ಬಿಜೆಪಿಯೊಂದಿಗಿನ ಸಖ್ಯವನ್ನು ಕಸಿದುಕೊಂಡ ಒಂದು ದಿನದ ಬಳಿಕ ಮಾತನಾಡಿದ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ನರೇಂದ್ರ ಮೋದಿ ನೇತೃತ್ವದ ʼರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟʼ (ಎನ್‌ಡಿಎ) ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಮತ್ತು ಮೈತ್ರಿ “ಕೇವಲ ಹೆಸರಿನಲ್ಲಿ” ಮಾತ್ರ ಉಳಿದಿದೆ ಎಂದು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಕಳೆದ 7, 8, 10 ವರ್ಷಗಳಿಂದ ಅಥವಾ ಎನ್‌ಡಿಎ ಕೇವಲ ಹೆಸರಿನಲ್ಲಿದೆ. ಎನ್‌ಡಿಎಯಲ್ಲಿ ಈಗ ಏನೂ ಇಲ್ಲ. ಯಾವುದೇ ಚರ್ಚೆ ಇಲ್ಲ, ಯೋಜನೆ ಇಲ್ಲ, ಸಭೆಗಳಿಲ್ಲ. ಕಳೆದ 10 ವರ್ಷಗಳಲ್ಲಿ ಪ್ರಧಾನ ಮಂತ್ರಿ ಅವರ ಮನಸ್ಸಿನಲ್ಲಿರುವುದನ್ನು ಚರ್ಚಿಸಲು ಎನ್‌ಡಿಎ ಸಭೆಯನ್ನು ಕರೆದಿರುವುದು ನನಗೆ ನೆನಪಿಲ್ಲ. ಮೈತ್ರಿಗಳು ಕಾಗದದ ಮೇಲೆ ಮಾತ್ರ ಇರಬಾರದು. ಇದಕ್ಕೂ ಮೊದಲು, ವಾಜಪೇಯಿ ಅವರ ಸಮಯದಲ್ಲಿ ಸರಿಯಾದ ಸಂಬಂಧವಿತ್ತು. ನನ್ನ ತಂದೆ ಎನ್‌ಡಿಎ ಸ್ಥಾಪಕ ಸದಸ್ಯರು. ನಾವು ರಚಿಸಿರುವ ಎನ್‌ಡಿಎಯ ಸ್ವರೂಪ ಇಂದು ಇಲ್ಲ ಎನ್ನುವುದು ವಿಷಾದಕರ” ಎಂದು ಬಾದಲ್ ಹೇಳಿದ್ದಾರೆ.
ಅಕಾಲಿ ದಳ ಯಾವಾಗಲೂ ರಾಜ್ಯದಲ್ಲಿ ಬಿಜೆಪಿಯನ್ನು ಜೊತೆಗೆ ಕರೆದೊಯ್ದಿದೆ ಎಂದು ಹೇಳಿದ ಬಾದಲ್, “ನನ್ನ ತಂದೆ ಪ್ರಕಾಶ್ ಸಿಂಗ್ ಬಾದಲ್ ಮಾಡಿದ ರೀತಿಯಲ್ಲಿಯೇ ಮೈತ್ರಿ ಮಾಡಿಕೊಳ್ಳಬೇಕು. ಪ್ರತಿ ನಿರ್ಧಾರಕ್ಕೂ ಅವರು ಬಿಜೆಪಿಯನ್ನು ಕರೆಯುತ್ತಿದ್ದರು. ಯಾವುದೇ ಮನವಿ ಪತ್ರವನ್ನು ಸಲ್ಲಿಸಲು ನಾವು ರಾಜ್ಯಪಾಲರ ಬಳಿಗೆ ಹೋದಾಗಲೆಲ್ಲಾ ಬಿಜೆಪಿ ನಮ್ಮೊಂದಿಗೆ ಇರುತ್ತಿತ್ತು. ರಾಜ್ಯದಲ್ಲಿ ನಾವು ಬಹುಸಂಖ್ಯಾತ ಪಾಲುದಾರರು ಮತ್ತು ಅವರು ಅಲ್ಪಸಂಖ್ಯಾತ ಪಾಲುದಾರರು. ಅದರ ಹೊರತಾಗಿಯೂ, ನಾವು ಅವರನ್ನು ಎಲ್ಲದಕ್ಕೂ ವಿಶ್ವಾಸಕ್ಕೆ ತೆಗೆದುಕೊಂಡೆವು ” ಎಂದಿದ್ದಾರೆ.
Also Read: ಕೃಷಿ ಮಸೂದೆಗೆ ಮೋದಿ ಧಾವಂತ ಮತ್ತು ಕೃಷಿ ಹೂಡಿಕೆಗೆ ಅಂಬಾನಿ ಆತುರ!
“ಎನ್‌ಡಿಎಯಿಂದ ನಿರ್ಗಮಿಸುವುದು ಪಕ್ಷದ ಸರ್ವಾನುಮತದ ನಿರ್ಧಾರವಾಗಿತ್ತು. ಹರ್ಸ್ ಮಿರಾತ್ ಬಾದಲ್, ಮೋದಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದಾಗ, ಪಕ್ಷವು ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನಾನು ಹೇಳಿದ್ದೆ. ಪಕ್ಷ ನಿನ್ನೆ ಸಭೆ ಸೇರಿತು ಮತ್ತು ನಾವು ನಿರ್ಗಮಿಸುವ ನಿರ್ಧಾರ ತೆಗೆದುಕೊಂಡಿದ್ದೇವೆ.” ಎಂದಿದ್ದಾರೆ.
ಎನ್‌ಡಿಎಯಿಂದ ಶಿರೋಮಣಿ ಅಕಾಲಿ ದಳದ ನಿರ್ಗಮನದೊಂದಿಗೆ ಪಂಜಾಬಿನಲ್ಲಿ ಬಿಜೆಪಿಗೆ ಯಾವ ಮಿತ್ರ ಪಕ್ಷಗಳೂ ಇಲ್ಲವಾಗಿದೆ. ಎನ್‌ಡಿಎ ಮೈತ್ರಿಕೂಟದ ಸ್ಥಾಪಕ ಸದಸ್ಯ ಪಕ್ಷವಾಗಿದ್ದ ಎಸ್‌ಡಿಎ ʼಕೇಂದ್ರದ ನೂತನ ಕೃಷಿ ಮಸೂದೆʼ ಗೆ ವಿರೋಧ ವ್ಯಕ್ತಪಡಿಸಿ ದೀರ್ಘಕಾಲದ ಎನ್‌ಡಿಎಯೊಂದಿಗಿನ ಮೈತ್ರಿಯನ್ನು ಕಳೆದುಕೊಂಡಿದೆ.