ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇ 14 ರಂದು ಹೊರಡಿಸಿದ ಪ್ರಕಟನೆಯ ಪ್ರಕಾರ ರಾಜ್ಯದಲ್ಲಿ ಧೃಡೀಕರಿಸಿದ ಕರೋನಾ ಪ್ರಕರಣಗಳ ಸಂಖ್ಯೆ 987 ತಲುಪಿದೆ. ಒಟ್ಟು 460 ಮಂದಿ ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಹೊಂದಿದ್ದಾರೆ. ಕರೋನಾ ಸೋಂಕಿನಿಂದಾಗಿ 35 ಮಂದಿ ಅಸುನೀಗಿದ್ದಾರೆ.
ಮೇ 13 ಸಂಜೆ 5:00 ರಿಂದ ಮೇ 14 ಸಂಜೆ 05:00 ರವರೆಗೆ ಹೊಸ 28 ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದೆಯೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕರೋನಾ ಆಕ್ಟಿವ್ ಇರುವ 491 ವ್ಯಕ್ತಿಗಳಲ್ಲಿ 482 ವ್ಯಕ್ತಿಗಳು ವಿವಿಧ ಆಸ್ಪತ್ರೆಗಳ ಪ್ರತ್ಯೇಕಿಸಿದ ವಾರ್ಡುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 09 ಮಂದಿಗಳ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಪತ್ತೆಯಾಗಿರುವ ಪ್ರಕರಣದಲ್ಲಿ ಬೀದರಲ್ಲೇ 7 ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರು ನಗರದಲ್ಲಿ 5, ಮಂಡ್ಯದಲ್ಲಿ 5, ಗದಗದಲ್ಲಿ 4, ದಾವಣಗೆರೆಯಲ್ಲಿ 3, ಕಲಬುರಗಿಯಲ್ಲಿ 2 ಮತ್ತು ಬೆಳಗಾವಿ ಹಾಗೂ ಬಾಗಲಕೋಟೆ ತಲಾ ಒಂದೊಂದು ಪ್ರಕರಣಗಳು ದಾಖಲೆಯಾಗಿದೆ.
