ಸುದೀರ್ಘ ಏಳು ತಿಂಗಳ ನಂತರ ಶುಕ್ರವಾರದಂದು ಶಬರಿಮಲೆ ದೇವಸ್ಥಾನವನ್ನು ಭಕ್ತರಿಗಾಗಿ ತೆರೆಯಲಾಯಿತು. ಕಟ್ಟುನಿಟ್ಟಿನ ಕೋವಿಡ್ ನಿಯಮಗಳ ಪಾಲನೆ ಮಾಡಿದಲ್ಲಿ ಮಾತ್ರ ಭಕ್ತರಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ದೇಶದಲ್ಲಿ ಕರೋನಾ ಸೋಂಕು ಹಬ್ಬಲು ಆರಂಭವಾಗುವ ಮುನ್ನ, ಪ್ರತಿದಿನವೂ ಸಾವಿರಾರು ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಿದ್ದರು. ಅದಾದ ನಂತರ ಏಳು ತಿಂಗಳುಗಳ ಕಾಲ ದೇವಸ್ಥಾನದ ಒಳಗೆ ಭಕ್ತರಿಗೆ ಪ್ರವೇಶವಿರಲಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈಗ ದೇವರ ದರ್ಶನಕ್ಕೆ ಭಕ್ತರಿಗೆ ಅನುಮತಿ ನೀಡಲಾಗಿದೆಯಾದರೂ, 48 ಗಂಟೆಗಳಿಗಿಂತಲೂ ಹಳೆಯದಾಗಿರದ ಕೋವಿಡ್-ನೆಗೆಟಿವ್ ವರದಿಯನ್ನು ನೀಡಿದಲ್ಲಿ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುವುದು.
ಇನ್ನು ಪದ್ದತಿಯಂತೆ ಪಂಬಾ ನದಿಯಲ್ಲಿ ಸ್ನಾನ ಮಾಡಲು ನಿಷೇಧ ಹೇರಲಾಗಿದೆ. ಮಲೆಯ ಬುಡದಲ್ಲಿ ಭಕ್ತರು ಉಳಿದುಕೊಳ್ಳಲು ಕೂಡಾ ಅವಕಾಶವನ್ನು ನೀಡಲಾಗಿಲ್ಲ.
ಜೂನ್‌ನಲ್ಲಿಯೇ ದೇವಸ್ಥಾನಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತಾದರೂ, ಶಬರಿಮಲೆ ದೇವಸ್ಥಾನದ ಪ್ರಧಾನ ಅರ್ಚಕರು ಪತ್ರ ಬರೆದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ದೇವಸ್ಥಾನ ತೆರೆಯುವ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು.
