ದೆಹಲಿ: ಸುಖದೇವ್ ವಿಹಾರ್ ಫ್ಲೈ ಓವರ್ ಬಳಿ ನಡೆದುಕೊಂಡು ಹೋಗುತ್ತಿದ್ದ ವಲಸೆ ಕಾರ್ಮಿಕರನ್ನು ಭೇಟಿ ಮಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ವಲಸೆ ಕಾರ್ಮಿಕರು ಹರ್ಯಾಣದಿಂದ ತಮ್ಮ ತವರು ಊರುಗಳಿಗೆ ತೆರಳುತ್ತಿದ್ದರು. ರಾಹುಲ್ ಗಾಂಧಿಯೊಂದಿಗಿನ ಮಾತುಕತೆಯ ಬಳಿಕ ವಲಸೆ ಕಾರ್ಮಿಕರಿಗೆ ತಮ್ಮೂರುಗಳಿಗೆ ತೆರಳಲು ಕಾಂಗ್ರೆಸ್ ಕಾರ್ಯಕರ್ತರು ವಾಹನಗಳ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ನಾವು ಹರಿಯಾಣದಿಂದ ತಮ್ಮೂರು ಝಾನ್ಸಿಗೆ ಹೋಗಬೇಕೆಂದು ಮೋನು ಎಂಬ ವಲಸೆ ಕಾರ್ಮಿಕ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅರ್ಧ ಗಂಟೆಯ ಹಿಂದೆ ನಮ್ಮನ್ನು ಭೇಟಿ ಮಾಡಿದ್ದಾರೆ. ಬಳಿಕ ನಮ್ಮ ಮನೆಗಳಿಗೆ ನಮ್ಮನ್ನು ತಲುಪಿಸಲು ವಾಹನಗಳ ವ್ಯವಸ್ಥೆ ಮಾಡಿಕೊಟ್ಟ ಅವರು, ನಮಗೆ ಅಗತ್ಯವಾದ ಆಹಾರ, ನೀರು ಮತ್ತು ಮಾಸ್ಕ್ಗಳನ್ನು ಒದಗಿಸಿದ್ದಾರೆಂದು ವಲಸೆ ಕಾರ್ಮಿಕ ದೇವೇಂದ್ರ ಎಂಬವರು ಹೇಳಿರುವುದಾಗಿ ಸುದ್ದಿ ಸಂಸ್ಥೆ ANI ಟ್ವೀಟ್ ಮಾಡಿದೆ.