ಬೆಂಗಳೂರಿನ ನಮ್ಮ ಮೆಟ್ರೊ ಬರೋಬ್ಬರಿ ಐದು ತಿಂಗಳ ಬಳಿಕ ಮತ್ತೆ ಕಾರ್ಯಾಚರಣೆಗೆ ಇಳಿದಿದೆ. ಸದ್ಯ ಬೆಂಗಳೂರಿನಲ್ಲಿ ಟ್ರಾಫಿಕ್ ಸಾಮಾನ್ಯವಾಗಿ ಅತೀ ಹೆಚ್ಚು ಇರುವ ಸಮಯದಲ್ಲಿ ಮಾತ್ರ ಮೆಟ್ರೋ ಕಾರ್ಯಾಚರಣೆ ಆರಂಭಿಸಿದೆ. ಅದೂ ಕೂಡಾ ಬೈಯಪ್ಪನಹಳ್ಳಿಯಿಂದ ಮೈಸೂರು ರೋಡುವರೆಗಿನ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಪುನರಾರಂಭಗೊಂಡಿದೆ.
ಕರೋನಾ ಹಿನ್ನೆಲೆಯಲ್ಲಿ ಭಾರತದಲ್ಲಿ ದೇಶವ್ಯಾಪಿ ಲಾಕ್‌ಡೌನ್ ಹೇರಿದಂದಿನಿಂದ ಮೆಟ್ರೋ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಮಾರ್ಚ್ 23 ರಂದು ಸೇವೆ ನಿಲ್ಲಿಸಿದ ಬೆಂಗಳೂರು ಮೆಟ್ರೋ ಮೂರು ಹಂತದಲ್ಲಿ ಕಾರ್ಯಾಚರಣೆ ಪುನರಾರಂಭಿಸಲಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೊದಲ ಹಂತದಲ್ಲಿ ಅತ್ಯಂತ ಜನನಿಬಿಡವಾಗುವ ಬೆಳಗ್ಗೆ 8 ರಿಂದ 11 ವರೆಗೆ ಹಾಗೂ ಸಂಜೆ 4:30 ರಿಂದ 7:30 ರವರೆಗೆ ನೇರಳೆ ಮಾರ್ಗದಲ್ಲಿ ರೈಲು ಕಾರ್ಯಾಚರಿಸಲಿದೆ. (ಬೈಯಪ್ಪನಹಳ್ಳಿ- ಮೈಸೂರು ರೋಡ್)
ಎರಡನೇ ಹಂತದಲ್ಲಿ ಹಸಿರು ಮಾರ್ಗದಲ್ಲಿ (ನಾಗಸಂದ್ರ- ಯೆಲಚೇನಹಳ್ಳಿ) ಮೆಟ್ರೋ ಕಾರ್ಯಾಚರಿಸಲಿದೆ. ಇದು ಗುರುವಾರದಿಂದ ಆರಂಭಗೊಳ್ಳಲಿದೆ. ಮೂರನೇ ಹಂತದಲ್ಲಿ ಎರಡೂ ಮಾರ್ಗಗಳಲ್ಲೂ ಬೆಳಗ್ಗೆ 7 ರಿಂದ ರಾತ್ರಿ 9 ರವರೆಗೆ ಮೆಟ್ರೋ ಕಾರ್ಯಾಚರಿಸಲಿದೆ.
Also Read: ಅನ್‌ಲಾಕ್ 4: ಮೆಟ್ರೋ ಸಂಚಾರ ಹಾಗೂ ಕೆ ಆರ್ ಮಾರ್ಕೆಟ್ ಆರಂಭ
ರಾಜ್ಯ ಸರ್ಕಾರದ ಹೊಸ ನಿಯಮಗಳು ಮತ್ತು ಎಸ್‌ಒಪಿಗಳ ಪ್ರಕಾರ, ಸ್ಮಾರ್ಟ್‌ಕಾರ್ಡ್‌ಗಳನ್ನು ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಮೆಟ್ರೋ ರೈಲಿನಲ್ಲಿ ಸಂಚರಿಸಲು ಅವಕಾಶವಿರುತ್ತದೆ. ನಿಲ್ದಾಣದಲ್ಲಿ ಜನದಟ್ಟಣೆ ತಪ್ಪಿಸಲು ಮೊಬೈಲ್ ಅಪ್ಲಿಕೇಶನ್ ಬಳಸಿ ಮೆಟ್ರೋ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಬಹುದು.
ಮುಖಗವಸು ಧರಿಸದ ಪ್ರಯಾಣಿಕರಿಗೆ ಹಾಗೂ 37 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವನ್ನು ಹೊಂದಿರುವವರಿಗೆ ಮೆಟ್ರೋ ನಿಲ್ದಾಣಕ್ಕೆ ಪ್ರವೇಶವನ್ನು ನಿರಾಕರಿಸಲಾಗುತ್ತದೆ.
ಪ್ರತಿ ಪ್ರಯಾಣಿಕರು ಕೇವಲ ಒಂದು ಬ್ಯಾಗೇಜ್ ಮಾತ್ರ ಸಾಗಿಸಬಹುದೆಂದು ನಿಯಮಗಳು ಸೂಚಿಸಿದೆ, ಎರಡು ಮೀಟರ್‌ಗಳ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಮತ್ತು ರೈಲುಗಳಲ್ಲಿ ಒಂದಾದರ ಮೇಲೊಂದು ಪ್ರತಿಯೊಂದು ಆಸನಗಳನ್ನು ಖಾಲಿ ಬಿಡಲಾಗುತ್ತದೆ. ರೈಲಿನಲ್ಲಿ ಕೇವಲ 400 ಪ್ರಯಾಣಿಕರಿಗೆ ಮಾತ್ರ ಅವಕಾಶವಿರುತ್ತದೆ.