ಕರ್ನಾಟಕದಲ್ಲಿ ಕರೋನಾ ಸೋಂಕು ವಿಪರೀತವಾಗಿ ಹರಡಿದೆ. ಕಳೆದ ಒಂದು ದಿನದಲ್ಲಿ 4,169 ಹೊಸ ಕರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಕರ್ನಾಟಕದಲ್ಲಿ ಇದುವರೆಗೂ 51,422 ಕರೋನಾ ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ. ಕರೋನಾ ಸೋಂಕಿತರಾಗಿದ್ದ 1,263 ಮಂದಿ ಇಂದು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಒಟ್ಟು 19,729 ಮಂದಿ ಕರೋನಾ ಸೋಂಕಿತರು ಸೋಂಕಿನಿಂದ ಗುಣಮುಖರಾಗಿ ಮನೆ ಸೇರಿದ್ದಾರೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 104 ಮಂದಿ ಸೋಂಕಿತರು ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟು 1,032 ಮಂದಿಯನ್ನು ಕರೋನಾ ಸೋಂಕು ಬಲಿ ಪಡೆದುಕೊಂಡಿದೆ. ರಾಜ್ಯದಲ್ಲಿ ಪ್ರಸ್ತುತ 30,655 ಸಕ್ರಿಯ ಕರೋನಾ ಪ್ರಕರಣಗಳಿವೆ. ಅವರಲ್ಲಿ 539 ಮಂದಿಗೆತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಲಾಗುತ್ತಿದೆ.
ಬೆಂಗಳೂರು ನಗರವೊಂದರಲ್ಲೇ 2,344 ಕರೋನಾ ಸೋಂಕಿತರು ಹೊಸದಾಗಿ ಕಂಡುಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 25,288 ತಲುಪಿದೆ. ಇದುವರೆಗೂ 5,952 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕರೋನಾ ಸೋಂಕಿನಿಂದಾಗಿ ಇಂದು ನಗರವೊಂದರಲ್ಲೇ 70 ಮಂದಿ ಅಸುನೀಗಿದ್ದಾರೆ. ಇದುವರೆಗೂ 507 ಮಂದಿ ಬೆಂಗಳೂರಿನಲ್ಲಿ ಕರೋನಾ ಕಾರಣಕ್ಕೆ ಮೃತಪಟ್ಟಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 18,828 ಸಕ್ರಿಯ ಸೋಂಕಿತರ ಪ್ರಕರಣಗಳಿವೆ.
ದೇಶಾದ್ಯಂತ 32,695 ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪತ್ತೆಯಾದ ಕರೋನಾ ಪ್ರಕರಣಗಳ ಸಂಖ್ಯೆ 9,68,876. ಅವರಲ್ಲಿ 6,12,815 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದುವರೆಗೂ ಸೋಂಕಿನಿಂದಾಗಿ 24,915 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಪ್ರಸ್ತುತ 3,31,146 ಸಕ್ರಿಯ ಪ್ರಕರಣಗಳಿವೆ.