• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, October 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಐದು ಸ್ಮಾರಕಗಳ ಸಂರಕ್ಷಣೆಗೆ ಸಂಕಲ್ಪ

by
February 3, 2020
in ದೇಶ
0
ಐದು ಸ್ಮಾರಕಗಳ ಸಂರಕ್ಷಣೆಗೆ ಸಂಕಲ್ಪ
Share on WhatsAppShare on FacebookShare on Telegram

2020-21ರ ಆಯವ್ಯಯಗಳನ್ನು ಸಂಸತ್ತಿನ ಮುಂದಿಡುವ ಸಂದರ್ಭದಲ್ಲಿ ದೇಶದ ಕಾಲಾತೀತ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಐದು ಸ್ಮಾರಕಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಯ ವಿಚಾರವೊಂದನ್ನು ಪ್ರಸ್ತಾಪಿಸಲಾಗಿದೆ.

ADVERTISEMENT

ಸಹಸ್ರಮಾನಗಳು ಹಾಗೂ ಯುಗಗಳಷ್ಟು ಹಳೆಯ ಇತಿಹಾಸವನ್ನು ಕಂಡ ಭರತವರ್ಷವು, “ಮಾನವ ಜನಾಂಗದ ತೊಟ್ಟಿಲಾಗಿದ್ದು, ಭಾಷೆಯ ಉಗಮಸ್ಥಾನ, ಇತಿಹಾಸ ತಾಯಿ, ದಂತಕಥೆಗಳ ಅಜ್ಜಿ, ಹಾಗೂ ಸಂಪ್ರದಾಯಗಳ ಮುತ್ತಜ್ಜಿ. ಮಾನವನ ಇತಿಹಾಸದ ಕುರಿತ ಅತ್ಯಂತ ಮೌಲ್ಯಯುತವಾದ ನಿರ್ದೇಶನಾ ಸಂಪನ್ಮೂಲಗಳೆಲ್ಲವೂ ಭಾರತದಲ್ಲಿಯೇ ಸೇರಿಕೊಂಡಿವೆ,” ಎಂದು ಶ್ರೇಷ್ಠ ಬರಹಗಾರ, ಉದ್ಯಮಿ ಹಾಗೂ ಪ್ರಾಧ್ಯಾಪಕ ಮಾರ್ಕ್ ಟ್ವೈನ್ ಹೇಳಿದ್ದ ಮಾತುಗಳು ಎಂದೆಂದಿಗೂ ಪ್ರಸ್ತುತ.

ಯುಗಯುಗಳ ಇತಿಹಾಸದ ಕುರುಹುಗಳಾಗಿ ಉಳಿದುಕೊಂಡಿರುವ ಅನೇಕ ಸ್ಮಾರಕಗಳು ಭಾರತೀಯ ನಾಗರೀಕತೆ ನಡೆದು ಬಂದ ಹಾದಿಯನ್ನು ಥಟ್ಟೆಂದು ಹಾಗೇ ಕಣ್ಣ ಮುಂದೆ ತರಬಲ್ಲಷ್ಟು ಪ್ರಖರವಾದ ವಿಚಾರಗಳನ್ನು ತಮ್ಮಲ್ಲಿ ಹುದುಗಿಸಿಟ್ಟುಕೊಂಡಿವೆ.

ದ್ವಾಪರಯುಗದ ಮಹಾಭಾರತದಿಂದ ಹಿಡಿದು, ಮಣ್ಣಿನ ಮಡಿಕೆಗಳ ಬಳಕೆಯ ಆರಂಭಿಕ ದಿನಗಳು, ಹರಪ್ಪ-ಮೊಹೆಂಜೋದಾರೋ ನಾಗರೀಕತೆಯ ಸಂದರ್ಭದ ನಗರ ಯೋಜನೆಗಳ ಕುರಿತಂತೆ ಬೆಳಕು ಚೆಲ್ಲುವಂತಹ 5 ಐತಿಹಾಸಿಕ & ಪೌರಾಣಿಕ ಕ್ಷೇತ್ರಗಳ ಪುನರುಜ್ಜೀವನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

ಭಾರತೀಯ ಪ್ರವಾಸೋದ್ಯಮದಲ್ಲಿರುವ ಅಗಾಧವಾದ ಸಾಧ್ಯತೆಗಳನ್ನು ಸಾಕಾರಗೊಳಿಸಲು ಇಂಥ ಸಾಕಷ್ಟು ಕ್ರಮಗಳ ಅಗತ್ಯವಿದೆ.

ಅಂದ ಹಾಗೆ, ಇವೇ ಆ ಐದು ತಾಣಗಳು….

ಹಸ್ತಿನಾಪುರ

ಉತ್ತರ ಪ್ರದೇಶದ ಮೀರತ್‌ ಬಳಿ ಇರುವ ಹಸ್ತಿನಾಪುರದ ಇತಿಹಾಸ ಯುಗಗಳಷ್ಟು ಹಳೆಯದು. ಮಹಾಭಾರತದ ಪಾಂಡವರು ಹಾಗೂ ಕೌರವರ ರಾಜಧಾನಿಯಾಗಿದ್ದ ಈ ಊರಿನಲ್ಲಿ ದ್ವಾಪರಯುಗದ ಕುರುಹುಗಳನ್ನು ಈಗಲೂ ಕಾಣಬಹುದಾಗಿದೆ. ಹಸ್ತಿನಾಪುರವು ಸಾಮ್ರಾಟ ಭರತನ ರಾಜಧಾನಿಯೂ ಆಗಿತ್ತು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಜೈನ ಭಕ್ತರಿಗೂ ಪವಿತ್ರ ಕ್ಷೇತ್ರವಾದ ಹಸ್ತಿನಾಪುರ, ದೇಶದ ಗತಕಾಲದ ದಿನಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸಬಲ್ಲ ಜಾಗಗಳಲ್ಲಿ ಒಂದು.

ರಾಖಿಗರ್ಹಿ

ಹರಿಯಾಣಾದ ಹಿಸಾರ್‌ನಲ್ಲಿರುವ ರಾಖಿಗರ್ಹಿ ಸಿಂಧೂ ನಾಗರಿಕತೆಗಿಂತ ಹಳೆಯದಾಗಿದ್ದು, ಕ್ರಿಸ್ತ ಪೂರ್ವ 6500ದ ಕಾಲಕ್ಕೆ ಸೇರಿದೆ. ಅಲ್ಲದೇ ಸಿಂಧೂ ಕಣಿವೆ ನಾಗರಿಕತೆಯ ಪ್ರಬುದ್ಧ ಘಟ್ಟದ ಭಾಗವಾಗಿಯೂ (ಕ್ರಿ.ಪೂ 2600-1900) ಇರುವ ಈ ಜಾಗವನ್ನು ದೇಶದ ಅತ್ಯಂತ ಸೂಕ್ಷ್ಮ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ.

ಶಿವಸಾಗರ, ಅಸ್ಸಾಂ

ಶಿವನ ಸಾಗರ ಎಂಬ ಅರ್ಥದ ಈ ಊರು ಅಸ್ಸಾಂ ರಾಜ್ಯದಲ್ಲಿದೆ. 1699-1788ರ ನಡುವೆ ಅಹೋಮ್‌ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಶಿವಸಾಗರ್‌‌, ದೇಹಿಂಗ್ ಮಳೆಕಾಡುಗಳ ನಡುವೆ ಇರುವ ನಗರವಾಗಿದ್ದು, ’ಪೂರ್ವದ ಅಮೇಝಾನ್‌’ ಎಂದು ಕರೆಯಲ್ಪಡುತ್ತಿದೆ.

ಆದಿಚನಲ್ಲೂರು

ತಮಿಳುನಾಡಿದ ತೂತ್ತುಕುಡಿ ಜಿಲ್ಲೆಯಲ್ಲಿರುವ ಆದಿಚನಲ್ಲೂರು, ಪ್ರಾಚ್ಯವಸ್ತು ಸ್ಮಾರಕವಾಗಿದೆ. ಇಂದಿನ ದಿನಮಾದಲ್ಲೂ ಸಹ ಸಿಗಲಾರದಷ್ಟು ಉತ್ಕೃಷ್ಟ ಗುಣಮಟ್ಟ ಮಡಿಕೆಗಳು, ಕಬಿಣದ ಅಸ್ತ್ರಗಳು, ಮಾನವರ ಅಸ್ಥಿಯನ್ನು ಹೊಂದಿದ್ದ ಜೇಡಿಮಣ್ಣಿನ ಕುಡಿಕೆಗಳು ಇಲ್ಲಿ ಕಂಡುಬಂದಿದ್ದು, ಇವೆಲ್ಲಾ ಕನಿಷ್ಠ 38,000 ವರ್ಷಗಳಷ್ಟು ಹಳೆಯದಾಗಿವೆ ಎನ್ನಲಾಗಿದೆ.

ಧೋಲವಿರಾ

ಗುಜರಾತ್‌ನ ಕಚ್ಛ್‌ ಜಿಲ್ಲೆಯ ಧೊಲವಿರಾ ಹರಪ್ಪ ನಾಗರಿಕತೆಯ ಸ್ಮಾರಕಗಳ ಪೈಕಿ ಅತ್ಯಂತ ದೊಡ್ಡದಾದ ಎರಡು ಸ್ಮಾರಕಗಳಲ್ಲಿ ಒಂದಾಗಿದೆ. ಈ ಜಾಗವನ್ನು 1967ರಲ್ಲಿ ಪ್ರಾಚ್ಯ ವಸ್ತು ಇಲಾಖೆ ಹೊರತೆಗೆದಿದ್ದು, 1990ರಿಂದ ವ್ಯವಸ್ಥಿತವಾದ ಪ್ರಕ್ರಿಯೆಗಳ ಮೂಲಕ ಇನ್ನಷ್ಟು ಕುರುಹುಗಳನ್ನು ಆಚೆ ತರಲಾಗುತ್ತಿದೆ.

Tags: archaeological sitesconstructeddevelopedFinance MinisterIndiamuseumsNirmala Sitharamanಅಭಿವೃದ್ಧಿನಿರ್ಮಲಾ ಸೀತಾರಾಮನ್ನಿರ್ಮಾಣಪುರಾತತ್ವ ಸ್ಥಳಗಳುಭಾರತಮ್ಯೂಸಿಯಂಗಳುಹಣಕಾಸು ಸಚಿವೆ
Previous Post

ಜಮ್ಮು ಮತ್ತು ಕಾಶ್ಮೀರದಿಂದ ಜಿಯೋ ಚಾಟ್ ಹೊರಕ್ಕೆ

Next Post

ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸುವುದು ಸಂವಿಧಾನ ಉಲ್ಲಂಘನೆ ಅಲ್ಲವೇ?

Related Posts

A 30-foot-tall effigy of a cockroach will be burnt alongside Ravana at the Delhi Ramlila
Top Story

ದೆಹಲಿ ರಾಮಲೀಲಾದಲ್ಲಿ ರಾವಣನ ಜತೆ ದಹನವಾಗಲಿದೆ 30 ಅಡಿ ಎತ್ತರದ ಜಿರಳೆ ಪ್ರತಿಕೃತಿ!

by ಪ್ರತಿಧ್ವನಿ
October 16, 2026
0

ನವದೆಹಲಿ :  ದೆಹಲಿಯ (Delhi) ಪೀಥಂಪುರದಲ್ಲಿ ನಡೆಯಲಿರುವ ಈ ಬಾರಿಯ ರಾಮಲೀಲಾ ಮಹೋತ್ಸವದಲ್ಲಿ ರಾವಣ, ಕುಂಭಕರ್ಣ ಮತ್ತು ಮೇಘನಾದರ ಜತೆಗೆ 30 ಅಡಿ ಎತ್ತರದ ದೈತ್ಯ ಜಿರಳೆಯ...

Read moreDetails
Engagement between a 75-year-old man and a 30-year-old woman; the wedding bells ring right after Navaratri!

75 ವರ್ಷದ  ವೃದ್ಧನ ಜೊತೆಗೆ 30ರ ಯುವತಿ ನಿಶ್ಚಿತಾರ್ಥ,  ನವರಾತ್ರಿ ಮುಗಿದ ಬೆನ್ನಲ್ಲೇ ಕಂಕಣ ಭಾಗ್ಯ!

October 16, 2026
CJP founder Abhijit Dipke taken into police custody again

BREAKING :  ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಮತ್ತೆ ಪೊಲೀಸ್ ವಶಕ್ಕೆ  | Abhijit Dipke

October 16, 2026
Fear of a decline in Kharif crop production in 2026-27 due to the El Niño effect: Distress for farmers | El Niño

ಎಲ್ ನಿನೋ ಎಫೆಕ್ಟ್ ನಿಂದ 2026-27ರ ಮುಂಗಾರು ಬೆಳೆ ಉತ್ಪಾದನೆ ಕುಸಿತದ ಆತಂಕ : ರೈತರಿಗೆ ಸಂಕಷ್ಟ | El Nino

October 16, 2026
Wife and her lover sentenced to death by court for murdering husband

ಪತಿಯ ಹತ್ಯೆಗೈದ  ಪತ್ನಿ, ಪ್ರಿಯಕರನಿಗೆ ಕೋರ್ಟ್‌ನಿಂದ ಗಲ್ಲು ಶಿಕ್ಷೆ | Court

October 16, 2026
Next Post
ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸುವುದು ಸಂವಿಧಾನ ಉಲ್ಲಂಘನೆ ಅಲ್ಲವೇ?

ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸುವುದು ಸಂವಿಧಾನ ಉಲ್ಲಂಘನೆ ಅಲ್ಲವೇ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada