ಬೆಂಗಳೂರು ನಗರದಲ್ಲಿ ಕರೋನಾ ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಈಗ ಸೋಂಕು ಜಾಸ್ತಿ ಆಗಿರುವ ಕಾರಣಕ್ಕೆ ಕೃಷ್ಣರಾಜ ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆಯನ್ನು 15 ದಿನಗಳ ಕಾಲ ಸೀಲ್‌ಡೌನ್ ಮಾಡಲು ಆದೇಶಿಸಲಾಗದೆ.
ಬಿಬಿಎಂಪಿ ಆಯುಕ್ತರಾದ ಅನಿಲ್ ಕುಮಾರ್ ಅವರು ಹೊರಡಿಸಿರುವ ಆದೇಶದಂತೆ, ವ್ಯಾಪಾರ ವಹಿವಾಟಿಗಾಗಿ ಅತೀ ಹೆಚ್ಚು ಜನರು ಸೇರುವ ಕಾರಣ ಸೋಂಕು ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಆ ಕಾರಣಕ್ಕಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಎರಡೂ ಮಾರುಕಟ್ಟೆಗಳನ್ನು 15 ದಿನಗಳ ಕಾಲ ಸೀಲ್‌ಡೌನ್ ಮಾಡಲು ಆದೇಶಿಸಿದ್ದಾರೆ.
ಇಂದು ಬೆಳಿಗ್ಗೆ ಸಿಎಂ ಯಡಿಯೂರಪ್ಪನವರು ಕೋವಿಡ್ ಕುರಿತು ಚರ್ಚಿಸಲು ತುರ್ತು ಸಭೆ ಕರೆದಿದ್ದರು. ಸೀಲ್‌ಡೌನ್ ಅಥವಾ ಲಾಕ್‌ಡೌನ್ ಮಾಡುವಾಗ ಅಲ್ಲಿನ ಜನರು ಕಾನೂನು ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಖಡಕ್ ಸಂದೇಶ ನೀಡಿದ್ದರು.
Also Read: ಕರೋನಾ ಸೋಂಕು: ಬೆಂಗಳೂರಿನ 5 ವಾರ್ಡ್ ಲಾಕ್‌ಡೌನ್