ವಿದ್ಯಾರ್ಥಿಗಳಿಗೆ ಸಹಾಯವಾಗುವ ದೃಷ್ಟಿಯಿಂದ ಒಂದರಿಂದ ಹತ್ತನೆ ತರಗತಿ ವರೆಗಿನ ಪಠ್ಯಪುಸ್ತಕಗಳನ್ನು ಕರ್ನಾಟಕ ಪಠ್ಯ ಪುಸ್ತಕ ಸಂಘ(ರಿ) ಆನ್‌ಲೈನ್‌ನಲ್ಲಿ ಉಚಿತವಾಗಿ ದೊರೆಯುವಂತೆ ಮಾಡಿದೆ.
ಪಠ್ಯಪುಸ್ತಕಗಳನ್ನು ಆನ್ ಲೈನ್ ನಲ್ಲಿ ಸುಲಭವಾಗಿ ದೊರೆಯುವಂತೆ ಮಾಡುವುದೇ ನಮ್ಮ ವೆಬ್ ಸೈಟ್ ನ ಮುಖ್ಯ ಗುರಿ ಎಂದಿರುವ ಪಠ್ಯ ಪುಸ್ತಕ ಸಂಘ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದರಿಂದ ಪ್ರಯೋಜನ ಪಡೆಯುತ್ತಾರೆಂದು ಆಶಿಸುತ್ತೇವೆ ಎಂದಿದೆ.
ಅಲ್ಲದೆ ಬೇರೆ ರಾಜ್ಯಗಳ ಶಿಕ್ಷಕರು, ಶಿಕ್ಷಣ ತಜ್ಞರು, ಶಿಕ್ಷಣ ಸಂಶೋಧಕರು, ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವ ಪ್ರಪಂಚದ ಪ್ರತಿಯೊಬ್ಬರೂ ಕೂಡಾ ನಮ್ಮ ಪಠ್ಯಪುಸ್ತಕಗಳ ಪ್ರಯೋಜನವನ್ನು ಪಡೆಯಬಹುದು. ಪ್ರಾರಂಭದಲ್ಲಿ ಹತ್ತನೇ ತರಗತಿಯ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಎಲ್ಲಾ ಪಠ್ಯಪುಸ್ತಕಗಳ ಎಲ್ಲಾ ಭಾಗಗಳನ್ನು ಆನ್ ಲೈನ್ ಮಾಡಲಾಗಿದೆ. ಕ್ರಮೇಣವಾಗಿ ಎಲ್ಲಾ ಮಾಧ್ಯಮಗಳ ಎಲ್ಲಾ ತರಗತಿಗಳ ಪಠ್ಯಪುಸ್ತಕಗಳನ್ನು ಆನ್ ಲೈನ್ ನಲ್ಲಿ ಒದಗಿಸುವುದಾಗಿ ಸಂಘ ವೆಬ್‌ಸೈಟಿನಲ್ಲಿ ಹೇಳಿದೆ.
ಮೊದಲ ಹಂತವಾಗಿ ಕೆಲವು ಪಠ್ಯ ಪುಸ್ತಕಗಲನ್ನು ಮಾತ್ರ ಆನ್‌ಲೈನ್‌ನಲ್ಲಿ ದೊರೆಯುವಂತೆ ಮಾಡಿದ್ದು, ಶೀಘ್ರದಲ್ಲೇ ಎಲ್ಲಾ ಪಠ್ಯ ಪುಸ್ತಕಗಳು ದೊರೆಯುವಂತೆ ರೂಪಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಪಠ್ಯಪುಸ್ತಕಗಳು ದೊರೆಯುವ ಅಂತರ್ಜಾಲ ಕೊಂಡಿಗಾಗಿ ಇಲ್ಲಿ ಕ್ಲಿಕ್ ಮಾಡಿ.