ಡಾ ಬಿ ಆರ್ ಅಂಬೇಡ್ಕರ್ ಜೀವನಾಧಾರಿತ ʼಮಹಾನಾಯಕʼ ಧಾರವಾಹಿಗೆ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿದ್ದಂತೆಯೇ ಧಾರವಾಹಿ ಪ್ರಸಾರ ನಿಲ್ಲಿಸುವಂತೆ ಬೆದರಿಕೆ ಕರೆಗಳು ಬರುತ್ತಿದೆ. ಇದನ್ನು ಖುದ್ದು ಝೀ ಚಾನೆಲ್ ಮುಖ್ಯಸ್ಥ ರಾಘವೇಂದ್ರ ಹುಣಸೂರು ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ.
“ಮಹಾನಾಯಕ ಧಾರಾವಾಹಿಯ ಪ್ರಸಾರವನ್ನು ನಿಲ್ಲಿಸುವಂತೆ ಮಧ್ಯರಾತ್ರಿಯಲ್ಲಿ ಕರೆಗಳು ಮತ್ತು ಸಂದೇಶಗಳು ಬರುತ್ತಿವೆ. ಇದು ಬೆದರಿಕೆಯಂತೆ ತೋರುತ್ತಿದೆ. ಆದರೆ ನಾವು ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮಹಾನಾಯಕ ಮುಂದುವರೆಯುತ್ತದೆ. ಇದು ಮುಂದುವರೆಯುವುದು ನಮ್ಮ. ಇದರಲ್ಲಿ ನನ್ನ ವೈಯಕ್ತಿಕ ಪ್ರೀತಿಯೂ ಸೇರಿದೆ. ಇದನ್ನು (ಮಹಾನಾಯಕ ಧಾರವಾಹಿಯನ್ನು) ಒಂದು ಸಮಸ್ಯೆ ಎಂದು ನೀವು ಪರಿಗಣಿಸಿದರೆ, ವಾಸ್ತವದಲ್ಲಿ ಸಮಾಜಕ್ಕೆ ನೀವೇ ಒಂದು ಸಮಸ್ಯೆ! ಜೈ ಭೀಮ್” ಎಂದು ಝೀ ಕಾರ್ಯನಿರ್ವಾಹಕ ರಾಘವೇಂದ್ರ ಹುಣಸೂರು ಬರೆದಿದ್ದಾರೆ.
— Raghavendra Hunsur (@vishvamukhi) September 3, 2020




ಅಂಬೇಡ್ಕರ್ ಅವರ ಬದುಕಿನ ಕತೆ ಮಹಾನಾಯಕ ಧಾರಾವಾಹಿಯನ್ನು ನಿಲ್ಲಿಸುವಂತೆ ಝಿ ಟಿ.ವಿ ಬ್ಯುಸಿನೆಸ್ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರಿಗೆ…
Posted by Sanathkumar Belagali on Thursday, September 3, 2020

ಇದು ಪ್ರಸ್ತುತ ಕರ್ನಾಟಕದ ಬಹುತೇಕ ನಗರ, ಬಡಾವಣೆ ಮತ್ತು ಹಳ್ಳಿಗಳಲ್ಲಿ ಕಾಣಬರುತ್ತಿರುವ ಚಿತ್ರ.
ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್‌ರವರ…
Posted by Dharmesh on Thursday, September 3, 2020
2019 ರ ನವೆಂಬರ್‌ನಲ್ಲಿ ಶುರುವಾದ ಮಹಾನಾಯಕ ಧಾರವಾಹಿ ಕನ್ನಡಕ್ಕೆ ಡಬ್ ಆಗಿ ಕನ್ನಡದಲ್ಲೂ ವ್ಯಾಪಕ ವೀಕ್ಷಕರನ್ನು ಪಡೆದಿತ್ತು. ಅಂಬೇಡ್ಕರ್ ಅವರ ಜೀವನಗಾಥೆಯನ್ನು ಧಾರವಾಹಿ ಮೂಲಕ ತೋರಿಸುತ್ತಿರುವುದನ್ನು ರಾಜ್ಯದ ಜನರು ಸ್ವಾಗತಿಸಿದ್ದರು. ಯಾವುದೇ ಒಂದು ಸಿನೆಮಾಗಳಿಗಿಂತಲೂ ಹೆಚ್ಚು ಬ್ಯಾನರ್, ಕಟೌಟ್‌ಗಳು ತಲೆಯೆತ್ತಿದವು. ಖಾಸಗಿ ಚಾನೆಲ್‌ವೊಂದರ ಧಾರಾವಾಹಿಯೊಂದಕ್ಕೆ ವೀಕ್ಷಕರೇ ಇಷ್ಟೊಂದು ಪ್ರಮಾಣದಲ್ಲಿ ಪ್ರಚಾರ ನೀಡುತ್ತಿರುವುದು ಇದೇ ಮೊದಲು. ಅಷ್ಟರ ಮಟ್ಟಿಗೆ ಜ಼ೀ ಕನ್ನಡ ವಾಹಿನಿಯ ʼಮಹಾನಾಯಕʼ ಧಾರವಾಹಿ ಜನರ ಮನಸ್ಸನ್ನು ಗೆದ್ದಿತ್ತು.
ಮಹಾನಾಯಕನ ಪ್ರಸಾರಕ್ಕೆ ಬೆದರಿಕೆ ಕರೆಗಳು ಬರುತ್ತಿದೆಯೆಂದು ಚಾನೆಲ್ ಮುಖ್ಯಸ್ಥ ಹೇಳುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣದ ಬಳಕೆದಾರರು ʼಮಹಾನಾಯಕʼನ ಬೆಂಬಲಕ್ಕೆ ನಿಂತಿದ್ದಾರೆ. ಝೀ ತಂಡದ ಪರ ನಾವಿದ್ದೇವೆ ಎಂದು ಘೋಷಿಸಿಕೊಂಡಿದ್ದಾರೆ.
#ಮಹಾನಾಯಕ ನ ಜೊತೆ ನಾವೆಲ್ಲ ಇದ್ದೇವೆ
ಮಹಾನಾಯಕ ಧಾರಾವಾಹಿ ನಿಲ್ಲಿಸುವಂತೆ ಬೆದರಿಕೆ ಕರೆಗಳು, ಸಂದೇಶಗಳು ಜೀ ಕನ್ನಡ ವಾಹಿನಿಗೆ ಬರುತ್ತಿವೆಯಂತೆ….
Posted by ರಘೋತ್ತಮ ಹೊ.ಬ on Thursday, September 3, 2020
ಮಹಾನಾಯಕ ಧಾರವಾಹಿ ವಿರುದ್ಧ ದುಷ್ಕರ್ಮಿಗಳ ತಂಡ ಈ ಹಿಂದೆಯೂ ದುಷ್ಕೃತ್ಯ ನಡೆಸಿತ್ತು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಎಸ್.ಐ. ಹೊನ್ನಲಗೆರೆ ಗ್ರಾಮದಲ್ಲಿ ಬಾಬಾಸಾಹೇಬರ ಮಹಾನಾಯಕ ಧಾರವಾಹಿಗೆ ಸ್ವಾಗತಿಸಿ ಹಾಕಿದ್ದ ಫ್ಲೆಕ್ಸ್ ಸುಟ್ಟಿದ್ದರು. ಅಲ್ಲದೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಯಲ್ಲಡಗಿ ಗ್ರಾಮದಲ್ಲಿ ಕೂಡಾ ಮಹಾನಾಯಕ ಫ್ಲೆಕ್ಸ್‌ಗೆ ಕಲ್ಲು ತೂರಿ ಹಾನಿಗೊಳಿಸಿದ್ದರು.
