ಇಂದಿನಿಂದ ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕಗಳು ಆರಂಭವಾಗಿದ್ದು, ಎಸ್ಎಸ್ಎಲ್ಸಿ ಮತ್ತು ದ್ವೀತೀಯ ಪಿಯುಸಿ ತರಗತಿಗಳು ಪುನರಾಂಭವಾಗಿದೆ ರೂಪಾಂತರಿ ಕರೋನಾ ಸೋಂಕಿನ ಆತಂಕದ ಮಧ್ಯೆಯೆ ಮಕ್ಕಳು ಶಾಲೆಗೆ ಹಾಜರಾಗುತ್ತಿದ್ದಾರೆ.
ರಾಜ್ಯದಲ್ಲಿ 16,850 ಪ್ರೌಢ ಶಾಲೆಯಿದ್ದು, ಇಂದಿನಿಂದ ಎಸ್ಎಸ್ಎಲ್ಸಿ ತರಗತಿಗಳು ಆರಂಭವಾಗಿವೆ 5,775 ಸರ್ಕಾರಿ ಶಾಲೆಗಳು, 11,075 ಖಾಸಗಿ ಶಾಲೆಗಳು ತರಗತಿ ಆರಂಭಿಸಿವೆ. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳ ಆರಂಭದ ನಡುವೆಯೆ 6 ಮತ್ತು 9 ನೇ ತರಗತಿ ಮಕ್ಕಳಿಗೆ ವಿದ್ಯಾಗಮನ ತರಗತಿ ಮುಂದುವರೆಯಲಿದೆ. ರೂಪಾಂತರಿ ಕರೋನಾ ಸೋಂಕು ಹಿನ್ನಲೆ ಮಕ್ಕಳ ಆರೋಗ್ಯ ದೃಷ್ಟಿಯಿಂದ ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಶಾಲಾ ಆವರಣ, ಕೊಠಡಿ, ಶೌಚಾಲಯಗಳಿಗೆ ಸ್ಯಾನಿಟೈಝರ್ ಬಳಸಿ ಶುಚಿಗೊಳಿಸುವುದು ಕಡ್ಡಾಯ, ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ, ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಒಂದು ಕೊಠಡಿಯಲ್ಲಿ ಇಷ್ಟೇ ಸೀಮಿತ ಮಕ್ಕಳಿರಬೇಕೆಂದು ಸೂಚಿಸಲಾಗಿದೆ.
ರಾಜ್ಯದ ಸಿಎಂ ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯ ತಿಳಿಸುವುದರ ಜೊತೆಗೆ ಮಕ್ಕಳ ಶೈಕ್ಷಣಿಕ ಪ್ರಗತಿಯ ಹಿತದೃಷ್ಟಿಯಿಂದ ಇಂದಿನಿಂದ 10 ಮತ್ತು 12ನೇ ತರಗತಿಗಳು ತರಗತಿಗಳು ಆರಂಭವಾಗಿದೆ. ಇನ್ನು 6 ರಿಂದ 9ನೇ ತರಗತಿಗಳಿಗೆ ವಿದ್ಯಾಗಮ ಪುನರಾರಂಭಗೊಳ್ಳಲಿದೆ. ಮಕ್ಕಳ ಸುರಕ್ಷತೆಗೆ ಸರ್ಕಾರದಿಂದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಡ್ಡಾಯ ಮಾಸ್ಕ್ ಧರಿಸಿ, ಭೌತಿಕ ಅಂತರ, ಸ್ವಚ್ಛತೆ ಪಾಲಿಸಿ ಸರ್ಕಾರದೊಂದಿಗೆ ಸಹಕರಿಸಬೇಕೆಂದು ಪೋಷಕರಲ್ಲಿ ವಿನಂತಿಸಿಕೊಂಡಿದ್ದಾರೆ.
ನಮ್ಮ ಮಕ್ಕಳು ಮತ್ತೆ ಶಾಲೆಗಳ ಕಡೆ ಸಂಭ್ರಮದಿಂದ ಹೆಜ್ಜೆ ಇಡುತ್ತಿದ್ದಾರೆ. ಮಕ್ಕಳ ಶಿಕ್ಷಣ ಅಬಾಧಿತವಾಗಿ ಇರಲಿ. ಎಲ್ಲರೂ ಆರೋಗ್ಯವಂತರಾಗಿ, ಗುಣವಂತರಾಗಿ ಬೆಳೆಯಲಿ. ಅದೇ ರೀತಿ ನಮ್ಮ ಎಲ್ಲ ಶಿಕ್ಷಕರೂ ಆರೋಗ್ಯವಂತರಾಗಿ, ಚೈತನ್ಯದಿಂದ ಕೂಡಿ ನಮ್ಮ ಮಕ್ಕಳಿಗೆ ಸಂಭ್ರಮದಿಂದ ಸಂತಸದಿಂದ ಪಾಠ ಹಾಗೂ ಉತ್ತಮ ನಡತೆ ಹೇಳಿಕೊಡಲಿ. ಶಾಲೆಗಳ ಆವರಣ ಮತ್ತೊಮ್ಮೆ ಮಕ್ಕಳ ಕಲರವದಿಂದ ಕೂಡಿರಲಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ರವಾನಿಸಿದ್ದಾರೆ.