• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಐಎಮ್ಎ ಹಗರಣ: 28 ಮಂದಿಯ ವಿರುದ್ಧ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಬಿಐ

by
October 18, 2020
in ಕರ್ನಾಟಕ
0
ಐಎಮ್ಎ ಹಗರಣ: 28 ಮಂದಿಯ ವಿರುದ್ಧ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಬಿಐ
Share on WhatsAppShare on FacebookShare on Telegram

4,000 ಕೋಟಿ ರೂ. ಅಕ್ರಮದ ಐಎಂಎ ಹಗರಣದ ತನಿಖೆಗೆ ಸಂಬಂಧಿಸಿದಂತೆ ಸಂಸ್ಥೆಯ ಎಂಡಿ ಮತ್ತು ಸಿಇಒ ಮೊಹಮ್ಮದ್ ಮನ್ಸೂರ್ ಖಾನ್, ಹಲವಾರು ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 28 ಜನರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಬೆಂಗಳೂರಿನ ನ್ಯಾಯಾಲಯದಲ್ಲಿ ಪೂರಕ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದೆ.

ADVERTISEMENT

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹೆಮಂತ್ ನಿಂಬಲ್ಕರ್, (ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ), ಬೆಂಗಳೂರು ನಗರ ಪೊಲೀಸ್), ಅಜಯ್ ಹಿಲೋರಿ (ಪೊಲೀಸ್ ವರಿಷ್ಠಾಧಿಕಾರಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್), ಇ.ಬಿ. ಶ್ರೀಧರ ಡೆಪ್ಯೂಟಿ ಎಸ್‌ಪಿ (ಸಿಐಡಿ), ಕಮರ್ಷಿಯಲ್ ಸ್ಟ್ರೀಟ್ ನ ಆಗಿನ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸ್ಟೇಷನ್ ಹೌಸ್ ಆಫೀಸರ್ ಎಂ ರಮೇಶ್ , ಕಮರ್ಷಿಯಲ್ ಸ್ಟ್ರೀಟ್‌ ನ ಆಗಿನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪಿ.ಗೌರಿಶಂಕರ್, ಮತ್ತು ಬೆಂಗಳೂರು ಉತ್ತರ ಉಪವಿಭಾಗದ ಆಗಿನ ಸಹಾಯಕ ಆಯುಕ್ತರಾದ ಎಲ್.ಸಿ. ನಾಗರಾಜ್ ಮೊದಲಾದ ಅಧಿಕಾರಿಗಳ ಹೆಸರನ್ನು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಹೆಸರಿಸಿದೆ.

Also Read: ಐಎಂಎ ಪ್ರಕರಣ ಸಿಬಿಐಗೆ: ಕರ್ನಾಟಕದ `ಶಾರದಾ ಚಿಟ್ ಫಂಡ್’ ಆರಂಭ?

ಐಎಂಎ ನಿರ್ದೇಶಕರಾದ ನಿಜಾಮುದ್ದೀನ್, ನಸೀರ್ ಹುಸೇನ್, ನವೀದ್ ಅಹ್ಮದ್ ನಟ್ಟಮ್ಕರ್, ವಸೀಮ್, ಅರ್ಷದ್ ಖಾನ್, ಮತ್ತು ಅಫ್ಸರ್ ಪಾಷಾ ಅವರ ಹೆಸರನ್ನೂ ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ಹೆಸರಿಸಿದೆ.

ಐಎಂಎ ವಿರುದ್ಧ ಬಂದ ದೂರುಗಳು ಮತ್ತು ಮಾಹಿತಿಯ ಬಗ್ಗೆ ಆಗಿನ ಕಂದಾಯ ಅಧಿಕಾರಿ ಮತ್ತು ಬೆಂಗಳೂರಿನ ಇತರ ಪೊಲೀಸ್ ಅಧಿಕಾರಿಗಳು ಸೇರಿ ವಿಚಾರಣೆ/ಪರಿಶೀಲನೆಗಳನ್ನು ಮುಚ್ಚಿ ಹಾಕಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಆರೋಪಿಗಳ ವಿರುದ್ಧ ಕೆಪಿಐಡಿಎಫ್‌ಇ ಕಾಯ್ದೆ 2004 ಸೇರಿದಂತೆ ಕಾನೂನಿನಡಿಯಲ್ಲಿ ಅಗತ್ಯ ಕ್ರಮ ಕೈಗೊಂಡಿಲ್ಲ. ಬದಲಿಗೆ ಕ್ಲೀನ್ ಚಿಟ್ ನೀಡಿದ್ದಾರೆ ಮತ್ತು ಈ ಖಾಸಗಿ ಕಂಪನಿಯು ಯಾವುದೇ ಅಕ್ರಮ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ತಿಳಿಸಿ ದೂರುಗಳನ್ನು ಮುಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.

ಮಾಸಿಕ ಯೋಜನೆ, ಶಿಕ್ಷಣ ಯೋಜನೆ, ಮದುವೆ ಮುಂತಾದ ವಿವಿಧ ಯೋಜನೆಗಳ ಮೇಲೆ ಹೂಡಿಕೆ ರೂಪದಲ್ಲಿ ಜನರಿಂದ ಅಕ್ರಮವಾಗಿ ಹಣವನ್ನು ಸಂಗ್ರಹಿಸುವುದಕ್ಕೆ ಸಂಬಂಧಿಸಿದ ಐಎಂಎ ಹಗರಣವು 2018 ರಲ್ಲಿ ಬೆಳಕಿಗೆ ಬಂದಿತ್ತು.

Also Read: ಐಎಂಎ ಪ್ರಕರಣ: ಜನರ ಹಣ ಮರಳಿ ದೊರೆಯುವ ಹಾದಿ ಕಠಿಣ

ಐಎಂಎ ನಿರ್ದೇಶಕರು ಮತ್ತು ಪ್ರವರ್ತಕರ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ ಬಳಿಕ ಅದನ್ನು ಸಿಬಿಐಗೆ ವರ್ಗಾಯಿಸಲಾಯಿತು. ಈ ಹಗರಣವನ್ನು ತನಿಖೆ ನಡೆಸಲು ಸಿಬಿಐ ತನ್ನ ತನಿಖಾಧಿಕಾರಿಗಳನ್ನು ಒಳಗೊಂಡ ಬಹು ಶಿಸ್ತಿನ ತನಿಖಾ ತಂಡವನ್ನು (MDIT) ರಚಿಸಿತ್ತು, ಈ ತಂಡವು ಚಾರ್ಟರ್ಡ್ ಅಕೌಂಟೆಂಟ್ಸ್, ಫೊರೆನ್ಸಿಕ್ ಆಡಿಟರ್, ಕಂಪ್ಯೂಟರ್ ಫೊರೆನ್ಸಿಕ್ ತಜ್ಞರು ಮತ್ತು ಬ್ಯಾಂಕರ್‌ಗಳ ಸಹಾಯ ಪಡೆಯುತ್ತಿದೆ.

ಈ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಾಲ್ಕು ಪ್ರಕರಣಗಳನ್ನು ದಾಖಲಿಸಿದೆ. ಐಎಂಎ ಹಗರಣ ಪ್ರಕರಣದಲ್ಲಿ ಸಿಬಿಐ ಈ ಹಿಂದೆಯೂ ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ.

ಐಎಮ್‌ಎ ಹಗರಣದ ಮುಖ್ಯ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ಅವರನ್ನು ಕಳೆದ ವರ್ಷ ಜುಲೈ 19 ರಂದು ನವದೆಹಲಿಗೆ ಆಗಮಿಸಿದಾಗ ಬಂಧಿಸಲಾಗಿತ್ತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

Also Read: ಐಎಂಎ ಕರಿನೆರಳಲ್ಲಿ ಐಪಿಎಸ್ ವರ್ಗಾವಣೆ!

Tags: CBIIMAIMA scamಐಎಮ್ಎಸಿಬಿಐ
Previous Post

ದೇಶದಲ್ಲಿ 53 ವರ್ಷಗಳಿಂದ ಇನ್ನೂ ಸ್ಥಾಪನೆ ಆಗದ ರಕ್ಷಣಾ ವಿಶ್ವವಿದ್ಯಾಲಯ

Next Post

ಜೆಡಿಎಸ್‌ ಮುಗಿಸುವುದೇ ಕಾಂಗ್ರೆಸ್‌ ನಾಯಕರ ಅಜೆಂಡಾ: ಎಚ್‌ ಡಿ ಕುಮಾರಸ್ವಾಮಿ

Related Posts

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ
ಕರ್ನಾಟಕ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

by ಪ್ರತಿಧ್ವನಿ
April 11, 2026
0

ಕುಂದಾಪುರ: ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಶಿಕ್ಷಕರ ಜೊತೆಗೂಡಿ ಎಐ (Artificial Intelligence)...

Read moreDetails
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
Next Post
ಜೆಡಿಎಸ್‌ ಮುಗಿಸುವುದೇ ಕಾಂಗ್ರೆಸ್‌ ನಾಯಕರ ಅಜೆಂಡಾ:

ಜೆಡಿಎಸ್‌ ಮುಗಿಸುವುದೇ ಕಾಂಗ್ರೆಸ್‌ ನಾಯಕರ ಅಜೆಂಡಾ: ಎಚ್‌ ಡಿ ಕುಮಾರಸ್ವಾಮಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada