ಒಂದು ರಾಜ್ಯವನ್ನು ರಾಜನೊಬ್ಬ ಪ್ರಬಲವಾಗಿ ಆಳ್ವಿಕೆ ನಡೆಸಬೇಕು ಎಂದರೆ ಆತನ ಸೇನೆ ಬಲಿಷ್ಠವಾಗಿ ಇರಬೇಕು. ಅದೇ ರಾಜನನ್ನು ಕೊಂದು ಆಡಳಿತಕ್ಕೆ ಬರಬೇಕು ಎಂದು ಅವಣಿಸುವ ವಿರೋಧಿ ಪಾಳಯ ಕೂಡ ರಾಜನ ವಿರುದ್ಧ ಅಂದರೆ ಆತನ ದುರಾಡಳಿತದ ವಿರುದ್ಧ ಜನ ದಂಗೆ ಏಳುವಂತೆ ಮಾಡಬೇಕು. ಆ ಬಳಿಕ ರಾಜ್ಯಾದ್ಯಂತ ಜನಾಂದೋಲನ ರಾಜನ ವಿರುದ್ಧ ಇದ್ದಾಗ ಯುದ್ಧ ಘೋಷಣೆ ಮಾಡಿ, ರಾಜನನ್ನು ಕೊಂದು ತಾನು ರಾಜನಾಗಿ ಪಟ್ಟಕ್ಕೇರಬೇಕು. ಇದು ಭಾರತದ ಪೂರ್ವದಲ್ಲಿ ಇದ್ದಂತಹ ಪದ್ಧತಿ. ಇದೀಗ ರಾಜಕಾರಣವೂ ರಾಜರ ಆಳ್ವಿಯಲ್ಲಿ ಇದ್ದಂತಹ ಆಚರಣೆಗಳೇ ಇವೆ. ಆದರೆ ಅಲ್ಪ ಸ್ವಲ್ಪ ಬದಲಾವಣೆಗಳು ಆಗಿವೆ. ಅದೇ ರೀತಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿ.ಎಸ್ ಯಡಿಯೂರಪ್ಪ ಅಂದರೆ ಬಿಜೆಪಿಯಿಂದ ಅಧಿಕಾರ ಕಸಿದು ಕೊಳ್ಳಲು ಕಾಂಗ್ರೆಸ್‌ನ ಹೊಸ ದಂಡ ನಾಯಕ ಡಿ.ಕೆ ಶಿವಕುಮಾರ್ ಹವಣಿಸುತ್ತಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಆಡಳಿತದಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನು ಬಯಲಿಗೆ ಎಳೆಯಲು ಕಾಂಗ್ರೆಸ್ ಸಜ್ಜಾಗುತ್ತಿದೆ. ರಾಜ್ಯ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್ ಮುಂದಾಗಿದೆ. ಸ್ಪೀಕ್ ಆಫ್ ಕರ್ನಾಟಕ (ಮಾತನಾಡು ಕರ್ನಾಟಕ) ಹೆಸರಿನಲ್ಲಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಕಾಂಗ್ರೆಸ್ ತಯಾರಿ ಮಾಡಿಕೊಂಡಿದೆ. ಸದ್ಯಕ್ಕೆ ರಾಜ್ಯದ 29 ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಿ, ಸರ್ಕಾರದ ವೈಫಲ್ಯ ಮತ್ತು ಭ್ರಷ್ಟಾಚಾರ ವಿಚಾರಗಳನ್ನು ಜನರಿಗೆ ತಿಳಿಸಲಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕರ್ಮಭೂಮಿ ಶಿವಮೊಗ್ಗ ಹಾಗೂ ಜನ್ಮಭೂಮಿ ಸಕ್ಕರೆ ನಾಡು ಮಂಡ್ಯದಲ್ಲಿ ಸ್ವತಃ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಲಿದ್ದಾರೆ. ರಾಜ್ಯದ ಇತರೆ ಜಿಲ್ಲಾಕೇಂದ್ರಗಳಲ್ಲಿ ಕಾಂಗ್ರೆಸ್‌ನ ಅಧ್ಯಕ್ಷ ಡಿ.ಕೆ ಶಿವಕುಮಾರ್, ರಾಜಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಉಳಿದ ನಾಯಕರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಯಾವುದೇ ಯಾಕರಣಕ್ಕೂ ಈ ಆಪರೇಷನ್ ಫೇಲ್ ಆಗಂದತೆ ಯೋಜನೆ ರೂಪಿಸಿರುವ ಡಿ.ಕೆ ಶಿವಕುಮಾರ್. ಪಕ್ಷದ ಬೇರೆ ಬೇರೆ ನಾಯಕರು ಸರ್ಕಾರದ ವಿರುದ್ಧ ಸುದ್ದಿಗೋಷ್ಠಿ ನಡೆಸಲಿದ್ದಾರೆ
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರದ ವಿರುದ್ಧ ಈ ಹೋರಾಟಕ್ಕೆ ಕಾಂಗ್ರೆಸ್‌ನ ಪ್ರಮುಖ ನಾಯಕರನ್ನು ಕರೆತರಲಾಗ್ತಿದೆ. ಪ್ರಮುಖ ನಾಯಕರಿಗೆ ಒಂದೊಂದು ಜಿಲ್ಲೆಯ ಹೊಣೆಗಾರಿಕೆ ನೀಡುತ್ತಿದ್ದು, ಕಲಬುರಗಿ ಹಾಗೂ ದಕ್ಷಿಣ ಕನ್ನಡದಲ್ಲಿ ಡಿ.ಕೆ ಶಿವಕುಮಾರ್, ಕೋಲಾರದಲ್ಲಿ ಮಾಜಿ ಅಧ್ಯಕ್ಷ ಡಾ ಜಿ. ಪರಮೇಶ್ವರ್, ಮೈಸೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ, ಬೆಳಗಾವಿ – ಮಾಜಿ ಸ್ಪೀಕರ್ ರಮೇಶ್ ಕುಮಾರ್, ಚಿಕ್ಕಮಗಳೂರು- ಕೆ.ಜೆ.ಜಾರ್ಜ್, ಬಳ್ಳಾರಿಯಲ್ಲಿ ರಾಮಲಿಂಗಾರೆಡ್ಡಿ, ಹಾವೇರಿಯಲ್ಲಿ ಎಂ.ಬಿ.ಪಾಟೀಲ್, ಹಾಸನ ಡಿ.ಕೆ.ಸುರೇಶ್, ಹುಬ್ಬಳ್ಳಿ – ಧಾರವಾಡ ಆರ್.ವಿ. ದೇಶಪಾಂಡೆ, ದಾವಣಗೆರೆಯಲ್ಲಿ ಕೆ.ಹೆಚ್.ಮುನಿಯಪ್ಪ, ವಿಜಯಪುರ – ಹೆಚ್.ಕೆ.ಪಾಟೀಲ್, ಬೀದರ್ – ಶರಣ್ ಪ್ರಕಾಶ್ ಪಾಟೀಲ್, ತುಮಕೂರು – ವೀರಪ್ಪ ಮೊಯ್ಲಿ, ಉಡುಪಿ – ದಿನೇಶ್ ಗುಂಡೂರಾವ್, ಚಿಕ್ಕಬಳ್ಳಾಪುರ – ಟಿ.ಬಿ.ಜಯಚಂದ್ರ ನೇಮಕ ಮಾಡಲಾಗಿದೆ.
ಡಿ.ಕೆ ಶಿವಕುಮಾರ್ ಮಾಸ್ಟರ್ ಪ್ಲ್ಯಾನ್!
ಇದೊಂದು ಸಾಮಾನ್ಯ ಕಾರ್ಯಕ್ರಮ. ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಈಗಾಗಲೇ ಕಾಂಗ್ರೆಸ್ ಬಹಿರಂಗ ಸಮರ ಸಾರಿದೆ. ಇನ್ನೇನು ಕೆಲವೇ ದಿನಗಳಲ್ಲಿ ತಾಲೂಕು ಕೇಂದ್ರಗಳಲ್ಲಿ ʻಲೆಕ್ಕ ಕೊಡಿʼ ಎನ್ನುವ ಕಾರ್ಯಕ್ರಮ ರೂಪಿಸುವ ಸಿದ್ಧತೆಯಲ್ಲಿದೆ. ಆದರೆ ಈ ಹೋರಾಡಕ್ಕೂ ಮುನ್ನವೇ ಜಿಲ್ಲಾ ಕೇಂದ್ರಗಳಲ್ಲಿ ಸುದ್ದಿಗೋಷ್ಠಿ ಕರೆದು ಸರ್ಕಾರದ ಬಣ್ಣ ಬಯಲು ಮಾಡಲು ನಿರ್ಧಾರ ಮಾಡಲಾಗಿದೆ. ಇದರಲ್ಲಿ ಡಿ.ಕೆ ಶಿವಕುಮಾರ್ ರಹಸ್ಯ ಯೋಜನೆ ರೂಪಿಸಿರುವುದು ಸತ್ಯ. ಮೊದಲನೆಯದು ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಮಾಡಿರುವ ಭ್ರಷ್ಟಾಚಾರ ನೋಡಿ ಎಂದು ಜನರ ಮುಂದೆ ಸರ್ಕಾರದ ಮಾನವನ್ನು ಜನರ ಎದುರು ಹರಾಜು ಹಾಕುವುದು. ಎರಡನೆಯದು ಡಿ.ಕೆ ಶಿವಕುಮಾರ್‌ಅಧ್ಯಕ್ಷನಾದ ಬಳಿಕ ಕೇವಲ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮಾತ್ರವೇ ಕಾಣಿಸಿಕೊಳ್ಳುತ್ತಿದ್ದಾರೆ, ಕೌರವರ ರೀತಿ ಎಂದಿದ್ದ ಬಿಜೆಪಿಗೆ ತಿರುಗೇಟು ನೀಡುವುದು. ಅದರ ಜೊತೆ ಎಲ್ಲಾ ಕಾಂಗ್ರೆಸ್ ನಾಯಕರು ಪಕ್ಷದ ಕೆಲಸಗಳಲ್ಲಿ ಸಕ್ರೀಯರಾಗುವಂತೆ ಮಾಡುವುದು. ಕಾಂಗ್ರೆಸ್ ಪಕ್ಷದಲ್ಲಿ ನಾನು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುತ್ತೇನೆ ಎಂದಿದ್ದ ಡಿ.ಕೆ ಶಿವಕುಮಾರ್ ಇದೀಗ ಎಲ್ಲಾ ನಾಯಕರಿಗೂ ಜವಾಬ್ದಾರಿ ಕೊಡುವ ಮೂಲಕ ಮಾತು ಉಳಿಸಿಕೊಂಡಿದ್ದಾರೆ. ಇನ್ನೂ ಎಲ್ಲರನ್ನೂ ಹತ್ತಿರಕ್ಕೆ ಸೆಳೆಯುವ ಮೂಲಕ ಪ್ರಭಾವಿ ಅಧ್ಯಕ್ಷನಾಗುವ ಮುಂದಾಲೋಚನೆಯೂ ಇದರಲ್ಲಿ ಅಡಗಿದೆ.
ಸಕ್ಸಸ್ ಆಗುತ್ತಾ ಜಾತಿ ಲೆಕ್ಕಚಾರ.?
ಕಾಂಗ್ರೆಸ್ ಕೆಲವೊಂದು ಜಿಲ್ಲೆಗಳಲ್ಲಿ ಜಾತಿ ಆಧಾರದಲ್ಲಿ ನಾಯಕರನ್ನು ನೇಮಕ ಮಾಡಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಆದರೆ ಈ ಜಾತಿ ಲೆಕ್ಕಾಚಾರ ಕೈ ಹಿಡಿಯುತ್ತಾ ಎನ್ನುವ ಅನುಮಾನಗಳು ಕಾಡುತ್ತಿವೆ. ಯಾಕೆಂದರೆ, ಬೆಂಗಳೂರಿನ ಓರ್ವ ನಾಯಕ ಬೀದರ್‌ನಲ್ಲಿ ಹೋಗಿ ಸುದ್ದಿಗೋಷ್ಠಿ ನಡೆಸುವುದಾದರೆ ಮೂರ್ನಾಲ್ಕು ಜನರು ಕಾರ್ಯಕರ್ತರು ಬರುವುದಿಲ್ಲ. ಕಾರಣ ಆ ನಾಯಕ ಅಲ್ಲಿನ ಜನರಿಗೆ ಚಿರಪರಿಚಿತ ಆಗಿರುವುದಿಲ್ಲ. ಅದೇ ರೀತಿ ಬೀದರ್‌ನ ಓರ್ವ ನಾಯಕ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದರೆ ಜನರ ಅಭಾವ ಗ್ಯಾರಂಟಿ. ಈಗಿನ ನೇಮಕ ಅದೇ ರೀತಿ ಕಾರ್ಯಕರ್ತರ ಕೊರತೆಗೆ ಕಾರಣವಾಗುತ್ತಾ ಎನ್ನುವ ಅನುಮಾನ ಮೂಡಿಸಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಸೂಕ್ತ ಹೆಜ್ಜೆಯಿಟ್ಟು, ಸರ್ಕಾರದ ಭ್ರಷ್ಟಚಾರ ಬಯಲು ಮಾಡಬೇಕಿದೆ. ಸಾರ್ವಜನಿಕರ ತೆರಿಗೆ ಹಣ ಯಾರದೋ ಪಾಲಾಗುವುದನ್ನು ತಪ್ಪಿಸಬೇಕಿದೆ.