ದೇಶಾದ್ಯಂತ ನಡೆಯುತ್ತಿರುವ ರೈತರ ಹೋರಾಟ ಈಗ ತೀವ್ರ ಸ್ವರೂಪ ಪಡೆಯುತ್ತಿದ್ದಂತೇ, ಕನ್ನಡ ಸಿನಿಮಾ ನಟ ಚೇತನ್ ಅವರು ಇತರ ನಟರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣಾ ಪ್ರಚಾರಕ್ಕೆ ವೇಗವಾಗಿ ಧುಮುಕುವ ನಟರು ಯಾಕೆ ಈಗ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
“ಚುನಾವಣಾ ಪ್ರಚಾರಾದ ಬ್ರ್ಯಾಂಡ್ ಅಂಬಾಸಡರ್ಗಳಾಗಿ ವೇಗವಾಗಿ ನೆಗೆಯುವ ಕನ್ನ ಚಲನಚಿತ್ರ ನಟರು ರೈತರಿಗೆ ಬೆಂಬಲವಾಗಿ ಒಂದೂ ಮಾತನ್ನೂ ಹೇಳಿಲ್ಲಾ,” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದರೊಂದಿಗೆ, ಜನರ ಕುರಿತು ನಟರಿಗಿರುವ ಕಾಳಜಿಯನ್ನೂ ಅವರು ಪ್ರಶ್ನಿಸಿದ್ದಾರೆ. “ಶ್ರೀಮಂತ ಮತ್ತು ಗಣ್ಯ ಸ್ನೇಹಿತರನ್ನು ಪ್ರಚೋದಿಸಲು ಮಾತ್ರ ನಾವು ನಟರು ಆಸಕ್ತಿ ಹೊಂದಿದ್ದೇವೆಯೇ,” ಎಂದು ಪ್ರಶ್ನಿಸಿದ್ದಾರೆ.
ಕೃಷಿ ಮಸೂದೆಗಳಿಗೆ ತಂದಿರುವ ತಿದ್ದುಪಡಿಯನ್ನು ವಿರೋಧಿಸಿ ರೈತರು ಆರಂಭಿಸಿದ್ದ ʼದಿಲ್ಲಿ ಚಲೋʼ ಯಾತ್ರೆ ಸೋಮವಾರ 12ನೇ ದಿನಕ್ಕೆ ಕಾಲಿಟ್ಟಿದೆ. ರೈತರನ್ನು ದೆಹಲಿ ಪ್ರವೇಶಿಸಲು ಅವಕಾಶ ನೀಡದ ಕಾರಣಕ್ಕೆ ಕೊರೆಯುವ ಚಳಿಯಲ್ಲಿ ರೈತರು ʼಸಿಂಗ್ದು ಗಡಿʼಯ ಬಳಿ ಬೀಡು ಬಿಟ್ಟಿದ್ದಾರೆ.
ಡಿಸೆಂಬರ್ 8ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ರೈತರು ಕರೆ ನೀಡಿದ್ದು, ಇದಕ್ಕೆ ವ್ಯಾಪಕ ಬೆಂಬಲ ಲಭಿಸಿದೆ. ಡಿಸೆಂಬರ್ 9ರಂದು ರೈತರೊಂದಿಗೆ ಕೇಂದ್ರ ಸರ್ಕಾರು ಆರನೇ ಸುತ್ತಿನ ಮಾತುಕತೆ ನಡೆಸಲಾಗುವುದು.