ಉತ್ತರ ಪ್ರದೇಶದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯ ಕಾರ್ಯಕರ್ತರಿಗಿದ್ದ ರಜೆಗಳನ್ನು ರದ್ದು ಮಾಡಲಾಗಿದೆ.
ಕೊವಿಡ್ 19 ಗೆ ಸಂಬಂಧಿಸಿದ ಅಧಿಕೃತ ಲಸಿಕೆಯ ಸಂಶೋಧಾನಾ ಕಾರ್ಯನಡೆಯುತ್ತಿರುವ ಹಿನ್ನಲೆ, ಡಿಸೆಂಬರ್ 16 ರಿಂದ ಜನವರಿವರೆಗೆ ಆರೋಗ್ಯ ಸಿಬ್ಬಂದಿಗಳ ರಜೆಯನ್ನು ರದ್ದುಗೊಳಿಸಲಾಗಿದೆ.
ವೈದ್ಯರು, ದಾದಿಯರು, ಇಲಾಖೆಗೆ ಸಂಬಧಿಸಿದ ಗುತ್ತಿಗೆದಾರರು, ದಿನಗೂಲಿ ಕಾರ್ಮಿಕರು, ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ರಜೆಯಲ್ಲಿದ್ದರೆ, ಕೂಡಲೇ ಹಾಜರಾಗುವಂತೆ ಸೂಚಿಸಲು ಸರ್ಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಆದೇಶ ನೀಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರದಿಂದ ಅಧಿಕೃತ ಘೋಷಣೆಗೊಂಡ ಕರೋನಾ ಲಸಿಕೆಯನ್ನು ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ, ವೈದ್ಯರುಗಳಿಗೆ, ಖಾಸಗಿ ವೈದ್ಯಕೀಯ ವಲಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ನೀಡಲಾಗುತ್ತಿದ್ದು, ಈಗಾಗಲೇ ನಾವು ಗೋರಖ್ಪುರದಲ್ಲಿ ಮೊದಲ ಹಂತದಲ್ಲಿ 23,000 ಸೋಂಕಿತರಿಗೆ ಲಸಿಕೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಹಿರಿಯ ವೈದ್ಯಕೀಯ ಅಧಿಕಾರಿ ಶ್ರೀಕಾಂತ್ ತಿವಾರಿ ತಿಳಿಸಿದ್ದಾರೆ.
ಸೀರಮ್ ಇನ್ಸ್ಟಿಟೂಟ್ ಆಫ್ ಇಂಡಿಯಾ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಸೇರಿದಂತೆ ದೇಶದ ವಿವಿಧ ಔಷಧಾ ತಯಾರಿಕಾ ಕಂಪನಿಗಳು ಲಸಿಕಾ ಪ್ರಯೋಗದ ಹಂತದಲ್ಲಿದ್ದು, ಕೆಲವು ಸಂಸ್ಥೆಗಳು ಸಂಶೋಧನಾ ಲಸಿಕೆಯನ್ನು ಹೊರತರುತ್ತಿವೆ.