ಸಚಿವ ಕೆ ಟಿ ಜಲೀಲ್ ರಾಜಿನಾಮೆ ಒತ್ತಾಯಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದು ಕಾಂಗ್ರೆಸ್ ಶಾಸಕ ವಿಟಿ ಬಲರಾಮ್ ಸೇರಿದಂತೆ ಹಲವು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಘಟನಾ ವೇಳೆಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿಗಳಿಗೂ ಗಾಯಗಳಾಗಿವೆ ಎಂದು ಮಾತೃಭೂಮಿ ವೆಬ್ ಅವತರಣಿಕೆ ವರದಿ ಮಾಡಿದೆ.
Also Read: ಕೇರಳ: ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಚಿನ್ನದ ಹಗರಣ
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೇರಳದ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಚಿನ್ನ ಕಳ್ಳ ಸಾಗಾಣಿಕೆಯಲ್ಲಿ ಪ್ರಮುಖ ಆರೋಪಿಯಾಗಿರುವ ಸ್ವಪ್ನಾ ಸುರೇಶ್ ಜೊತೆಗೆ ಕೇರಳ ಉನ್ನತ ಶಿಕ್ಷಣ ಸಚಿವ ಕೆ.ಟಿ ಜಲೀಲ್ ನಡೆಸಿರುವ ಸಂಭಾಷಣೆಯ ತುಣುಕುಗಳು ಮಾಧ್ಯಮದ ಕೈ ಸೇರಿದ್ದು, ಕೆ ಟಿ ಜಲೀಲ್ ಎನ್ಐಎ ವಿಚಾರಣೆಗೂ ಒಳಪಟ್ಟಿದ್ದರು.
Also Read: ಕೇರಳ ಚಿನ್ನ ಹಗರಣ ದಾಖಲೆಯಿದ್ದ ಕಛೇರಿ ಬೆಂಕಿಗೆ ಆಹುತಿ: ಸರ್ಕಾರದ ಪಿತೂರಿಯೆಂದ ಪ್ರತಿಪಕ್ಷಗಳು
ಪ್ರಕರಣ ಬೆಳಕಿಗೆ ಬಂದಂದಿಂದಲೇ ಯುಡಿಎಫ್ ಹಾಗೂ ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ಪಿಣರಾಯಿ ವಿಜಯಣ್ ಹಗರಣದಲ್ಲಿ ನೇರ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಜಲೀಲ್ ಕಾಲ್ ರೆಕಾರ್ಡ್ ಹೊರಬಂದ ಮೇಲೆ ಪ್ರತಿಪಕ್ಷಗಳ ಪ್ರತಿಭಟನೆ ತೀವ್ರವಾಗಿತ್ತು. ಜಲೀಲ್ ಅಧಿಕಾರದಲ್ಲೇ ಮುಂದುವರೆದರೆ ತನ್ನ ಪ್ರಭಾವ ಬಳಸಿ ತನಿಖೆಯ ಹಾದಿ ತಪ್ಪಿಸಬಲ್ಲರು ಹಾಗಾಗಿ ಅವರು ರಾಜಿನಾಮೆ ನೀಡಬೇಕೆಂದು ಗುರುವಾರ ಯುವ ಕಾಂಗ್ರೆಸ್ ಪ್ರತಿಭಟನೆ ಸಲ್ಲಿಸಿತ್ತು.
ಪ್ರತಿಭಟನಾಕಾರರನ್ನು ನಿಯಂತ್ರಿಸುವ ಭರದಲ್ಲಿ ಲಾಠಿ ಚಾರ್ಜ್ಗಿಳಿದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಗಂಭೀರ ಗಾಯಗಳುಂಟಾಗುವಂತೆ ಹಲ್ಲೆ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕ ಬಲರಾಮ್ ಸೇರಿದಂತೆ ಹಲವು ಕಾಂಗ್ರೆಸ್ ಕಾರ್ಯಕರ್ತರಿಗೆ ಗುರುತರ ಗಾಯಗಳಾಗಿದ್ದು, ನೆತ್ತರು ಸೋರುವಷ್ಟು ಗಂಭೀರ ಗಾಯಗಳಾಗಿವೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಪ್ರಾಥಮಿಕ ವರದಿ ತಿಳಿಸಿವೆ.
ಪ್ರತಿಭಟನಾಕಾರರ ಮೇಲೆ ನಡೆದ ದಾಳಿಯನ್ನು ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಖಂಡಿಸಿದ್ದಾರೆ. ಕೇರಳದ ಎಲ್ಡಿಎಫ್ ಸರ್ಕಾರದ ಚಿನ್ನ ಅಕ್ರಮ ಸಾಗಾಣಿಕೆ ಹಗರಣದ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲೆ ಹಲ್ಲೆ ನಡೆಸಿರುವುದು ಅಸಹ್ಯಕರ ಹಾಗೂ ಹೇಡಿತನದ ಪರಮಾವಧಿ ಎಂದು ಶ್ರೀನಿವಾಸ್ ಹೇಳಿದ್ದಾರೆ. ಶಾಸಕ ವಿಟಿ ಬಲರಾಮ್ ಹಾಗೂ ಕಾರ್ಯಕರ್ತರು ಪಿಣರಾಯಿ ವಿಜಯನ್ ಅವರ ಗೂಂಡಾಗಳಿಂದ ಗಂಭೀರ ಗಾಯಗೊಂಡಿದ್ದಾರೆ. ಸರ್ಕಾರಿ ಪ್ರಾಯೋಜಿತ ಪೊಲೀಸ್ ದಾಳಿಗಳಿಗೆ ನಾವು ತಲೆಬಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.