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ. ಚಿತ್ರ ನಿರ್ಮಾಪಕರು ಈಗಾಗಲೇ ಅರ್ಥ, ಮುಕ್ಕಾಲು ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೂ ಸಿದ್ದವಾಗಿದ್ದರೂ ಕಣ್ಣು ಬಾಯಿ ಬಿಡುವಂತಾಗಿದೆ. ಏಕೆಂದರೆ ಕಳೆದ ಆರು ತಿಂಗಳಿನಿಂದ ಹೂಡಿರುವ ಬಂಡವಾಳದ ಮೇಲಿನ ಬಡ್ಡಿಯೇ ಕೋಟ್ಯಾಂತರ ರೂಪಾಯಿಗಳಾಗಿವೆ. ಇದೀಗ ಸ್ಯಾಂಡಲ್ ವುಡ್ ಉದ್ಯಮಿಗಳು ಬೆಂಗಳುರಿನಲ್ಲಿ ಫಿಲ್ಮ್ ಸಿಟಿ ಸ್ಥಾಪನೆ ಮಾಡಲು ಸರ್ಕಾರವನ್ನು ಒತ್ತಾಯಿಸುತಿದ್ದಾರೆ. ಈ ಫಿಲ್ಮ್ ಸಿಟಿ ಯೋಜನೆ ಮೂಲತಃ ರಾಜ್ಯ ಸರ್ಕಾರದ್ದೇ ಅಗಿದೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆ ಅವರು ಬೆಂಗಳುರಿನಲ್ಲಿ ಚಿತ್ರ ನಿರ್ಮಾಣಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಫಿಲ್ಸ್ ಸಿಟಿ ಸ್ಥಾಪನೆಯ ಭರವಸೆ ನೀಡಿ 40 ವರ್ಷಗಳಾಗಿವೆ. ಅದಕ್ಕಾಗಿ ಹೆಸರಘಟ್ಟದಲ್ಲಿ ಜಮೀನನ್ನು ಗುರ್ತಿಸಲಾಗಿತ್ತು ಆದರೆ ಅದು ಈಗಲೂ ಕಾಗದದಲ್ಲಿ ಉಳಿದಿದೆ. ಸ್ಯಾಂಡಲ್ ವುಡ್ ಬಗ್ಗೆ ದೇಶದಲ್ಲಿ ಹೆಚ್ಚು ಪ್ರಚಾರ ಇಲ್ಲವಾದರೂ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
1954 ರಲ್ಲಿ ಪ್ರಾರಂಭವಾದಾಗಿನಿಂದ, ಸ್ಯಾಂಡಲ್ ವುಡ್ 60 ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ, ಮತ್ತು ಬಾಲಿವುಡ್ ದೇಶದ ಚಲನಚಿತ್ರ ನಿರ್ಮಾಣದ ಭದ್ರಕೋಟೆಯಾಗಿದ್ದರೆ, ಕನ್ನಡ ಚಲನಚಿತ್ರೋದ್ಯಮವು 2019-20ರ ಆರ್ಥಿಕ ವರ್ಷದಲ್ಲಿ ಸುಮಾರು 520 ಕೋಟಿ ರೂ.ಮೊತ್ತದ ಬಾಕ್ಸ್ ಆಫೀಸ್ ಕಲೆಕ್ಷನ್ ಪಡೆದಿದೆ. ಆದಾಗ್ಯೂ, ನಿರ್ಮಾಣ ಮತ್ತು ಚಿತ್ರೀಕರಣಕ್ಕಾಗಿ, ಕನ್ನಡ ಚಲನಚಿತ್ರೋದ್ಯಮವು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿ ಮತ್ತು ಮುಂಬೈ ಮತ್ತು ಚೆನ್ನೈನ ಇತರ ಸಣ್ಣ ಚಲನಚಿತ್ರ ಸ್ಟುಡಿಯೋಗಳಂತಹ ಚಲನಚಿತ್ರ ನಗರಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.ಆದರೆ ಸಾಂಕ್ರಮಿಕ ಹಿನ್ನೆಲೆಯಲ್ಲಿ ನಗರದಲ್ಲೇ ಫಿಲ್ಮ್ ಸಿಟಿ ಸ್ಥಾಪನೆಯು ಅತ್ಯವಶ್ಯಕವಾಗಿದೆ ಎಂದು ಉದ್ಯಮಿಗಳ ಅಬಿಪ್ರಾಯವಾಗಿದೆ.
ಕೋವಿಡ್ “ಸಾಂಕ್ರಾಮಿಕ ರೋಗದಿಂದ ಸ್ಯಾಂಡಲ್ ವುಡ್ ಸುಮಾರು 1,000 ಕೋಟಿ ರೂ. ನಷ್ಟವನ್ನು ಅನುಭವಿಸಿದೆ” ಎಂದು ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ (ಕೆಎಫ್‌ಸಿಸಿ) ಅಧ್ಯಕ್ಷ ಗುಬ್ಬಿ ಜೈರಾಜ್ ಹೇಳುತ್ತಾರೆ. ಕಳೆದ ಸೆಪ್ಟೆಂಬರ್ 9 ರಂದು ಕನ್ನಡದ ಸೂಪರ್ ಸ್ಟಾರ್ ಶಿವರಾಜ್‌ಕುಮಾರ್ ನೇತೃತ್ವದ ಕೆಎಫ್‌ಸಿಸಿ ನಿಯೋಗವು ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಅವರೊಂದಿಗೆ ಕನ್ನಡ ಚಲನಚಿತ್ರೋದ್ಯಮವನ್ನು ಪುನಃ ಚೈತನ್ಯಗೊಳಿಸುವ ಅಗತ್ಯತೆ ಮತ್ತು ಜಿಎಸ್‌ಟಿ ಸಬ್ಸಿಡಿಗಳ ಅಗತ್ಯತೆ ಮತ್ತು ಭವಿಷ್ಯದ ಯೋಜನೆಗಳ ಕುರಿತು ಸಭೆ ನಡೆಸಿತು. ಆ ಚರ್ಚೆಯಲ್ಲಿ ಫಿಲ್ಮ್ ಸಿಟಿ ಸ್ಥಾಪನೆ ಕೂಡ ಚರ್ಚೆಯ ಭಾಗವಾಗಿತ್ತು. ಆದಷ್ಟು ಬೇಗ ಫಿಲ್ಮ್ ಸಿಟಿ ಸ್ಥಾಪಿಸುವ ಬಗ್ಗೆ ನಾವು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಅವರು ತೆಗೆದುಕೊಂಡ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಗುಬ್ಬಿ ತಿಳಿಸಿದರು. ನಿರ್ಮಾಪಕರು ಈಗಾಗಲೇ ಭಾರಿ ನಷ್ಟವನ್ನು ಅನುಭವಿಸುತ್ತಿದ್ದಾರೆ ಮತ್ತು ಸ್ಟುಡಿಯೋಗಳಲ್ಲಿ ಚಿತ್ರೀಕರಣಕ್ಕಾಗಿ ಇತರ ರಾಜ್ಯಗಳಿಗೆ ಪ್ರಯಾಣಿಸುವ ಅನಿವಾರ್ಯತೆ ಇದ್ದು ಇನ್ನಷ್ಟು ಕಷ್ಟಕ್ಕೆ ತಳ್ಳಲಿದೆ ಎಂದು ಅವರು ಹೇಳಿದರು.
ಕರ್ನಾಟಕ ಚಲನಾಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್ ಅವರ ಪ್ರಕಾರ, ಸ್ಯಾಂಡಲ್ ವುಡ್ ನ ವಾರ್ಷಿಕ ವಹಿವಾಟು ಸುಮಾರು 1,000 ರಿಂದ 1,500 ಕೋಟಿ ರೂಪಾಯಿಗಳಾಗಿದ್ದು ಇದು ಚಲನಚಿತ್ರಗಳಲ್ಲದೆ, ಇದು ಹಲವಾರು ಟಿವಿ ಕಾರ್ಯಕ್ರಮಗಳನ್ನು ಸಹ ನಿರ್ಮಿಸುತ್ತದೆ. ಬೆಂಗಳೂರಿನಲ್ಲಿ ಈಗಾಗಲೇ ಕಂಠೀರವ ಸ್ಟುಡಿಯೋ ಇದ್ದರೂ ಕೂಡ ಇದು ನವೀಕೃತ ಸೌಲಭ್ಯಗಳನ್ನು ಹೊಂದಿಲ್ಲ ಅಥವಾ ಇಂದಿನ ಚಲನಚಿತ್ರಗಳಿಗೆ ಅಗತ್ಯವಾದ ಆಧುನಿಕ ಸೆಟ್ಟಿಂಗ್‌ಗಳನ್ನು ಹೊಂದಿಲ್ಲ ಎಂದು ಪುರಾಣಿಕ್ ಹೇಳಿದರು. ಕನ್ನಡ ಚಲನಚಿತ್ರೋದ್ಯಮವು ವರ್ಷಕ್ಕೆ 300-400 ಚಲನಚಿತ್ರಗಳನ್ನು ತಯಾರಿಸಲಾಗುತ್ತದೆ. ಫಿಲ್ಮ್ ಸಿಟಿ ಸ್ಥಾಪಿಸಿದರೆ, ನಿರ್ಮಾಪಕರು ಸ್ಥಳ, ಸ್ಟುಡಿಯೋ ಶುಲ್ಕಗಳು ಮತ್ತು ವಿವಿಧ ವೆಚ್ಚಗಳಿಗಾಗಿ ಖರ್ಚು ಮಾಡುವ ಪ್ರತಿ ಚಿತ್ರಕ್ಕೆ 25 ಕೋಟಿ ಯಿಂದ 50 ಕೋಟಿ ರೂಪಾಯಿಗಳವರೆಗೆ ಉಳಿಸಬಹುದು ಎಂದರು.”ಕೋವಿಡ್ ಕಾರಣದಿಂದಾಗಿ, ಈ ವರ್ಷ 200 ರಿಂದ 250 ಚಲನಚಿತ್ರಗಳನ್ನು ಮಾತ್ರ ಬಿಡುಗಡೆ ಅಗಿವೆ ಎಂದು ಅವರು ಹೇಳಿದರು. ಗುಬ್ಬಿ ಅವರ ಪ್ರಕಾರ, ಫಿಲ್ಸ್ ಸಿಟಿಯು ಸ್ಥಳೀಯರಿಗೆ ಉದ್ಯೋಗ ಮತ್ತು ಆದಾಯವನ್ನು ನೀಡುತ್ತದೆ. ಇದಲ್ಲದೆ ಇದರಿಂದ ಪ್ರವಾಸೋದ್ಯಮವು ಕೂಡ ಬೆಳೆಯುತ್ತದೆ. ಆಧುನಿಕ ಸೌಲಭ್ಯ ಹೊಂದಿದ್ದರೆ ಹೊರ ರಾಜ್ಯಗಳಿಂದಲೂ ನಿರ್ಮಾಪಕರು ಇಲ್ಲಿಗೆ ಬಂದು ಚಿತ್ರೀಕರಿಸುತ್ತಾರೆ ಎಂದೂ ಅವರು ಹೇಳಿದರು. ಈಗ ರಾಮೋಜಿ ಫಿಲ್ಮ್ ಸಿಟಿಗೆ ಪ್ರವೇಶಿಸಲು ಮತ್ತು ಚಲನಚಿತ್ರ ಶೂಟಿಂಗ್ ವೀಕ್ಷಿಸಲು ಜನರು 200 ರೂ. ಶುಲ್ಕ ವಿಧಿಸಲಾಗುತ್ತಿದೆ
ಆಗಿನ ಕಾಂಗ್ರೆಸ್ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸರ್ಕಾರ 1999 ರಲ್ಲಿ ಫಿಲ್ಮ್ ಸಿಟಿಯು ಹೆಸರಘಟ್ಟದಲ್ಲಿ ಸ್ಥಾಪನೆ ಮಾಡುವ ಕುರಿತು ಯೋಚಿಸಿತ್ತು. ಸುಮಾರು ಒಂದೂವರೆ ದಶಕದ ನಂತರ, 2015 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದನ್ನು ಮೈಸೂರಿನ ಹೊರವಲಯದಲ್ಲಿರುವ ರತ್ನಪುರಿಯಲ್ಲಿ ಸ್ಥಾಪಿಸಲು ಯೋಜನೆ ಹಾಕಿಕೊಂಡಿತು. 2019 ರಲ್ಲಿ ಮತ್ತೆ ಯೋಜನೆಗಳು ಬದಲಾದವು. ಆಗ ಮುಖ್ಯಮಂತ್ರಿ ಎಚ್.ಡಿ. ಕಾಂಗ್ರೆಸ್-ಜೆಡಿಎಸ್ ಒಕ್ಕೂಟದ ಮುಖ್ಯಸ್ಥರಾಗಿದ್ದ ಕುಮಾರಸ್ವಾಮಿ, ತಮ್ಮ ಕ್ಷೇತ್ರವಾದ ರಾಮನಗರ ಗಡಿಯಾಗಿರುವ ಕನಕಪುರದಲ್ಲಿ ಫಿಲ್ಮ್ ಸಿಟಿ ಬರಲಿದೆ ಎಂದು ಘೋಷಿಸಿದರು.
ಈ ನಿರ್ಧಾರವು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಘರ್ಷಣೆಗೂ ಕಾರಣವಾಯಿತು. ಫಿಲ್ಮ್ ಸಿಟಿಯನ್ನು ಸ್ಥಳಾಂತರಿಸಬೇಡಿ ಎಂದು ಸಿದ್ದರಾಮಯ್ಯ ಕುಮಾರಸ್ವಾಮಿಯನ್ನು ಒತ್ತಾಯಿಸಿದರು, ಮೈಸೂರಿನಲ್ಲಿ ಇದನ್ನು ಸ್ಥಾಪಿಸುವುದು ನಟ ಡಾ.ರಾಜ್‌ಕುಮಾರ್ ಅವರ ಆಶಯವಾಗಿತ್ತು. ಆದರೆ ಕುಮಾರಸ್ವಾಮಿ, ಸರ್ಕಾರ ಗಮನ ಹರಿಸಲಿಲ್ಲ. ನಂತರ ಬಂದ ಯಡಿಯೂರಪ್ಪ ಸರ್ಕಾರ . ಪ್ರಖ್ಯಾತ ವರ್ಣಚಿತ್ರಕಾರ ಸ್ವೆಟೋಸ್ಲಾವ್ ರೋರಿಚ್ ಮತ್ತು “ಭಾರತೀಯ ಚಿತ್ರರಂಗದ ಪ್ರಥಮ ಮಹಿಳೆ” ದೇವಿಕಾ ರಾಣಿಗೆ ಸೇರಿದ ಬೆಂಗಳೂರಿನ ಪ್ರಸಿದ್ಧ ತಾತಗುಣಿ ಎಸ್ಟೇಟ್ ನಲ್ಲಿ ಇದನ್ನು ನಿರ್ಮಿಸಲು ತೀರ್ಮಾನ ತೆಗೆದುಕೊಂಡಿತು. ಆದರೆ ಪರಿಸರವಾದಿಗಳು ಇದನ್ನು “ಪರಿಸರ-ಸೂಕ್ಷ್ಮ ವಲಯ” ಎಂದು ಆಕ್ಷೇಪಿಸಿದ ನಂತರ ಈ ಪ್ರಸ್ತಾಪವನ್ನು ರದ್ದುಗೊಳಿಸಲಾಯಿತು. ನಾಲ್ಕೂವರೆ ದಶಕಗಳ ನಂತರ, ಚಲನಚಿತ್ರ ನಗರವನ್ನು ನಿರ್ಮಿಸಲು ಬಿಜೆಪಿ ಸರ್ಕಾರವು ಹೆಸರಘಟ್ಟದಲ್ಲಿ 150 ಎಕರೆ ಭೂಮಿಯನ್ನು ಮಂಜೂರು ಮಾಡಿದೆ.
ಆದರೆ ಹೆಸರಘಟ್ಟದಲ್ಲಿ ನಿರ್ಮಿಸಿದರೆ ಇಲ್ಲಿರುವ ಸಾವಿರಾರು ವಲಸೆ ಪಕ್ಷಿಗಳಿಗೆ ತೊಂದರೆ ಆಗುತ್ತದೆ ಎಂದು ಪರಿಸರವಾದಿ ಜೋಸೆಫ್ ಹೂವರ್ ಹೇಳಿದರು. ಇದೊಂದೆ ಬೆಂಗಳೂರಿನಲ್ಲಿ ಉಳಿದಿರುವ ಕೊನೆಯ ಹುಲ್ಲುಗಾವಲು ಎಂದೂ ಅವರು ಹೇಳಿದರು. ನಮ್ಮ ರಾಜಕಾರಣಿಗಳಲ್ಲಿರುವ ಇಚ್ಚಾ ಶಕ್ತಿಯ ಕೊರತೆಯೇ ರಾಜ್ಯದಲ್ಲಿ ಫಿಲ್ಮ್ ಸಿಟಿ ಸ್ಥಾಪನೆ ಆಗದಿರಲು ಕಾರಣ ಎಂದು ನಟ ರಾಜಕಾರಣಿ ಪ್ರಕಾಶ್ ರಾಜ್ ಹೇಳಿದರು.