ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ಶುಕ್ರವಾರ 30 ವರ್ಷದ ಯುವಕನಿಗೆ ಕೊವಾಕ್ಸಿನ್ ನ ಮೊದಲ ಡೋಸ್ ಅನ್ನು ನೀಡಲಾಗಿದೆ.
ಅದಕ್ಕೂ ಮೊದಲು ರಕ್ತ ಪರೀಕ್ಷೆಯನ್ನು ಸೇರಿದಂತೆ ಹಲವಾರು ಪೂರ್ವ-ಪರೀಕ್ಷೆಗಳಿಗೆ ಒಟ್ಟು 12 ಸ್ವಯಂಸೇವಕರನ್ನು ಒಳಪಡಿಸಲಾಗಿತ್ತು. ಫಲಿತಾಂಶಗಳ ಬಳಿಕ ಲಸಿಕೆಯನ್ನು ಹಂತ ಹಂತವಾಗಿ ನೀಡಲು 10 ಆರೋಗ್ಯವಂತ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ.
ಈಗಾಗಲೇ ಮೊದಲ ಡೋಸ್ ಪಡೆದಿರುವ ವ್ಯಕ್ತಿ ಮೊದಲ ಡೋಸ್ ನಂತರ, ಅವರ ಆರೋಗ್ಯ ಸ್ಥಿತಿಯ ವರದಿಯನ್ನು ಎಥಿಕ್ಸ್ ಸಮಿತಿಗೆ ಸಲ್ಲಿಸಲಾಗುತ್ತದೆ, ಅದು ಸಂಪೂರ್ಣ ಪ್ರಕ್ರಿಯೆಯನ್ನು ಪರಿಶೀಲಿಸಲಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಪ್ರಯೋಗದ ಸಮಯದಲ್ಲಿ 100 ಆರೋಗ್ಯವಂತ ಜನರಿಗೆ ಏಮ್ಸ್ ನಲ್ಲಿ ಲಸಿಕೆ ನೀಡಲಾಗುವುದು ಎಂದು ಏಮ್ಸ್ ಮೂಲಗಳು ತಿಳಿಸಿವೆ.
ಐಸಿಎಂಆರ್(ICMR) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (NIV) ಸಹಯೋಗದೊಂದಿಗೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಾಕ್ಸಿನ್, ಮಾನವನ ಪ್ರಾಯೋಗಿಕ ಪರೀಕ್ಷೆಗಳಿಗೆ ಇತ್ತೀಚೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಯಿಂದ ಅನುಮೋದನೆ ಪಡೆದಿತ್ತು.