ಹೋರಾಟಗಾರ ಮತ್ತು ಬರಹಗಾರ ಸ್ಟಾನ್ ಸ್ವಾಮಿ ಅವರು ಕಳೆದ ಎರಡು ದಶಕಗಳಿಂದ ಆದಿವಾಸಿ ಜನರೊಂದಿಗೆ ಗುರುತಿಸಿಕೊಂಡಿದ್ದು ಅವರ ಹಕ್ಕುಗಳಿಗಾಗಿ ದನಿ ಎತ್ತುವಲ್ಲಿ ಸದಾ ಮುಂದಿದ್ದಾರೆ. ಓರ್ವ ಬರಹಗಾರನಾಗಿ, ಆದಿವಾಸಿಗಳು ಎದುರಿಸುತ್ತಿರುವ ವಿಭಿನ್ನ ಸಮಸ್ಯೆಗಳನ್ನು ವಿಶ್ಲೇಷಿಸಲು ಅವರು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಭಾರತೀಯ ಸಂವಿಧಾನದ ಆಶಯದಂತೆ ಸರ್ಕಾರ ಜಾರಿಗೆ ತಂದ ಹಲವಾರು ನೀತಿಗಳು ಮತ್ತು ಕಾನೂನುಗಳ ಬಗ್ಗೆ ಅವರು ಭಿನ್ನಾಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಮತ್ತು ಆಡಳಿತ ವರ್ಗ ಕೈಗೊಂಡ ಹಲವಾರು ಕ್ರಮಗಳ ಸಿಂಧುತ್ವ, ಕಾನೂನುಬದ್ಧತೆ ಮತ್ತು ನ್ಯಾಯವನ್ನು ಅವರು ಪ್ರಶ್ನಿಸಿದ್ದಾರೆ. ಜಾರ್ಖಂಡ್ ರಾಜ್ಯದ ಪಠಾಲ್ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ, “ಆದಿವಾಸಿಗಳು ಏಕೆ ಪ್ರತಿಭಟಿಸುತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಹುಡುಕ ಹೊರಟ ಅವರಿಗೆ ತಮ್ಮ ಸಹಿಷ್ಣುತೆಯನ್ನು ಮೀರಿ ಆದಿವಾಸಿಗಳು ಶೋಷಣೆ ಮತ್ತು ದಬ್ಬಾಳಿಕೆಗೆ ಒಳಗಾಗಿದ್ದಾರೆ ಎಂದು ಕಂಡು ಬಂತು. ಆದಿವಾಸಿಗಳ ಭೂಮಿಯಲ್ಲಿ ಗಣಿಗಾರಿಕೆ ಮಾಡುವ ಶ್ರೀಮಂತ ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳು ಆದಿವಾಸಿಗಳ ಜಮೀನಿನ ಖನಿಜಗಳನ್ನು ಮಾರಾಟ ಮಾಡಿ ಶ್ರೀಮಂತರಾಗಿದ್ದಾರೆ.ಅದರೆ ಅವರು ಹಸಿವಿನಿಂದ ಸಾವನ್ನಪ್ಪುವ ಮಟ್ಟಿಗೆ ಆದಿವಾಸಿ ಜನರನ್ನು ಬಡವರನ್ನಾಗಿ ಮಾಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಖನಿಜ ಗಣಿಗಾರಿಕೆಯಲ್ಲಿ ಅವರಿಗೆ ಯಾವುದೇ ಪಾಲು ಇಲ್ಲ. ಅಲ್ಲದೆ, ಅವರ ಯೋಗಕ್ಷೇಮಕ್ಕಾಗಿ ಜಾರಿಗೊಳಿಸಲಾದ ಕಾನೂನುಗಳು ಮತ್ತು ನೀತಿಗಳು ಉದ್ದೇಶಪೂರ್ವಕವಾಗಿ ಅನುಷ್ಠಾನಗೊಳ್ಳದೆ ಉಳಿದಿವೆ. ಅದಕ್ಕಾಗಿ ಅವರು ತಮ್ಮ ಗ್ರಾಮ ಸಭೆಗಳಿಗೆ ಅಧಿಕಾರ ನೀಡುವ ಮೂಲಕ ತಮ್ಮ ಗುರುತನ್ನು ಮರಳಿ ಪಡೆಯಲು ಪ್ರಯತ್ನಿಸಿದ್ದಾರೆ ಎಂದೂ ಸ್ವಾಮಿ ಹೇಳಿದ್ದಾರೆ.
ಆದಿವಾಸಿ ಜನರ ಅಭಿವೃದ್ದಿಗೆ ವಿರುದ್ದವಾಗಿರುವ ಅಂಶಗಳ ಬಗ್ಗೆ ಈ ಪ್ರಶ್ನೆಗಳನ್ನು ಎತ್ತಿದ್ದಾರೆ.
1) ಆದಿವಾಸಿ ಸಮುದಾಯದ ಸದಸ್ಯರನ್ನು ಮಾತ್ರ ಒಳಗೊಂಡ ‘ಬುಡಕಟ್ಟು ಸಲಹಾ ಮಂಡಳಿ’ (ಟಿಎಸಿ) ರಾಜ್ಯಪಾಲರಿಗೆ ಸಲಹೆ ನೀಡುತ್ತದೆ ಎಂದು ಸ್ಪಷ್ಟವಾಗಿ ತಿಳಿಸುವ ಸಂವಿಧಾನದ 5 ನೇ ವಿಧಿ, ಆರ್ಟಿಕಲ್ 244 (1) ಅನ್ನು ಅನುಷ್ಠಾನಗೊಳಿಸದಿರುವುದನ್ನು ಅವರು ಪ್ರಸ್ನಿಸಿದ್ದಾರೆ. ರಾಜ್ಯದ ಆದಿವಾಸಿ ಜನರ ರಕ್ಷಣೆ, ಯೋಗಕ್ಷೇಮ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಮತ್ತು ಎಲ್ಲದರ ಬಗ್ಗೆ ರಾಜ್ಯದ ರಾಜ್ಯಪಾಲರು ಆದಿವಾಸಿ ಜನರ ಸಾಂವಿಧಾನಿಕ ಪಾಲಕರಾಗಿದ್ದಾರೆ. ಅವರು ತನ್ನದೇ ಆದ ಕಾನೂನುಗಳನ್ನು ಮಾಡಬಹುದು ಮತ್ತು ಸಂಸತ್ತು ಅಥವಾ ರಾಜ್ಯ ವಿಧಾನಸಭೆಯಿಂದ ಜಾರಿಗೆ ತರಲಾದ ಯಾವುದೇ ಕಾನೂನನ್ನು ರದ್ದುಗೊಳಿಸಬಹುದು, ಯಾವಾಗಲೂ ಆದಿವಾಸಿ ಜನರ ಕಲ್ಯಾಣವನ್ನು ಗಮನದಲ್ಲಿರಿಸಿಕೊಳ್ಳಬಹುದು.
Also Read: ಭೀಮಾ ಕೋರೆಗಾಂವ್ ಪ್ರಕರಣ: ಚಾರ್ಜ್‌ಶೀಟ್ ದಾಖಲಿಸಿದ NIA
ವಾಸ್ತವ ಏನೆಂದರೆ, ಈ ಏಳು ದಶಕಗಳಲ್ಲಿ ಯಾವುದೇ ರಾಜ್ಯಗಳಲ್ಲಿ ಯಾವುದೇ ರಾಜ್ಯಪಾಲರು ತಮ್ಮ ಸಾಂವಿಧಾನಿಕ ವಿವೇಚನಾ ಶಕ್ತಿಯನ್ನು ಬಳಸಿಕೊಂಡಿಲ್ಲ, ಅವರು ಚುನಾಯಿತರೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಬೇಕೆಂಬ ಸಬೂಬು ಹೇಳುವ ಮೂಲಕ ಆದಿವಾಸಿ ಜನರನ್ನು ಮತ್ತಷ್ಟು ತುಳಿತಕ್ಕೀಡು ಮಾಡುತಿದ್ದಾರೆ. ಟಿಎಸಿಯ ಸಭೆಯು ಅಪರೂಪಕ್ಕೆ, ನಡೆಯುತ್ತದೆ ಮತ್ತು ಇದನ್ನು ರಾಜ್ಯದ ಮುಖ್ಯಮಂತ್ರಿಗಳು ಕರೆಯುತ್ತಾರೆ ಮತ್ತು ಅಧ್ಯಕ್ಷತೆ ವಹಿಸುತ್ತಾರೆ ಮತ್ತು ಇದನ್ನು ಆಡಳಿತ ಪಕ್ಷವು ನಿಯಂತ್ರಿಸುತ್ತದೆ. ಟಿಎಸಿಯು ವಾಸ್ತವವಾಗಿ ಹಲ್ಲಿಲ್ಲದ ಸಂಸ್ಥೆ ಆಗಿದೆ. ಇದು ನಿಜಕ್ಕೂ ಆದಿವಾಸಿ ಜನರಿಗೆ ಸಾಂವಿಧಾನಿಕ ವಂಚನೆಯಾಗಿದೆ.
Also Read: ಭೀಮಾ ಕೊರೆಗಾಂವ್ ಹಿಂಸಾಚಾರ: ಇನ್ನೂ ವಿಚಾರಣೆಗೊಳಗಾಗದ ಹಿಂದುತ್ವ ನಾಯಕರು
2) ಪಂಚಾಯತ್ ಕಾಯ್ದೆ 1996 ಅನ್ನು ಏಕೆ ನಿರ್ಲಕ್ಷಿಸಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಇದು ಭಾರತದ ಆದಿವಾಸಿ ಸಮುದಾಯಗಳು ಗ್ರಾಮ ಸಭೆಯ ಮೂಲಕ ಸ್ವ-ಆಡಳಿತದ ಶ್ರೀಮಂತ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವನ್ನು ಹೊಂದಿದೆ ಎಂಬ ಅಂಶವನ್ನು ಮೊದಲ ಬಾರಿಗೆ ಗುರುತಿಸಿದ್ದಾರೆ. ವಾಸ್ತವವೆಂದರೆ ಈ ಕಾಯಿದೆಯನ್ನು ಉದ್ದೇಶಪೂರ್ವಕವಾಗಿ ಎಲ್ಲಾ ಒಂಬತ್ತು ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲಾಗಿಲ್ಲ. ಇದರರ್ಥ ಬಂಡವಾಳಶಾಹಿ ಆಡಳಿತ ವರ್ಗವು ಆದಿವಾಸಿ ಜನರು ಸ್ವಯಂ ಆಡಳಿತವನ್ನು ಬಯಸುವುದಿಲ್ಲ.
Also Read: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ದೆಹಲಿ ವಿವಿ ಪ್ರೊ. ಹನಿ ಬಾಬ್ ಬಂಧನ!
3) ಪರಿಶಿಷ್ಟ ಪ್ರದೇಶಗಳಲ್ಲಿನ ಆದಿವಾಸಿ ಸಮುದಾಯಗಳಿಗೆ ದೊಡ್ಡ ಪರಿಹಾರವಾಗಿ ಬಂದ ಸುಪ್ರೀಂ ಕೋರ್ಟ್‌ನ 1997 ರ ಸಮತಾ ತೀರ್ಪಿನ ಕುರಿತು ಸರ್ಕಾರದ ಮೌನವನ್ನು ಅವರು ಪ್ರಶ್ನಿಸಿದ್ದಾರೆ. ಜಾಗತೀಕರಣ, ಉದಾರೀಕರಣ, ಮಾರುಕಟ್ಟೆ, ಖಾಸಗೀಕರಣ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಪೋರೇಟ್ ಸಂಸ್ಥೆಗಳು ನೀತಿಯ ಪರಿಣಾಮವಾಗಿ ಖನಿಜ ಸಂಪತ್ತನ್ನು ಗಣಿಗಾರಿಕೆ ಮಾಡಲು ಮಧ್ಯ ಭಾರತದ ಆದಿವಾಸಿ ಪ್ರದೇಶಗಳನ್ನು ಆಕ್ರಮಿಸಲು ಯತ್ನಿಸಿದ ಸಮಯದಲ್ಲಿ ಈ ಸಮತಾ ತೀರ್ಪು ಬಂದಿತು. ಅವರ ಸಾಂಪ್ರದಾಯಿಕ ಹಕ್ಕುಗಳನ್ನು ದಶಕಗಳಿಂದ ವ್ಯವಸ್ಥಿತವಾಗಿ ಉಲ್ಲಂಘಿಸಲಾಗಿದೆ.
Also Read: ಜನ ಹೋರಾಟ ಬಗ್ಗುಬಡಿಯಲು ಭೀಮಾ ಕೋರೆಗಾಂವ್ ಮಾಡೆಲ್!
4) ಅರಣ್ಯ ಹಕ್ಕುಗಳ ಕಾಯ್ದೆ, 2006 ರಂತೆ ಸರ್ಕಾರದ ನಿರ್ಲಕ್ಷ್ಯವನ್ನೂ ಪ್ರಶ್ನಿಸಿದ್ದಾರೆ. ನಮಗೆ ತಿಳಿದಿರುವಂತೆ ಜಮೀನು, ನೀರು ಮತ್ತು ಅರಣ್ಯ ಆದಿವಾಸಿಗಳ ಜೀವನದ ಆಧಾರವಾಗಿದೆ. ಅದರೆ ಕಾಯ್ದೆಯ ಉದ್ದೇಶ ಇನ್ನೂ ಈಡೇರಿಲ್ಲ. 2006 ರಿಂದ 2011 ರವರೆಗೆ ಹಕ್ಕು ಪತ್ರಗಳಿಗಾಗಿ ದೇಶಾದ್ಯಂತ ಸುಮಾರು 30 ಲಕ್ಷ ಅರ್ಜಿಗಳನ್ನು ಸಲ್ಲಿಸಲಾಯಿತು. ಈ ಪೈಕಿ 11 ಲಕ್ಷ ಅರ್ಜಿಗಳಿಗೆ ಅನುಮೋದನೆ ನೀಡಲಾಗಿದ್ದರೂ 14 ಲಕ್ಷ ತಿರಸ್ಕರಿಸಲಾಗಿದ್ದು, ಐದು ಲಕ್ಷ ಬಾಕಿ ಉಳಿದಿದೆ.
5) ‘ಭೂಮಿಯ ಮಾಲೀಕರು ಮಣ್ಣಿನ ಖನಿಜಗಳ ಮಾಲೀಕರು’ ಎಂಬ ಸುಪ್ರೀಂ ಕೋರ್ಟಿನ ಆದೇಶವನ್ನು ಜಾರಿಗೊಳಿಸುವಲ್ಲಿ ಸರ್ಕಾರದ ನಿಷ್ಕ್ರಿಯತೆಯನ್ನು ಅವರು ಪ್ರಶ್ನಿಸಿದ್ದಾರೆ. ಅದರೆ ಆದಿವಾಸಿಗಳಿಗೆ ಅವರ ಭೂಮಿಯ ಹಕ್ಕನ್ನೇ ಇನ್ನೂ ನೀಡಿಲ್ಲ. ಅವರ ಜಮೀನುಗಳಲ್ಲಿನ ಸಂಪನ್ಮೂಲ ಖನಿಜಗಳನ್ನು ಸರ್ಕಾರಿ ಮತ್ತು ಖಾಸಗಿ ಕಂಪನಿಗಳು ಲೂಟಿ ಮಾಡುತ್ತಿವೆ.
Also Read: ಭೀಮಾ ಕೋರೆಗಾಂವ್ ಪ್ರಕರಣದ ಹಿಂದಿದೆ ಮಾಲ್ ವೇರ್ ಅಸ್ತ್ರದ ಪಿತೂರಿ!
6) ನಿಷೇಧಿತ ಸಂಘಟನೆಯೊಂದರ ಸದಸ್ಯನಾಗಿರುವುದು ಅಪರಾಧ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ನಕ್ಸಲರ ಬೆಂಬಲಿಗರು ಎಂಬ ಅನುಮಾನದ ಮೇಲೆ ಅನೇಕ ಯುವಕ-ಯುವತಿಯರನ್ನು ಜೈಲಿನಲ್ಲಿರಿಸಲಾಗುತ್ತದೆ ಎಂಬುದು ಸಾಮಾನ್ಯ ಜ್ಞಾನ. ಇದನ್ನೂ ಅವರು ಪ್ರಶ್ನಿಸಿದ್ದಾರೆ.
7) ಜಾರ್ಖಂಡ್ ಸರ್ಕಾರವು ಇತ್ತೀಚೆಗೆ ಭೂಸ್ವಾಧೀನ ಕಾಯ್ದೆ 2013 ರಲ್ಲಿ ಜಾರಿಗೆ ತಂದಿರುವ ತಿದ್ದುಪಡಿಯನ್ನು ಅವರು ಪ್ರಶ್ನಿಸಿದ್ದಾರೆ. ಏಕೆಂದರೆ ಇದು ಆದಿವಾಸಿ ಸಮುದಾಯಕ್ಕೆ ಮರಣದಂಡನೆಯಂತಾಗಿದೆ. ಇದರ ಪ್ರಕಾರ ಸರ್ಕಾರವು ಯಾವುದೇ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಅನುಮತಿ ನೀಡಬಹುದು.
8) ಆದಿವಾಸಿ ಜನರನ್ನು ಸರ್ವನಾಶ ಮಾಡುವ ‘ಲ್ಯಾಂಡ್ ಬ್ಯಾಂಕ್’ ಅನ್ನು ಅವರು ಪ್ರಶ್ನಿಸಿದ್ದಾರೆ. ಫೆಬ್ರವರಿ 2017 ರಲ್ಲಿ ನಡೆದ ‘ಮೊಮೆಂಟಮ್ ಜಾರ್ಖಂಡ್’ ಸಂದರ್ಭದಲ್ಲಿ, ಭೂ ಬ್ಯಾಂಕ್‌ನಲ್ಲಿ 21 ಲಕ್ಷ ಎಕರೆ ಭೂಮಿ ಇದ್ದು, ಅದರಲ್ಲಿ 10 ಲಕ್ಷ ಎಕರೆಯನ್ನು ಕೈಗಾರಿಕೋದ್ಯಮಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಸರ್ಕಾರ ಘೋಷಿಸಿತು. ಇದು ಅದಿವಾಸಿಗಳಿಗೆ ಸೇರಿದ ಭೂಮಿ ಅಗಿದ್ದು ಅವರ ಹೆಸರಿನಲ್ಲಿದ್ದ ಜಮಾಬಂದಿಯನ್ನು ರದ್ದು ಮಾಡಿ ಸರ್ಕಾರದ ಹೆಸರು ದಾಖಲಿಸಲಾಗಿದೆ.
ಈ ಎಲ್ಲ ಪ್ರಶ್ನೆಗಳನ್ನು ಸತತವಾಗಿ ಎತ್ತಿದ್ದರಿಂದ ಜಾರ್ಖಂಡ್ ನ ಬಿಜೆಪಿ ರಾಜ್ಯ ಸರ್ಕಾರ ಸ್ವಾಮಿ ಅವರನ್ನು ದೇಶ ದ್ರೋಹದ ಕಾಯ್ದೆ ಅಡಿಯಲ್ಲಿ ಬಂಧಿಸಿತ್ತು, ನಂತರ ಜಾರ್ಖಂಡ್ ಮುಕ್ತಿ ಮೋರ್ಚಾ ಸರ್ಕಾರ ಬಂದ ನಂತರ ಅವರ ಮೇಲಿನ ಮೊಕದ್ದಮೆಯನ್ನು ವಾಪಾಸ್ ಪಡೆಯಲಾಯಿತು. ಇದೀಗ ಪುನಃ ಎಲ್ಗರ್ ಪರಿಷದ್ ಮೊಕದ್ದಮೆಯಲ್ಲಿ ಸ್ವಾಮಿ ಅವರನ್ನು NIA ಬಂದಿಸಿದೆ. ಅವರ ವಿರುದ್ದ ಚಾರ್ಜ್‌ಶೀಟ್ ಕೂಡಾ ದಾಖಲಿಸಲಾಗಿದೆ.










