ಕಳೆದ 24 ಗಂಟೆಗಳಲ್ಲಿ 1502 ಹೊಸ ಕರೋನಾ ಪ್ರಕರಣಳು ಪತ್ತೆಯಾಗಿದ್ದು ರಾಜ್ಯಾದ್ಯಂತ ಕಂಡುಬಂದಿರುವ ಒಟ್ಟು ಕರೋನಾ ಸೋಂಕಿತರ ಸಂಖ್ಯೆ 18,016 ತಲುಪಿದೆ. ಇಂದು ಸೋಂಕಿನಿಂದ 271 ಮಂದಿ ಚೇತರಿಸಿಕೊಂಡಿದ್ದು ಒಟ್ಟು 8334 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ಸದ್ಯ 9406 ಸಕ್ರಿಯ ಪ್ರಕರಣಗಳಿರುವ ರಾಜ್ಯದಲ್ಲಿ ಇಂದು 19 ಮಂದಿ ಮೃತಪಟ್ಟಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ 272 ತಲುಪಿದೆ. ರಾಜ್ಯದಲ್ಲಿ 161 ಮಂದಿಯನ್ನು ಕೋವಿಡ್ ಕಾರಣಕ್ಕೆ ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ.
ಬೆಂಗಳೂರು ನಗರವೊಂದರಲ್ಲೇ ಬರೋಬ್ಬರಿ 889 ಪ್ರಕರಣಗಳು ದಾಖಲಾಗಿದ್ದು ಒಟ್ಟು 6,179 ಸೋಂಕಿತರು ನಗರದಲ್ಲಿ ಪತ್ತೆಯಾಗಿದ್ದಾರೆ. ರಾಜ್ಯ ರಾಜಧಾನಿ ಒಂದರಲ್ಲೇ ಬರೋಬ್ಬರಿ 100 ಮಂದಿ ಮೃತರಾಗಿದ್ದು, ರಾಜಧಾನಿಯಲ್ಲಿ ಒಟ್ಟು 5505 ಸಕ್ರಿಯ ಪ್ರಕರಣಗಳಿವೆ.